ಭಾನುವಾರ, ಜೂನ್ 13, 2021
23 °C

ನಗರಗಳ ಹೆಸರು: ಅತಾರ್ಕಿಕ ಕ್ರಮ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ನಗರಗಳ ಹೆಸರುಗಳನ್ನು ಬದಲಾಯಿಸಬೇಕೆಂದು ಯಾರೂ ಕೇಳುತ್ತಿಲ್ಲ (ಸಂಗತ, ಮಾ.6). ಅವನ್ನು ಸಾಂಪ್ರದಾಯಿಕ ಇಂಗ್ಲಿಷ್ ಕಾಗುಣಿತದ ಅತಾರ್ಕಿಕ  ಕ್ರಮದಲ್ಲಿ ಬರೆಯುತ್ತಿರುವುದನ್ನು ಸರಿಪಡಿಸಬೇಕಾಗಿದೆ.ಈ ಪ್ರಕ್ರಿಯೆ ಕರ್ನಾಟಕದಲ್ಲಿ ತಡವಾಗಿಯಾದರೂ ಆರಂಭವಾಗಿರುವುದು ಸ್ವಾಗತಾರ್ಹ. ಒಂದು ಭಾಷೆಯ ಉಚ್ಚಾರಣೆಯನ್ನು ಬೇರೊಂದು ಭಾಷೆಯ ಲಿಪಿಯಲ್ಲಿ ಸಂಪೂರ್ಣ ಸಮರ್ಪಕವಾಗಿ ಬರೆಯಲಾಗುವುದಿಲ್ಲ. ಮೂಲ ಉಚ್ಚಾರಣೆಗೆ ಸಮೀಪದ ಧ್ವನಿಗಳಲ್ಲಿ ಬರೆಯಬಹುದು.ಆದ್ದರಿಂದ ಕೆಲವು ರೈಲುಗಳಲ್ಲಿ ಬರೆದಿರುವಂತೆ ಬ್ಯಂಗಲೊರೆ ಮ್ಯಸೊರೆ ಎಂಬ ವಿಕೃತ ರೂಪಗಳಾಗದಂತೆ ತಡೆಯಲು ಕನ್ನಡ ಹೆಸರುಗಳನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆಯುವಾಗ ಭಾಷಾವಿಜ್ಞಾನದ ಧ್ವನಿ ಬರವಣಿಗೆಯ ಕ್ರಮವನ್ನು ಅನುಸರಿಸಬೇಕು.ಕನ್ನಡದ ಳ ಇಂಗ್ಲಿಷಿನಲ್ಲಿ ಇಲ್ಲವಾದ್ದರಿಂದ ಅದಕ್ಕೆ ಸಮೀಪ ಧ್ವನಿಯಾದ ಲ ಬಳಸುವುದು ಅನಿವಾರ್ಯ. ಕನ್ನಡದ ಸ್ವರಗಳನ್ನು ಬರೆಯುವಾಗ ಇಂಗ್ಲಿಷಿನ ಅತಾರ್ಕಿಕ ಕ್ರಮವನ್ನು ಅನುಸರಿಸಕೂಡದು. ಹೃಸ್ವ ಸ್ವರವನ್ನು ಒಂದು ಸಲ, ದೀರ್ಘವನ್ನು ಎರಡು ಸಲ ಬರೆಯುವುದು ತಾರ್ಕಿಕವಾದ ಕ್ರಮ. ಕನ್ನಡ ಹೆಸರುಗಳನ್ನು ಇಂಗ್ಲಿಷ್ ಕಾಗುಣಿತದ ಅತಾರ್ಕಿಕ ಕ್ರಮದಲ್ಲಿ ಬರೆಯಕೂಡದು.ಇದು ಒಂದು ಸಲ ಮಾತ್ರ ಮಾಡುವ ಬದಲಾವಣೆ. ಸ್ವಲ್ಪ ಖರ್ಚು, ಶ್ರಮವಾಗುವುದು ಅನಿವಾರ್ಯ. ಅದಕ್ಕೆ ಹೆದರಿ ನಮ್ಮ ಹೆಸರುಗಳ ವಿಲಕ್ಷಣ ರೂಪಗಳನ್ನು ಶಾಶ್ವತಗೊಳಿಸುವುದು ವಿವೇಕವಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.