ಮಂಗಳವಾರ, ಮೇ 18, 2021
30 °C

ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಬ್ಯಾಡಗಿ ಪಟ್ಟಣದಲ್ಲಿ ಶನಿ ವಾರ ಸುರಿದ ಧಾರಾಕಾರ ಮಳೆಗೆ ಬಸ್ ನಿಲ್ದಾಣದ ಹಿಂಭಾಗದ ವಿನಾ ಯಕ ನಗರ ಭಾಗವು ಜಲಾವೃತ ಗೊಂಡಿತ್ತು. ಇದರಿಂದ ಆಕ್ರೋಶ ಗೊಂಡ ಅಲ್ಲಿಯ ನಿವಾಸಿಗಳು ರಸ್ತೆ ತಡೆ ನಡೆಸಿ 3 ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿ ಪುರಸಭೆಯ ಗಮನ ಸೆಳೆದಿದ್ದರು.ಈ ಹಿನ್ನೆಲೆಯಲ್ಲಿ ಶನಿವಾರ ಹಳ್ಳಕ್ಕೆ ಹಾಕಿದ ಅನಧಿಕೃತ ಬಾಂದಾರಗಳನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದು ಭಾನುವಾರವೂ ಮುಂದುರೆದಿತ್ತು. ಪುರಸಭೆ ಮುಖ್ಯಾಧಿಕಾರಿ ಎ.ಬಿ.ಹಾಳಕಲ್ಲಾಪೂರ, ಕಿರಿಯ ಎಂಜಿನಿ ಯರ್‌ಗಳಾದ ನಿರ್ಮಲಾ ನಾಯಕ್, ಉಮೇಶ ಹಾಗೂ ಸಿಬ್ಬಂದಿ ಯಲ್ಲಣ್ಣನವರ, ವಿ.ಎಂ.ಪೂಜಾರ ಹಾಗೂ ಇನ್ನಿತರರು ಸ್ಥಳದಲ್ಲಿದ್ದು ಬಾಂದಾರಗಳನ್ನು ತೆರವುಗೊಳಿಸಿದರು. ಪಟ್ಟಣದಲ್ಲಿ 25ಮಿ.ಮೀ ಗಿಂತಲೂ  ಹೆಚ್ಚು ಮಳೆಯಾದರೆ ಶಾನುಭೋಗರ ಹಳ್ಳದ ನೀರು, ಸುಭಾಷ ನಗರ, ವಾಲ್ಮೀಕಿ ಸಂಘ ಹಾಗೂ ವಿನಾಯಕ ನಗರಗಳಿಗೆ ನುಗ್ಗಿ ಅಲ್ಲಿಯ ನಿವಾಸಿಗಳನ್ನು ನಿದ್ದೆಗೆಡಿ ಸುತ್ತದೆ. ಸ್ವಲ್ಪು ಮಳೆಯಾ ದರೂ ಆತಂಕದಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಬಾಂದಾರಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದ್ದು ಅಲ್ಲಿನ ನಿವಾಸಿ ಗಳು ನೆಮ್ಮದಿಯ ನಿಟ್ಟುಸಿರು ಬಿಡು ವಂತಾಗಿದೆ. ಈಗಾಗಲೆ ಹಳ್ಳದ ಹೂಲು ಹಾಗೂ ಬಾಂದಾರಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ ಎಂದು ಸಿಬ್ಬಂದಿ ಯಲ್ಲಣ್ಣನವರ `ಪ್ರಜಾವಾಣಿ'ಗೆ ತಿಳಿಸಿದರು.ಇಲ್ಲಿನ ನಿವಾಸಿಗಳಿಗೆ ನೀರು ನುಗ್ಗದಂತೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿ ನಲ್ಲಿ ಕ್ರಮ ಕೈಕೊಳ್ಳಲಿದೆ ಎಂದರು.ಸವಣೂರ ವರದಿ

