ವಿಜಾಪುರ: ವಾಹನ ಚಾಲನಾ ಪರವಾನಿಗೆ ಪಡೆಯಲು ಅಗತ್ಯವಿರುವ ಶಾಲಾ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣಪತ್ರ ನಕಲಿಯಾಗಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಇಲ್ಲಿಯ ಕನಕದಾಸ ಬಡಾವಣೆಯಲ್ಲಿ ವಾಸವಾಗಿರುವ ಮೂಲತಃ ಅಂಕಲಗಿ ಗ್ರಾಮದ ಶ್ರೀಮಂತ ಬಸರಿಕಟ್ಟಿ, ಮುದ್ದೇಬಿಹಾಳ ತಾಲ್ಲೂಕು ಲಿಂಗದಳ್ಳಿ ಗ್ರಾಮದ ಭೀಮಪ್ಪ ಚನ್ನಪ್ಪ ದೊಡಮನಿ ಬಂಧಿತ ಆರೋಪಿತರು ಎಂದು ಅವರು ಹೇಳಿದ್ದಾರೆ.

`ವಾಹನ ಚಾಲನಾ ಪರವಾನಿಗೆ ಪಡೆಯಲು ಕನಿಷ್ಠ ವಿದ್ಯಾರ್ಹತೆಯ ಅವಶ್ಯಕತೆ ಇದೆ. ಶಾಲೆಯನ್ನೇ ಕಲಿಯದ ಹಾಗೂ ಶಾಲೆ ಅರ್ಧಕ್ಕೆ ಬಿಟ್ಟು ವಾಹನಗಳಲ್ಲಿ ಕ್ಲೀನರ್ ಮತ್ತಿತರ ಕಾರ್ಯನಿರ್ವಹಿಸುವ ಯುವಕರಿಂದ ಇವರು ರೂ.4,000 ಹಣ ಪಡೆದು ನಕಲಿ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣ ಪತ್ರ ನೀಡುತ್ತಿದ್ದರು. ಇಲ್ಲಿಯ ಕನಕದಾಸ ಬಡಾವಣೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ' ಎಂದು ಜಲನಗರ ಪೊಲೀಸ್ ಠಾಣೆಯ ಪಿಎಸ್ಐ ಉದಯರವಿ ತಿಳಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇಲ್ಲಿಯ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರ ಸಾವು
ವಿಜಾಪುರ ತಾಲ್ಲೂಕಿನ ಬಬಲೇಶ್ವರ ಹತ್ತಿರ ಎರಡು ಬೈಕ್ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಅರ್ಜುನ ಷಣ್ಮುಖಪ್ಪ ಯಕ್ಕುಂಡಿ (45) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗದಿಗೆಪ್ಪ ಅಪ್ಪಾಸಾಬ ಅಪ್ಪಣ್ಣವರ, ಆರೋಪಿ ಬಬಲಾದಿ ಗ್ರಾಮದ ರಮೇಶ ವೆಂಕಪ್ಪ ಯಡವಣ್ಣವರ ಗಾಯಗೊಂಡಿದ್ದು, ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವನ ಬಾಗೇವಾಡಿ ತಾಲ್ಲೂಕು ಮುತ್ತಗಿ ಕ್ರಾಸ್ ಹತ್ತಿರ ಜೀಪ್ ಪಲ್ಟಿಯಾಗಿ ಗಾಯಗೊಂಡಿದ್ದ ಬಸವನ ಬಾಗೇವಾಡಿಯ ಅಶೋಕ ಬಾಬು ನಾಯಕ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಪ್ರಕಾಶ ಮುದ್ದೇಬಿಹಾಳ, ಅಶೋಕ ಉಕ್ಕಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧನ: ಮುದ್ದೇಬಿಹಾಳದ ಶಿವಾಲಯ ದೇವಸ್ಥಾನದ ಹತ್ತಿರ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ ಚಿಮ್ಮಲಗಿಯ ಸುರೇಶ ಬಾಬು ಲಮಾಣಿ ಹಾಗೂ ಇತರ ಐವರನ್ನು ಬಂಧಿಸಿ, ಅವರಿಂದ ರೂ.29,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಸ್ಐ ಬಿ.ವಿ. ನ್ಯಾಮಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.