ತುಮಕೂರು: ಕಾರಾಗೃಹದ ಮೇಲೆ ದಾಳಿ ನಡೆದಾಗಲೆಲ್ಲ ಗಾಂಜಾ ಮಾತ್ರ ತಪ್ಪದೆ ಸಿಗುತ್ತದೆ. ಜೈಲ್ಲಲಿ ಇರೋರ್ಗೆ ಬೇಕೆ ಬೇಕು. ಸೆಂಟ್ರಿಗೆ ನೂರು ರೂಪಾಯಿ ಕೊಟ್ಟರೆ, ಒಳಗಡೆ ಏನು ಬೇಕಾದ್ರೂ ತಗೋಂಡು ಹೋಗಬಹುದು. ಯಾರು ಕೇಳೋದಿಲ್ಲ. ಹೀಗಂತ, ನಗರದಲ್ಲಿ ಹುಡುಗರು ರಾಜಾರೋಷವಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ.

ಈಚೆಗಷ್ಟೇ ತುಮಕೂರು ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆದಾಗ ಕೈದಿಗಳ ಬಳಿ ಗಾಂಜಾ ಸಿಗಲಿಲ್ಲ ಎಂದು ಹೇಳಿಕೆ ಕೊಟ್ಟು ಪೊಲೀಸರು ತಿಪ್ಪೆ ಸಾರಿಸಿಬಿಟ್ಟರು. ಆದರೆ ಒಳಹೊಕ್ಕು ವಿಚಾರಿಸಿದರೆ ವಾಸ್ತವ ಸ್ಥಿತಿಯೇ ಬೇರೆ ಇರುವುದು ಗೋಚರಿಸುತ್ತದೆ.

ಕಾರಾಗೃಹದಲ್ಲಿರುವ ಬೆಂಗಳೂರಿನ ಕುಖ್ಯಾತ ರೌಡಿಗಗಳು, ನಗರಸಭೆ ಸದಸ್ಯ ಅಂಜನಿ ಕೊಲೆ ಪ್ರಕರಣದಲ್ಲಿ ಜೈಲುಸೇರಿರುವ ಪ್ರಮುಖ ರೌಡಿಗಳೆಲ್ಲರೂ ಗಾಂಜಾ ವ್ಯಸನಿಗಳು. ಇಂತಹವರು ಜೈಲಿನಿಂದಲೇ ದೂರವಾಣಿ ಕರೆಮಾಡಿ ಗಾಂಜಾ ಪೂರೈಸುವಂತೆ ಸೂಚಿಸುತ್ತಾರೆ. ಹೊರಗಿರುವ ರೌಡಿಗಳ ಸಹಚರರು ಜೈಲಿಗೆ ಗಾಂಜಾ ಪೂರೈಸುತ್ತಾರೆ.

ನಗರದಲ್ಲಿ ಗಾಂಜಾ ಮಾರಾಟ ಜಾಲ ವ್ಯಾಪಕವಾಗಿ ಹರಡಿದೆ. ಪರಿಚಿತರು, ದಿನನಿತ್ಯ ಗಾಂಜಾ ಬಳಸುವವರು ದೂರವಾಣಿ ಕರೆ ಮಾಡಿದರೆ ಇರುವ ಜಾಗಕ್ಕೆ ತಂದುಕೊಟ್ಟು ಹಣ ಪಡೆಯುತ್ತಾರೆ. ಚಿಕ್ಕಪೇಟೆ ವ್ಯಕ್ತಿಯೊಬ್ಬರು `ಫುಲ್ಟೈಂ' ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಚಿತರು ದೂರವಾಣಿ ಕರೆ ಮಾಡಿದರೆ ಸ್ಥಳಕ್ಕೆ ಬಂದು ಕೇಳಿದಷ್ಟು ಗಾಂಜಾ ಕೊಡುತ್ತಾರೆ.

ಜೈಲಿನಲ್ಲಿರುವ ಕುಖ್ಯಾತ ಪಾತಕಿಗಳಿಗೂ ಇವರೇ ಗಾಂಜಾ ಸರಬರಾಜು ಮಾಡುತ್ತಿದ್ದಾರೆ ಎನ್ನುವ ಗುಮಾನಿಯನ್ನು ಕೆಲವು ಗಾಂಜಾ ವ್ಯಸನಿಗಳು ವ್ಯಕ್ತಪಡಿಸುತ್ತಾರೆ. ಇವರಲ್ಲಿ ಬಹುತೇಕರು ಪ್ರತಿಷ್ಠಿತ ಕಾಲೇಜುಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎನ್ನುವುದು ಗಮನಾರ್ಹ ಸಂಗತಿ.

ಗಾಂಜಾ ಮತ್ತಿನಲ್ಲೇ: ಸಾರ್ವಜನಿಕ ಸ್ಥಳದಲ್ಲೇ ಗಾಂಜಾ ಬಳಸಿದರೂ ಯಾರಿಗೂ ಅನುಮಾನ ಬರದ ತಂತ್ರವನ್ನು ಯುವಕರು ಕಂಡುಕೊಂಡಿದ್ದಾರೆ. ಸಿಗರೇಟ್ನಲ್ಲಿರುವ ತಂಬಾಕನ್ನು ಸ್ವಲ್ಪ ಖಾಲಿ ಮಾಡಿ ಗಾಂಜಾ ಸೊಪ್ಪನ್ನು ತುಂಬಿ ಸಿಗರೇಟ್ ಸೇದಿದಂತೆ ಗಾಂಜಾ ಸೇದುತ್ತಾರೆ. ಆದರೆ ಹೊಗೆ ವಾಸನೆ ಮಾತ್ರ ಕೊಂಚ ಭಿನ್ನ. ಎಷ್ಟೇ ಮುಚ್ಚಿಟ್ಟರೂ ಅನುಭವಸ್ಥರು ಪತ್ತೆ ಹಚ್ಚಬಹುದು ಎಂದು ವ್ಯಸನಿಯೊಬ್ಬನ ಸ್ನೇಹಿತ ಸತ್ಯವನ್ನು ಬಿಚ್ಚಿಟ್ಟ.

