ಬುಧವಾರ, ಏಪ್ರಿಲ್ 14, 2021
24 °C

ನಗರದಲ್ಲಿ ಇಂದು -ಜುಲೈ 21, ಶನಿವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜುಲೈ 21, ಶನಿವಾರ

ಅನಘಾ ಗಾಯನ

ಅನಘಾ ಭಟ್

ಎಂಇಎಸ್ ಕಲಾವೇದಿ: ಎಂ.ಇ.ಎಸ್. ಕಾಲೇಜು ಸಭಾಂಗಣ, ವಿದ್ಯಾಸಾಗರ ಪ್ರೊ. ಎಂ.ಪಿಎಲ್. ಶಾಸ್ತ್ರಿ ರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರಂ. ಅನಘಾ ಭಟ್ ಅವರಿಂದ ಗಾಯನ, ಗುರುಮೂರ್ತಿ ವೈದ್ಯ (ತಬಲಾ), ಸತೀಶ್ ಕೊಲ್ಲಿ (ಹಾರ್ಮೋನಿಯಂ). ಸಂಜೆ 6.30.ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಅನಘಾ, ವಿದುಷಿ ಗೀತಾ ಹೆಗಡೆ ಅವರ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. ಎಂಟನೇ ವಯಸ್ಸಿನಲ್ಲಿಯೇ ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಅವರು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗಿರುವ ಬಾಲಪ್ರತಿಭಾ ಹಾಗೂ ಕಿಶೋರ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ: ಸುಚಿತ್ರ ಕಿ.ರಂ. ನುಡಿ ಮನೆ, ನಂ.36, 9ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಲೇಖಕಿ ಲಲಿತಾ ಬಸವಯ್ಯ ಅವರಿಂದ ಕವನ ವಾಚನ ಹಾಗೂ ಸಂವಾದ. ಸಂಜೆ 5.30.

ಬಸವ ಅಂಬರ ಮತ್ತು ರೇಹ್ವಾ: ನಂ. 93, ಕನಕಪುರ ರಸ್ತೆ, ಬಸವನಗುಡಿ. ಸತ್ಯನಾರಾಯಣ ರಾಜು ಅವರಿಂದ `ಮಹೇಶ್ವರ ಕಿ ಕಥಾ~ ನೃತ್ಯ ಕಾರ್ಯಕ್ರಮ. ಸಂಜೆ 7.ಬಸವ ಸಮಿತಿ: ಸುಮಂಗಲಿ ಸೇವಾಶ್ರಮ, ಚೋಳನಾಯಕನ ಹಳ್ಳಿ, ಹೆಬ್ಬಾಳ. `ವಚನ ಶ್ರಾವಣ: ಮನೆಯಿಂದ ಮನೆಗೆ~ ಕಾರ್ಯಕ್ರಮ. ಶರಣ ದಾಸೋಹಿ- ಎಸ್.ಜಿ. ಸುಶೀಲಮ್ಮ. ಅಧ್ಯಕ್ಷತೆ-ಸಮಿತಿ ಉಪಾಧ್ಯಕ್ಷ ಆರ್.ಎಸ್. ಕಲ್ಯಾಣ ಶೆಟ್ಟಿ. ಗಮಕಿ ಬೇ.ಗೋ.ರಮೇಶ್ ಅವರಿಂದ ವಚನ ನಿರ್ವಚನ. ಸಂಜೆ 4.