ಬುಧವಾರ, ಏಪ್ರಿಲ್ 21, 2021
23 °C

ಧುಮ್ಮಿಕ್ಕುತ್ತಿರುವ ಕನ್ನೆಗುಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲೆಡೆ ಮಳೆ ಬೀಳುತ್ತಿದೆಯೋ ಇಲ್ಲವೋ? ಆದರೆ ಭಟ್ಕಳದಲ್ಲಿ ಮಾತ್ರ ಮಳೆಗೆ ಬರವಿಲ್ಲ. ಅರ್ಧ ದಿನ ಬಿಡುವು ನೀಡಿದರೆ, ಇನ್ನರ್ಧ ದಿನ ಧೋ ಎಂದು ಸುರಿಯುತ್ತಿದೆ. ಮಳೆ, ಬಿಸಿಲಿನ ಆಟದ ನಡುವೆಯೂ ತಾಲ್ಲೂಕಿನ  ಕಸಲಗದ್ದೆ ಸಮೀಪವಿರುವ ಕನ್ನೆಗುಂಡಿ ಫಾಲ್ಸ್  ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ.ಭಟ್ಕಳದಲ್ಲಿ ಅಬ್ಬರದ ಅಲೆಗಳ ಸಮುದ್ರ, ತುಂಬಿ ಹರಿಯುವ ಕಡವಿನಕಟ್ಟ ಡ್ಯಾಂ; ಇವೆರಡನ್ನೂ ಮೀರಿಸುವ ಕನ್ನೆಗುಂಡಿ ಜಲಪಾತ, ನಿಸರ್ಗ ರಮಣೀಯ ತಾಣಗಳಲ್ಲೊಂದು.ಜೋಗದ ಐಸಿರಿಯಂತೆಯೇ ಕಾಣುವ ಈ ಮಿನಿಜೋಗದಲ್ಲೂ ರಾಜಾ, ರಾಣಿ, ರೋರರ್, ರಾಕೆಟ್‌ನಂತೆ ನಾಲ್ಕು ಕವಲುಗಳಲ್ಲಿ ಕಪ್ಪುಬಂಡೆಯ ಕಲ್ಲುಗಳ ಮೇಲಿನಿಂದ ನೀರು ಧುಮ್ಮಿಕ್ಕುತ್ತದೆ.ಜೂನ್ ಮೊದಲ ವಾರವೇ ಸರಿಯಾದ ಮಳೆ ಬಿದ್ದರೆ, ಇಷ್ಟೊತ್ತಿಗೆಲ್ಲಾ ಕನ್ನೆಗುಂಡಿ ಚೆಲುವಿನಿಂದ ಕಂಗೊಳಿಸುತ್ತಿತ್ತು. ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಸ್ವಲ್ಪ ತಡವಾಗಿ ಧುಮ್ಮಿಕ್ಕಿತ್ತಿದ್ದಾಳೆ. ಈ ಚೆಲುವನ್ನು ಇನ್ನು ಮುಂದಿನ ವರ್ಷದ ಜನವರಿ ತಿಂಗಳವರೆಗೂ ಸವಿಯಬಹುದು.ಕನ್ನೆಗುಂಡಿ ಜಲಪಾತ ವೀಕ್ಷಿಸಲು ಸ್ವಲ್ಪ ಸಾಹಸವನ್ನೇ ಮಾಡಬೇಕಾಗುತ್ತದೆ.  ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಐದಾರು ಕಿ.ಮೀ. ಕಡಿದಾದ ದಾರಿಯಲ್ಲಿ ಸಾಗಿದರೆ ಕಾನನದ ನಡುವೆ ಧುಮ್ಮಿಕ್ಕುವ ಸದ್ದಿನೊಂದಿಗೆ ಕನ್ನೆಗುಂಡಿಯನ್ನು ವೀಕ್ಷಿಸಬಹುದು. ಇಲ್ಲಿಗೆ ತೆರಳುವುದಕ್ಕೆ ಸರಿಯಾದ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿದಲ್ಲಿ ಕನ್ನೆಗುಂಡಿಯೊಂದು ಅದ್ಬುತ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.