`ಗಾಂಜಾ ಸೇದಿದರೆ ಏನ್ ಮಾಡ್ತ ಇದ್ದೀವಿ ಅನ್ನೋದು ಗೊತ್ತಾಗೋದಿಲ್ಲ. ಮೊದಲೆಲ್ಲ ಬೇಕಾದಷ್ಟು ಸೇದುತ್ತಿದ್ದರೆ ಈವಾಗ ದಿನಕ್ಕೆರಡು ಧಂ ಹೊಡೆಯುವಷ್ಟರಲ್ಲಿ ಸುಸ್ತಾಗುತ್ತೆ. ಎದೆ ಮೊದಲಿನಷ್ಟು ಸ್ಟ್ರಾಂಗ್ ಇಲ್ಲ. ಊಟ ಇಲ್ದಿದ್ರೂ ಪರ್ವಾಗಿಲ್ಲ, ಧಂ ಇಲ್ಲ ಅಂದ್ರೆ ಆಗಲ್ಲ' ಎಂದು ನಾಲ್ಕೈದು ವರ್ಷದಿಂದ ಇದೇ ಕೆಲಸದಲ್ಲಿ ತೊಡಗಿರುವ ವ್ಯಸನಿಯೊಬ್ಬ ವಿವರಿಸಿದ.

ಗಾಂಜಾ ಸೇದೋ ವಿಷಯ ಮನೆಯವರಿಗೆ ಗೊತ್ತಿಲ್ವ ಎಂದು ಪ್ರಶ್ನಿಸಿದರೆ, `ಮೊದಲು ಗೊತ್ತಿರಲಿಲ್ಲ ಈಚೆಗೆ ಗೊತ್ತಾಯ್ತು. ಪಾಕೆಟ್ ಮನಿ ಕಟ್ ಮಾಡಿದ್ದಾರೆ. ಆದ್ರೂ ನನ್ ಕೈಲಿ ಬಿಡಕ್ಕೆ ಆಗ್ತಿಲ್ಲ. ಯಾರ್ ಹತ್ರನಾದ್ರೂ ಒಂದ್ ನೂರ್ ರೂಪಾಯಿ ಕಿತ್ತಕೊಂಡ್ ಹೋಗಿ ತಂದು ಸೇದಲೇಬೇಕು. ಇಲ್ಲಾಂದ್ರೆ ಒಂಥರಾ ಅನ್ನ್ಸುತ್ತೆ. ಒಂದು ಪಾಕೆಟ್ ತಂದ್ರೆ ಒಂದು ವಾರ ಯಾವ್ದೆ ಚಿಂತೆಯಿಲ್ಲದೆ ಕಳೀತೀನಿ. ಪಾಕೆಟ್ನಲ್ಲಿರೋದು ಮುಗಿಯೋವಷ್ಟರಲ್ಲಿ ಇನ್ನೊಂದು ನೂರ್ ರೂಪಾಯಿ ಕಿತ್ತರೆ ಆಯ್ತು. ರೆಗ್ಯುಲರ್ ಆಗಿ ಮಾಲು ತಂದ್ರೂ ನಮಗೆ ಸಾಲ ಕೊಡೋದಿಲ್ಲ. ಹತ್ತೋ ಇಪ್ಪತ್ತೋ ಕಮ್ಮಿ ಇದೆ ಅಂದ್ರೆ, ಇಲ್ಲೇ ಕುಂತ್ಕೊಂಡು ಎರಡ್ ಧಂ ಹೊಡೆದು ಹೋಗಿ ಎನ್ನುತ್ತಾರೆ. ಸಾಲ ಮಾತ್ರ ಕೊಡುವುದಿಲ್ಲ' ಎನ್ನುತ್ತಾರೆ.

ತುಮಕೂರಿನಲ್ಲಿ ಗಾಂಜಾ ಬೆಳಿತ್ತಾರಾ? ಎಂದು ಕೇಳಿದ್ರೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ರೋಡ್ನಲ್ಲಿ ಹೊಸಕೆರೆಯಿಂದ ಬಲಕ್ಕೆ 2 ಕಿ.ಮೀ. ಒಳಗೆ ಹೋದ್ರೆ ಕಿತಗಾರ್ಲಹಳ್ಳಿ ಅನ್ನೊ ಊರು ಸಿಗುತ್ತೆ. ಅಲ್ಲಿ ಗಾಂಜಾ ಬೆಳೀತಾರೆ. ಅದು ಬಿಟ್ರೆ ಬೇರೆ ಎಲ್ಲಿ ಬೆಳಿತಾರೆ ಅನ್ನೋದು ಗೊತ್ತಿಲ್ಲ, ಪರಿಚಯ ಇದ್ದವರು ಹೋದ್ರೆ ಮಾತ್ರ ಮಾಲು ಈಚೆ ತೆಗಿಯೋದು. ಇಲ್ಲಾವಾದರೆ ಏನು ಸಿಗಲ್ಲ. ಒಂದ್ಎರಡ್ ಸಾರಿ ಹೋದ್ರೆ ಆಮೇಲೆ ಎಲ್ಲ ಸಲೀಸಾಗಿ ನಡೆಯುತ್ತೆ ಎಂದು ಮತ್ತೊಬ್ಬ ವ್ಯಸನಿ ಗಾಂಜಾ ಸಿಗುವ ವಿಚಾರ ವಿವರಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.