ಕುಷ್ಟಗಿ: ನಾಡಿನ ಮಠಗಳು ಧರ್ಮದ ಜೊತೆಗೆ ಶೈಕ್ಷಣಿಕ ಜಾಗೃತಿ ಮೂಡಿಸುವ ಮೂಲಕ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿವೆ ಎಂದು ಕೊಪ್ಪಳದ ಸರ್ಕಾರಿ ಸಹಾಯಕ ಅಭಿಯೋಜಕ ಬಿ.ಎಸ್.ಪಾಟೀಲ ಮಂಗಳವಾರ ಹೇಳಿದರು.

ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿನ ರುದ್ರಮುನಿ ಶಿವಾಚಾರ್ಯ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಠಗಳಲ್ಲಿ ಪ್ರಸಾದ ಸೇವಿಸಿ ವಿದ್ಯೆ ಕಲಿತ ಎಷ್ಟೋ ಜನ ಉನ್ನತ ಹುದ್ದೆಗಳನ್ನು ಪಡೆದು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ ವೀರೇಶ ಬಿರಾದಾರ ಮಾತನಾಡಿ, “ಬೆಳಕಿನ ಅಭಾವದಲ್ಲೇ ಪರಿಶ್ರಮದ ಕಲಿಯುವಿಕೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್, ಎಂ.ವಿಶ್ವೇಶ್ವರಯ್ಯ ಅಂಥ ಮಹಾನ್ ವ್ಯಕ್ತಿಗಳು ಜಗತ್ತಿಗೇ ಬೆಳಕಾದರು” ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಚಳಗೇರಿಯ ವಿರೂಪಾಕ್ಷಲಿಂಗ ಶಿವಾಚಾರ್ಯ, ವೀರಸಂಗಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿದ್ಧರಾಮಯ್ಯ ಸಾಲಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಕೀಲ ವಿ.ಎಂ.ಭೂಸನೂರಮಠ, ಮುಖ್ಯಶಿಕ್ಷಕ ಬಸವಂತಪ್ಪ, ದಯಾನಂದಬಾಬು, ಚನ್ನಬಸಪ್ಪ ಬಳ್ಳಾರಿ, ಬಿ.ಎಸ್.ಹಿರೇಮಠ, ಗುಂಡಪ್ಪ ಮಾಸ್ತರ ಗುಣಕಿ, ಗುರುಪಾದಯ್ಯ ಹಿರೇಮಠ, ರಾಜು ನಾಯಕ, ಉಮೇಶ ಮೇಳಿ ಮಾತನಾಡಿದರು.

ಪ್ರಹ್ಲಾದ ಕುಲಕರ್ಣಿ, ಗಂಗಾವತಿ ಕೃಷಿವಿಜ್ಞಾನ ಕೇಂದ್ರದ ವಿಜ್ಞಾನಿ ರಾಜುಕುಮಾರ ನೆಗಳೂರು, ಗುರುಪ್ರಸಾದ ಗೋತಗಿ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.