ದಾವಣಗೆರೆ: ‘ಭೂ ಸುಸ್ಥಿರತೆ ಮತ್ತು ಅಧಿಕ ಇಳುವರಿ’ ಅಂಶಗಳನ್ನು ತಿಳಿಸುವ ಭೂಚೇತನ ಯೋಜನೆಯನ್ನು ಅನುಷ್ಠಾನಗೊಳಿಸಲು ಫಿಲಿಪೀನ್ಸ್ ದ್ವೀಪ ರಾಷ್ಟ್ರ ಮುಂದಾಗಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಫಿಲಿಪೀನ್ಸ್ ಜಲ ಮತ್ತು ಭೂ ಸಂಪನ್ಮೂಲ ನಿರ್ವಹಣೆ ವಿಭಾಗದ ಮುಖ್ಯಸ್ಥ ತೆರೆಸಿಟಾ ಸಾಂಡೊವಲ್ ಹೇಳಿದರು.

ಸಮೀಪದ ಕಾಡಜ್ಜಿಯಲ್ಲಿನ ಕೃಷಿ ತರಬೇತಿ ಸಂಶೋಧನಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಅವರು ಕೃಷಿ ತಾಂತ್ರಿಕ ಅಧಿಕಾರಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯ ಹಂಚಿಕೊಂಡರು.

‘ಫಿಲಿಪೀನ್ಸ್ ಕೇವಲ 70 ಸಾವಿರ ಹೆಕ್ಟೇರ್ ಭೂ ಪ್ರದೇಶ ಹೊಂದಿದೆ. ಅದರಲ್ಲಿ ಕೇವಲ 10 ಸಾವಿರ ಹೆಕ್ಟೇರ್ ಮಾತ್ರ ಭೂಮಿಯನ್ನು ಕೃಷಿಗೆ ಒಳಪಡಿಸಲಾಗಿದೆ. ಆದರೆ, ಇಳುವರಿ ಪಡೆಯುವುದು ಈ ರಾಷ್ಟ್ರಕ್ಕೆ ಅಸಾಧ್ಯವಾಗುತ್ತಿದೆ.

ಇಳುವರಿ ಸಮಸ್ಯೆ ಎಷ್ಟಿದೆ ಎಂದರೆ ಅಲ್ಲಿನ ರೈತ ಒಂದು ಹೆಕ್ಟೇರ್ ಪ್ರದೇಶದಲ್ಲಿ ₨ 500 ಡಾಲರ್ ವೆಚ್ಚ ಭರಿಸಿ ಬೆಳೆದ ಕಬ್ಬಿನ ಬೆಳೆಯಿಂದ ಕೇವಲ 10 ಟನ್ ಮಾತ್ರ ಇಳುವರಿ ಪಡೆಯಲು ಸಾಧ್ಯವಾಗುತ್ತಿದೆ. ವೆಚ್ಚ ಮಾಡಿದಷ್ಟೇ ಆದಾಯ ಸಿಗುತ್ತಿದೆ. ರೈತರ ಶ್ರಮಕ್ಕೆ ಯಾವುದೇ ಪ್ರತಿಫಲ ಸಿಗುತ್ತಿಲ್ಲ. ಹಾಗಾಗಿ, ಫಿಲಿಪೀನ್ಸ್ ರಾಷ್ಟ್ರ ಭೂಚೇತನ ಯೋಜನೆ ಅಳವಡಿಸಿಕೊಂಡಿರುವ ದಾವಣಗೆರೆ ಜಿಲ್ಲೆಯತ್ತ ಆಕರ್ಷಿತವಾಗಿದೆ. ಭೂಚೇತನ ಯೋಜನೆಯಲ್ಲಿ ಅಳವಡಿಸಿಕೊಂಡಿರುವ ತಾಂತ್ರಿಕ ಅಂಶಗಳ ಮಾಹಿತಿಯನ್ನು ರೈತರಿಂದ ಮತ್ತು ಅಧಿಕಾರಿಗಳಿಂದ ಪಡೆದುಕೊಂಡಿದೆ’ ಎಂದು ಹೇಳಿದರು.