ಮುಂಗಾರು ಪೂರ್ವದ ಮೊದಲ ಮಳೆಗೆ ತಾಲ್ಲೂಕಿನಲ್ಲಿ ಹಾದುಹೋಗುವ ಬಾಜೀರಾಯನ ಹಳ್ಳ ಹುಚ್ಚುಹೊಳೆಯಾಗಿದೆ. ತನ್ನ ಹರಿವಿನ ಮಾರ್ಗದಲ್ಲಿ ಬರುವ ಹಲವಾರು ಸೇತುವೆಗಳನ್ನು ಮುಳುಗಿಸಿದೆ. ಇದ ರೊಂದಿಗೆ ಹಲವಾರು ಗ್ರಾಮಗಳು ತಾತ್ಕಾಲಿಕವಾಗಿ ಸಾರಿಗೆ ಸಂಪರ್ಕ ಕಳೆದುಕೊಂಡಿವೆ. ಶನಿವಾರ ಸುರಿದ ಧಾರಾಕಾರ ಮಳೆ ಕೃಷಿಕ ಸಮು ದಾಯದಲ್ಲಿ ಹರ್ಷವನ್ನು ಮೂಡಿ ಸಿದ್ದು, ಬರದ ಬವಣೆಗೆ ವಿರಾಮ ನೀಡಿದೆ.ಹಳ್ಳದ ಹಾವಳಿಯಿಂದ ತಾಲ್ಲೂಕಿನ ಮಂತ್ರವಾಡಿ, ಕಾರಡಗಿ, ಫಕ್ಕೀರ ನಂದಿಹಳ್ಳಿ, ಚಿಕ್ಕಬೂದಿಹಾಳ, ಸವೂರ ಸೇರಿದಂತೆ ಹಲವಾರು ಗ್ರಾಮಗಳ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತವಾ ಗಿದೆ. ರಸ್ತೆಗಳಲ್ಲಿನ ಹಳ್ಳಗಳಿಗೆ ಅತ್ಯಂತ ಕೆಳಮಟ್ಟದ ಸೇತುವೆ ನಿರ್ಮಿಸಲಾ ಗಿದ್ದು, ವರ್ಷದ ಮೊದಲ ಮಳೆಗೆ ಈ ಸೇತುವೆಗಳು ನೀರಿನಲ್ಲಿ ಮುಳುಗು ಹಾಕಿದೆ.ಇದರೊಂದಿಗೆ ಹಳ್ಳಗಳಲ್ಲಿ ತುಂಬಿಕೊಂಡಿರುವ ಹೂಳು ಹಾಗೂ ಮುಳ್ಳಿನ ಗಿಡಗಂಟಿಗಳೂ ನೀರಿನ ಸರಾಗ ಚಲನೆಗೆ ತಡೆಯೊಡ್ಡಿದೆ.

ಏಕಾಏಕಿ ರಸ್ತೆ ಸಂಪರ್ಕ ಕಡಿತ ಗೊಂಡ ಕಾರಣ ಮಕ್ಕಳ ಶಾಲೆಗಳಿಗೆ ಅಘೋಷಿತ ರಜೆ ನೀಡಲಾಗಿತ್ತು. ಪರಸ್ಥಳದಿಂದ ಶಾಲೆಗೆ ಆಗಮಿಸಬೇಕಾ ಗಿದ್ದ ಶಿಕ್ಷಕರೂ ತೊಂದರೆ ಅನುಭವಿ ಸಿದರು. ಶಾಲೆಗಳು ಆರಂಭಗೊಂಡ ಮರುದಿನವೇ ದ್ವಿತೀಯ ವಿಘ್ನವನ್ನು ಎದುರಿಸಿದವು. ಹೊಲಗಳ ವಡ್ಡು ಗಳಿಗೂ ನೀರಿನ ರಭಸದಿಂದ ಹಾನಿ ಗಳಾಗಿದ್ದು, ಹಲವಾರು ಸ್ಥಳಗಳಲ್ಲಿ ಹೊಲಗಳಿಗೂ ಹಳ್ಳದ ನೀರು ನುಗ್ಗಿತ್ತು.ಸವಣೂರ ತಾಲ್ಲೂಕಿನ ಮಂತ್ರ ವಾಡಿ, ಫಕ್ಕೀರನಂದಿಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ಇರುವ ಸೇತುವೆಗಳನ್ನು ಉನ್ನತೀಕರಿಸಬೇಕು. ಹಳ್ಳದ ಮಾರ್ಗ ವನ್ನು ಸ್ವಚ್ಛಗೊಳಿಸಬೇಕು ಎಂಬ ದಶಕ ಗಳ ಬೇಡಿಕೆ ಈ ವರ್ಷವೂ ಪುನಃ ಜೀವಂತಿಕೆ ಪಡೆದುಕೊಂಡಿದ್ದು, ಗ್ರಾಮೀಣ ಜನತೆ ಆಶಾಭಾವನೆ ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.