ಭಾರತೀಯ ವಿಜ್ಞಾನ ಸಂಸ್ಥೆ ಹಳೆ ವಿದ್ಯಾರ್ಥಿಗಳ ಸಂಘ: ಕಾಲೇಜು ಫ್ಯಾಕಲ್ಟಿ ಸಭಾಂಗಣ.  `ಫಿಫ್ಟಿ ಫೈವ್ ಈಯರ್ಸ್‌ ಆಫ್ ಕಂಪ್ಯೂಟಿಂಗ್ ಇನ್ ಇಂಡಿಯಾ~ ವಿಷಯದ ಕುರಿತು ಸೂಪರ್ ಕಂಪ್ಯೂಟೆಡ್ ಎಜುಕೇಷನ್ ಆಂಡ್ ರಿಸರ್ಚ್ ಸೆಂಟರ್ ಫೊಫೆಸರ್ ವಿ. ರಾಜಾರಾಮನ್ ಅವರಿಂದ ಉಪನ್ಯಾಸ ಮಾಲಿಕೆ. ಮಧ್ಯಾಹ್ನ 4.ಮಾತೃಶ್ರೀ ಮನೋವಿಕಾಸ ಕೇಂದ್ರ: ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆ, ಗೌಡನಹಳ್ಳಿ, ಶಿವನಪುರ ಪೋಸ್ಟ್, ದಾಸನಪುರ ಹೋಬಳಿ. ನೂತನ ಕಟ್ಟಡ ಉದ್ಘಾಟನಾ ಸಮಾರಂಭ. ಉದ್ಘಾಟನೆ- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಅತಿಥಿ- ಕೈಗಾರಿಕೋದ್ಯಮಿ ದಿಲೀಪ್ ಸುರಾನ, ಸಚಿವ ವಿ. ಸೋಮಣ್ಣ, ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ. ಬೆಳಿಗ್ಗೆ 11.ಸೋವಿಯತ್ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ: ತಾಜ್ ವಿವಾಂತ. ಎಂಜಿ ರಸ್ತೆ.  `ಫೀಡ್ ಆಂಡ್ ಫೀಡ್ ಇನ್‌ಗ್ರೇಡಿಯೆಂಟ್ಸ್ ಕನ್‌ಕನ್‌ಕ್ಲೇವ್~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ. ಅತಿಥಿ- ಪ್ರಾಣಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಖಾತೆ ಜಂಟಿ ಕಾರ್ಯದರ್ಶಿ ಡಾ. ಸಂಜಯ್ ಆರ್. ಭೋಸ್‌ರೆಡ್ಡಿ. ಬೆಳಿಗ್ಗೆ 9.45.ಸಾಹಿತ್ಯ ಸಂಘ: ಗಾಂಧಿ ಭವನ, ಗಾಂಧಿ ಸ್ಮಾರಕ ನಿಧಿ, ಕುಮಾರ ಪಾರ್ಕ್ ಪೂರ್ವ, ಶಿವಾನಂದ ವೃತ್ತದ ಹತ್ತಿರ. ಬೆಳಿಗ್ಗೆ 11ಕ್ಕೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಅಧೀಕ್ಷಕ ವೈದ್ಯಾಧಿಕಾರಿ ಡಾ.ಟಿ.ಎಸ್. ಭೂಪಾಲ್ ಅವರಿಗೆ ಅಭಿನಂದನಾ ಕಾರ್ಯಕ್ರಮ. ಆಶೀರ್ವಚನ- ನಿ.ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿ. ಅಧ್ಯಕ್ಷತೆ- ಮಾಜಿ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್. ಅತಿಥಿ- ಸಚಿವ ಎಸ್. ಸುರೇಶ ಕುಮಾರ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ. ಮಂಜುನಾಥ್, ಕರ್ನಾಟಕ ಮಧುಮೇಹ ಸಂಸ್ಥೆ ಡಾ. ಕೆ.