ಮಂಗಳವಾರ, ಮೇ 11, 2021
19 °C

ಧಾನ್ಯ ಸಂಗ್ರಹಕ್ಕೆ ಸೈಲೊ ಕಣಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಹಾರ ಧಾನ್ಯಗಳನ್ನು ಬೆಳೆಯುವುದು ಎಷ್ಟು ಮುಖ್ಯವೋ ಬೆಳೆದದ್ದನ್ನು ಸಮರ್ಪಕವಾಗಿ ಸಂಗ್ರಹಿಸುವುದೂ ಅಷ್ಟೇ ಮುಖ್ಯ. ಹಿಂದೆಲ್ಲ ರೈತರು ಇದಕ್ಕಾಗಿಯೇ ಕಣಜಗಳನ್ನು ನಿರ್ಮಿಸುತ್ತಿದ್ದರು.ಕಾಲ ಬದಲಾದಂತೆ ಅಕ್ಕಿ ಗಿರಣಿಗಳು, ಸರ್ಕಾರಿ ಇಲಾಖೆಗಳು ರೈತರಿಂದ ದೊಡ್ಡ ಪ್ರಮಾಣದಲ್ಲಿ ಧಾನ್ಯವನ್ನು ಖರೀದಿಸಿ ದೊಡ್ಡ ದೊಡ್ಡ ಗೋದಾಮುಗಳಲ್ಲಿ ಸಂಗ್ರಹಿಸಿಡುತ್ತಿವೆ.ಆದರೆ ಇಲ್ಲೂ ಕೂಡ ಅಮೂಲ್ಯ ಆಹಾರ ಧಾನ್ಯ ನಾನಾ ಕಾರಣದಿಂದ ನಷ್ಟವಾಗುತ್ತಿದೆ. 2010ರ ಜೂನ್ ಹೊತ್ತಿಗೆ ಭಾರತ ಆಹಾರ ನಿಗಮ ಸಂಗ್ರಹಿಸಿದ್ದ 6 ಕೋಟಿ ಟನ್ ಆಹಾರ ಧಾನ್ಯಗಳ ಪೈಕಿ 1.77 ಕೋಟಿ ಟನ್‌ಗಳನ್ನು ಬಯಲಿನಲ್ಲಿಯೇ ಸಂಗ್ರಹಿಸಿ ಇಡಲಾಗಿತ್ತು. ಇವಕ್ಕೆ ಸರಿಯಾದ ಗೋದಾಮುಗಳೇ ಇರಲಿಲ್ಲ.ಈ ಹಿನ್ನೆಲೆಯಲ್ಲಿ ಧಾನ್ಯ ಸಂಗ್ರಹಿಸಲು ಅಮೆರಿಕ, ಯುರೋಪ್‌ನಲ್ಲಿ ಅನುಸರಿಸುತ್ತಿರುವ ಗ್ಯಾಲ್ವನೈಸ್ಡ್ ಸ್ಟೋರೇಜ್ ಸಿಸ್ಟ್ಂಗಳನ್ನು ನಮ್ಮ ದೇಶದಲ್ಲಿ ಇನ್ನೂ ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ಫೌಲರ್ ವೆಸ್ಟ್ರಪ್ (ಇಂಡಿಯಾ) ಕಂಪೆನಿಯ ಬೆಂಗಳೂರು ಶಾಖೆಯ ಹಿರಿಯ ಮಾರುಕಟ್ಟೆ ವ್ಯವಸ್ಥಾಪಕ ಡಿ.ಡಿ. ಕೋಡಿಟ್ಕರ್. ಈ ಕಂಪೆನಿ ಗ್ಯಾಲ್ವನೈಸ್ಡ್ ಸೈಲೊ ನಿರ್ಮಾಣದಲ್ಲಿ ಪರಿಣತಿ ಹೊಂದಿದೆ.ಗ್ಯಾಲ್ವನೈಸ್ಡ್ ಸೈಲೊಗಳನ್ನು ದೀರ್ಘಕಾಲದ ವರೆಗೆ ಸಗಟು ಧಾನ್ಯ ಸಂಗ್ರಹಣೆಗೆ ಬಳಸಬಹುದು. ಇದನ್ನು ಗ್ಯಾಲ್ವನೈಸ್ಡ್ ಉಕ್ಕಿನಿಂದ ನಿರ್ಮಿಸಲಾಗುತ್ತದೆ. ಸುಲಭವಾಗಿ ಜೋಡಿಸಲು ಅನುಕೂಲವಾಗುವಂತೆ ಬೋಲ್ಟ್ ವ್ಯವಸ್ಥೆ ಇರುತ್ತದೆ.

 

ಅಲ್ಲದೆ ಲೆವಲ್ ಸ್ವಿಚ್, ವಾತಾನುಕೂಲ ವ್ಯವಸ್ಥೆ, ಉಷ್ಣಾಂಶ ಮೇಲ್ವಿಚಾರಣೆ, ಗಾಳಿಯಾಡುವ ವ್ಯವಸ್ಥೆ, ಸ್ವೀಪ್ ಅಗರ್‌ಗಳೂ ಇರುವುದರಿಂದ ಸಂಗ್ರಹಿಸಿದ ಧಾನ್ಯ ಹಾಳಾಗುವ ಸಂಭವ ಕಡಿಮೆ. ಗ್ಯಾಲ್ವನೈಸ್ಡ್ ಸೈಲೊಗಳನ್ನು ಅಕ್ಕಿ ಗಿರಣಿಗಳೂ ಅಳವಡಿಸಿಕೊಳ್ಳಬಹುದು.ಬಕೆಟ್ ಎಲೆವೆಟರ್, ಕನ್ವೇಯರ್, ಡಿ ಸ್ಟೋನರ್, ಡ್ರೈಯರ್ ಮುಂತಾದ ಉಪಕರಣಗಳ ಜತೆ ಜೋಡಿಸಲು ಸಾಧ್ಯ. ಇದರಿಂದ ಸಂಗ್ರಹಣಾ ವೆಚ್ಚವೂ ತಗ್ಗಿ ವೈಜ್ಞಾನಿಕವಾಗಿ ಧಾನ್ಯವನ್ನು ಕಾಯ್ದಿಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಅಗತ್ಯಕ್ಕೆ ತಕ್ಕಂತೆ ವಿವಿಧ ಸಾಮರ್ಥ್ಯದ ಸೈಲೊಗಳು ತಯಾರಾಗುತ್ತಿವೆ.  ಮಾಹಿತಿಗೆ: kodtkar@fowlerwestrup.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.