ಭಾನುವಾರ, ಜೂನ್ 13, 2021
26 °C

ನಕ್ಸಲೀಯ ಮಹಿಳಾ ನಾಯಕಿ ಶರಣಾಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓಡಿಶಾ(ಪಿಟಿಐ): ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ಮಹಿಳಾ ಮಾವೋವಾದಿ ಶನಿವಾರ ಪೊಲೀಸರಿಗೆ ಶರಣಾಗಿದ್ದಾಳೆ. ಪೊಲೀಸರು ಈಕೆಯ ತಲೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.

ಹೊಸದಾಗಿ ರಚನೆಯಾದ ಮಾವೋವಾದಿ ಗುಪ್ತೇಶ್ವರಂ ದಳಂನ ಉಪ ದಂಡನಾಯಕಿಯಾಗಿದ್ದ  (ಡೆಪ್ಯುಟಿ ಕಮಾಂಡರ್ ) ದೇವೆ ಪದ್ಯಾಮಿ ಅಲಿಯಾಸ್  ಸಂಧ್ಯಾ ಎರಡು ದಿನಗಳ ಹಿಂದೆ ದಳವನ್ನು ತ್ಯಜಿಸಿ ಪೊಲೀಸ್ ಮಹಾನಿರೀಕ್ಷಕ ವೈ. ಕೆ. ಜೆತ್ವಾ ಮತ್ತು ಪೊಲೀಸ್ ಅಧೀಕ್ಷಕ ಅಖಿಲೇಶ್ವರ್ ಸಿಂಗ್ ಎದುರು ಶರಣಾಗಿದ್ದಾಳೆ.

‘‘ಎರಡು ತಿಂಗಳ ಹಿಂದೆ ರಾಜ್ಯ ಮಾವೋವಾದಿ ಸಮಿತಿ ಸದಸ್ಯನಾಗಿದ್ದ  ಆಕೆಯ ಗಂಡ ಕೇಲ ಅನಿಲ್ ಕುಮಾರ್ ಅಲಿಯಾಸ್ ಚಂದು ಬಂಧನದ ನಂತರ ನಕ್ಸಲ್  ಶಿಬಿರವನ್ನು ತೊರೆಯಲು ಸೂಕ್ತ ಸಮಯಕ್ಕಾಗಿ ಸಂಧ್ಯಾ ಕಾಯುತ್ತಿದ್ದಳು’’ ಎಂದು ಸಿಂಗ್ ತಿಳಿಸಿದರು.

ಮಹಿಳಾ ನಾಯಕಿಯಾಗಿದ್ದರಿಂದ  ಸಂಘಟನೆಯಲ್ಲಿದ್ದ ಭಯವು ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ  ಮಾಡಿರಬಹುದು ಎಂದರು.

ಸರ್ಕಾರದ ನೀತಿಗೆ ಅನುಗುಣವಾಗಿ ಶರಣಾಗತ ಮಾವೋವಾದಿಗಳಿಗೆ ಪುನರ್ವಸತಿ ಕಲ್ಪಿಸುವಂತೆ ಆಕೆಗೂ ಪುನರ್ವಸತಿ ಕಲ್ಪಿಸಲಾಗುವುದು ಎಂದು ಸಿಂಗ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.