ಆರ್. ನರಸಿಂಹ ಶೆಟ್ಟಿ. ನಾಗಚಂದ್ರಿಕಾ ಭಟ್ ಅವರಿಂದ ಸುಗಮ ಸಂಗೀತ. ಬೆಳಿಗ್ಗೆ 11.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ: ಎಫ್.ಕೆ.ಸಿ.ಸಿ.ಐ. ಸಭಾಂಗಣ. ಕೆ.ಜಿ. ರಸ್ತೆ. `ಸರ್ವಿಸ್ ಟ್ಯಾಕ್ಸ್- ಎಪ್ಲಿಕೆಬಿಲಿಟಿ ಆಫ್ ನ್ಯೂ ಎನ್ಯಾಕ್ಟ್‌ಮೆಂಟ್ಸ್, ರೂಲ್ಸ್, ನೆಗೆಟಿವ್ ಲಿಸ್ಟ್~ ಕುರಿತ ಕಾರ್ಯಾಗಾರ.  ಬೆಳಿಗ್ಗೆ 10.ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಬ್ಯುಸಿನೆಸ್ ಆಂಡ್ ರಿಸರ್ಚ್: ಇಲೆಕ್ಟ್ರಾನಿಕ್ ಸಿಟಿ-ಫೇಸ್ 1, ಬಿಎಸ್‌ಎನ್‌ಎಲ್ ದೂರವಾಣಿ ಕಚೇರಿ ಹಿಂಭಾಗದ ಕಾಲೇಜು ಸಭಾಂಗಣ. ಪದವಿ ಪ್ರಧಾನ ಸಮಾರಂಭ. ಅತಿಥಿ- ಎನ್‌ಎಚ್‌ಆರ್‌ಡಿ ಚಾಪ್ಟರ್ ಅಧ್ಯಕ್ಷ ಸಿ. ಮಹಾಲಿಂಗಂ, ಬ್ರಿಟೀಷ್ ಉಪ ಮುಖ್ಯ ಆಯುಕ್ತ ಇಯಾನ್ ಫೆಲ್ಟನ್. ಬೆಳಿಗ್ಗೆ 10.ಚರಣ್ ಸೌಹಾರ್ದ ಕೋ-ಅಪರೇಟಿವ್ ಬ್ಯಾಂಕ್ ಲಿ: ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪ, ಪಂಪ ಮಹಾಕವಿ ರಸ್ತೆ, ಶಂಕರಪುರ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಸಂಜೆ 5.30ಕ್ಕೆ. ಡಾ. ಎಂ. ಬಾಲಮುರಳಿ ಕೃಷ್ಣ ಅವರಿಂದ ಸಂಗೀತ ಕಾರ್ಯಕ್ರಮ ಸಂಜೆ 6.30.ಅಕಾಡೆಮಿ ಫಾರ್ ಆಕ್ಯುಪ್ರೆಶ್ಶರ್ ಆಂಡ್ ಆಕ್ಯುಪಂಕ್ಚರ್: ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ. ಒಂದು ದಿನದ ಆಕ್ಯುಪ್ರೆಶ್ಶರ್ ಕೋರ್ಸ್. ಬೆಳಿಗ್ಗೆ 9.30.ಉದಯಭಾನು ಕಲಾಸಂಘ: ಸಂಘದ ಸಾಂಸ್ಕೃತಿಕ ಭವನ. ಗವಿಪುರ ಸಾಲುಛತ್ರಗಳ ಎದುರು, ಕೆಂಪೇಗೌಡನಗರ. ಗಣ್ಯರಿಗೆ ಅಭಿನಂದನೆ ಹಾಗೂ ಸಂಘದ ಸಾಂಸ್ಕೃತಿಕ ಭವನದ ನವೀಕೃತ ರಂಗಮಂದಿರ  ಉದ್ಘಾಟನೆ- ಡಾ.