‘ನಮ್ಮ ರಾಷ್ಟ್ರ ವರ್ಷದಲ್ಲಿ 20 ಸಲ ಚಂಡ ಮಾರುತದ ಹೊಡೆತಕ್ಕೆ ಸಿಲುಕುತ್ತದೆ. 6 ಬಾರಿ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತದೆ. ಇಂಥ ಹವಾಮಾನದಲ್ಲಿ ಕೃಷಿ ಮಾಡುವುದು ಸಾಹಸವಾಗಿಬಿಟ್ಟಿದೆ. ಚಂಡಮಾರುತ ಮತ್ತು ಪ್ರಕೃತಿ ವಿಕೋಪಕ್ಕಿಂತ ನಮಗೆ ಭೂಸಾರ ಮತ್ತು ಇಳುವರಿ ಕುಂಠಿತ ದೊಡ್ಡ ಸಮಸ್ಯೆಯಾಗಿದೆ. ‘ಭತ್ತ’ ಪ್ರಮುಖ ಆಹಾರ ಬೆಳೆ. ತೆಂಗು, ತರಕಾರಿ, ಮಾವು ಯಥೇಚ್ಛವಾಗಿ ಬೆಳೆದರೂ, ಇಳುವರಿಯಲ್ಲಿ ಯಶಸ್ಸು ಕಾಣುತ್ತಿಲ್ಲ.

ಕರ್ನಾಟಕ ರೈತರು ಕೃಷಿ ನಿಪುಣರಾಗಿದ್ದಾರೆ. ಅವರಿಗೆ ಸರ್ಕಾರ ಸಬ್ಸಿಡಿ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ದಾವಣಗೆರೆ ಜಿಲ್ಲೆಯ ರೈತರು ಅಳವಡಿಸಿಕೊಂಡಿರುವ ಕೃಷಿ ಯೋಜನೆ ಅಂಶಗಳನ್ನು ನಮ್ಮ ರಾಷ್ಟದಲ್ಲೂ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ವಿವರಿಸಿದರು.

ನಂತರ ಅವರು ಭೂ ಚೇತನ ಯೋಜನೆ ಅಳವಡಿಸಿ ಕೊಂಡಿರುವ ಕಾಡಜ್ಜಿಯ ಸುತ್ತಮುತ್ತಲಿನ ರೈತರ ಹೊಲಗಳಿಗೆ ಭೇಟಿ ನೀಡಿದ ತಂಡ ಶೇಂಗಾ, ಕಬ್ಬು ಕೃಷಿ ಬಗ್ಗೆ ಮಾಹಿತಿ ಪಡೆದರು. ಜಂಟಿ ಕೃಷಿ ನಿರ್ದೇಶಕ ವಿ. ಸದಾಶಿವ ತಂಡದ ಅಧಿಕಾರಿಗಳಿಗೆ ಭೂಚೇತನ ಯೋಜನೆ ಕುರಿತ ಮಾಹಿತಿ ಒದಗಿಸಿದರು. ಫಿಲಿಪೀನ್ಸ್ ಕೃಷಿ ವಿಜ್ಞಾನಿಗಳ ತಂಡದಲ್ಲಿ ಜುನೆಲ್ ಬಿ. ಸೋರಿಯಾನೊ, ಡಾಂಟೆ ಗಬಟ್ಬಟ್, ಅಬ್ರಹಾಂ ಯಾಂಜೆ, ಅಥೆಲೊ ಕ್ಯಾಪನೊ, ಸ್ಯಾಮುಯೆಲ್ ಕಂಟ್ರೆರಾಸ್, ಲಿಯೋನಾರ್ಡೊ ಲೊಂಡಿಯಾ, ಜೂಲಿಯಸ್ ಅಗಸಾನೋಬ್ರಗಡೊ, ಡೆನ್ನಿಸ್ ಬಿಹಿಸ್, ರಿಕ್ಟಿಬರ್ಟ್ ಪಮುನಗ್, ಗ್ಲೋರಿಯಾ ಬೊರ್ಜಾ, ಜಾನೆಟ್ ಡಿ ಲಿಯೊ ವಿಲ್ಲಮರ್, ಡಾ.ಸುಜೆಟ್ ಲಿನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.