ಚಂದ್ರಶೇಖರ ಕಂಬಾರ. ಅಧ್ಯಕ್ಷತೆ- ಬಿ. ಕೃಷ್ಣ. ಅತಿಥಿ- ಮಹಾಪೌರ ಡಿ. ವೆಂಕಟೇಶಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್.ರಾಮಕೃಷ್ಣ, ರಂಗತಜ್ಞ ಡಾ. ಬಿ.ಎಸ್. ಪರೇಶಕುಮಾರ್. ಸಂಜೆ 6.ಚಾಮರಾಜಪೇಟೆ ಶ್ರೀರಾಮ ಮಂದಿರ ಅಸೋಸಿಯೇಷನ್: ನಂ 114, ಲಕ್ಷ್ಮೀದೇವಿ ರಾಮಣ್ಣ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ. ಪ್ರತಿಭಾ ಪುರಸ್ಕಾರ ಸಮಾರಂಭ. ಅಧ್ಯಕ್ಷತೆ- ಸಂಸ್ಥೆ ಅಧ್ಯಕ್ಷ ಸಿ.ಎಂ. ಸುಬ್ಬಯ್ಯ. ಅತಿಥಿ-ಶುಶೃತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎನ್. ಶ್ರೀನಿವಾಸಮೂರ್ತಿ. ಬೆಳಿಗ್ಗೆ 9.ಚೇಂಜ್ ಸಿಟಿ: ಪಿ.ಇ.ಎಸ್. ಕಾಲೇಜು, 50 ಫೀಟ್ ರೋಡ್, ಹನುಮಂತನಗರ. ಜನಸ್ಪಂದನ ಕಾರ್ಯಕ್ರಮ. ಅಧ್ಯಕ್ಷತೆ- ಮೇಯರ್ ಡಿ.ವೆಂಕಟೇಶ್ ಮೂರ್ತಿ. ಬಸವನಗುಡಿ ಸಂಸದ ರವಿಸುಬ್ರಹ್ಮಣ್ಯ ಎಲ್.ಎ. ಬೆಳಿಗ್ಗೆ 11.ಬ್ರಿಟಿಷ್ ಲೈಬ್ರರಿ: 23 ಕಸ್ತೂರ ಬಾ ರಸ್ತೆ. ಇಂಗ್ಲಿಷ್ ಲಾಂಗ್ವೇಜ್ ಟೀಚಿಂಗ್ ವರ್ಕ್‌ಶಾಪ್-ಆಬ್ಜೆಕ್ಟಿವ್ಸ್. ಸಾರ್ವಜನಿಕರಿಗೆ ನೋಂದಣಿ ಶುಲ್ಕ 1500ರೂ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಪರ್ಕಸ್ಸಿವ್ ಆರ್ಟ್ಸ್ ಸೆಂಟರ್:
ಗಾಯನ ಸಮಾಜ ಸಭಾಂಗಣ, ಕೆ.ಆರ್. ರಸ್ತೆ. ತಾಳವಾದ್ಯೋತ್ಸವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10ಕ್ಕೆ ವಿಶೇಷ ವಿಚಾರ ಸಂಕಿರಣ- `ಪಾಲ್ಘಾಟ್ ಮಣಿ ಅಯ್ಯರ್ ಬಾಣಿ, ನೆನಪುಗಳು ಹಾಗೂ ಹೆಜ್ಜೆಗುರುತುಗಳು~.

ಮೈಸೂರು ನಾಗರಾಜ್ ಅವರಿಂದ ಗಾಯನ. ಡಾ ಮೈಸೂರು ಮಂಜುನಾಥ್(ಪಿಟೀಲು ದ್ವಂದ್ವ)-ಡಾ. ಉಮಾಯುಳ್ಪುರಂ ಶಿವರಾಮನ್ (ಮೃದಂಗ), ಜಿ. ಗುರುಪ್ರಸನ್ನ (ಖಂಜರಿ). ಸಂಜೆ 6.ಯಕ್ಷ ಸಂಭ್ರಮ: ಗುರುಶನೀಶ್ವರ ಸ್ವಾಮಿ ದೇವಸ್ಥಾನ, ಮುನೇಶ್ವರ ಬ್ಲಾಕ್ ಗಿರಿನಗರ. `ಶನೀಶ್ವರ ಮಹಾತ್ಮೆ~ ಯಕ್ಷಗಾನ ಪ್ರದರ್ಶನ. ಸಂಜೆ 7.ರಂಗನಾಥ ಯಕ್ಷಗಾನ ಮಂಡಳಿ: ದೇವಾಂಗ ಸಮುದಾಯ ಭವನ, ಮುನಿಯೂರು. ಪಂಚವಟಿ ರಾಮಾಯಣ ತಾಳಮದ್ದಳೆ ಕಾರ್ಯಕ್ರಮ. ಅಧ್ಯಕ್ಷತೆ- ಭಾಗವತರು ಕಲ್ಪನೆ ನಂಜಪ್ಪ. ಉದ್ಘಾಟನೆ- ಹಿರಿಯ ಭಾಗವತರು ಎಚ್.ಎಸ್. ರಾಘವೇಂದ್ರರಾವ್. ಅತಿಥಿ- ಡಾ.ಡಿ.ವಿ. ಗುಂಡಪ್ಪ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಪಾದ ಭಟ್. ಮಧ್ಯಾಹ್ನ 2.30.ಅಟ್ಟಾ ಗಲಾಟಾ: 75, 2ನೇ ಮೇನ್, 1ನೇ ಬ್ಲಾಕ್, ಕೋರಮಂಗಲ.  ವಿನೂ ಕೃಷ್ಣ ಅವರ `ವೇರ್ ದಿ ಗಾಡ್ಸ್ ಗೇವ್ ಅಪ್ ಕಾಸ್ಟ್~ ಚಿತ್ರ ಪ್ರದರ್ಶನ. ಸಂಜೆ 6.30.ಪೀವೀ ಅವರಿಂದ ಛಾಯಾಚಿತ್ರ ಕಾರ್ಯಾಗಾರ. ಬೆಳಿಗ್ಗೆ 10.ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ.ರಸ್ತೆ. ಗಾಯಕಿ ಡಾ. ಎಚ್.ಎಸ್. ಅನಸೂಯಾ ಕುಲಕರ್ಣಿ ಅವರಿಂದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ. ಸಂಜೆ 4.ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ ವಾಡಿಯಾ ರಸ್ತೆ, ಬಸವನಗುಡಿ. ಎಚ್.ಆರ್. ಮಂಜು ಅವರಿಂದ `ಹಾಸ್ಯ ರೋಗ~ ಕಾರ್ಯಕ್ರಮ. ಸಂಜೆ 6.15.ಕರ್ನಾಟಕ ನಾಟಕ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಅಮರೇಶ್ವರ ನಾಟ್ಯ ಸಂಘದಿಂದ `ಮನೆಗೆ ಬಂದ ಮಹಾಲಕ್ಷ್ಮೀ~ ನಾಟಕ ಪ್ರದರ್ಶನ. ರಚನೆ- ಬಸವರಾಜ್ ಪಂಚಗಲ್, ನಿರ್ದೇಶನ- ಸತೀಶ್‌ಕುಮಾರ್ ಹಿರಿಯೂರು. ಸಂಜೆ 7.

ಧಾರ್ಮಿಕ ಕಾರ್ಯಕ್ರಮಗಳು

ಹಿಂದೂ ಧರ್ಮ ಪ್ರಚಾರ ಪರಿಷತ್:
4ನೇ `ಟಿ~ ಬ್ಲಾಕ್, ಜಯನಗರ. ಶನಿವಾರ ಪ್ರಹ್ಲಾದ ಸಂಗೀತ ಸಂಘದಿಂದ ಗಾಯನ. ಸಂಜೆ 6.ಶಂಕರ ಜಯಂತಿ ಮಂಡಳಿ: ಶಂಕರ ಕೃಪಾ, ನಂ. 45, ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಶನಿವಾರ ದಿಲೀಪ್ ಬೆಳ್ಳಾವೆ ಅವರಿಂದ ವೇದಗಳ ಪರಿಚಯ. ಸಂಜೆ 6.30.ಶ್ರೀರಾಮಾಶ್ರಮ: ದುರ್ಗಾಪರಮೇಶ್ವರಿ ಕ್ರೀಡಾಂಗಣ, ಆರ್.ವಿ. ಡೆಂಟಲ್ ಕಾಲೇಜು ಎದುರು, ಜೆ.ಪಿ. ನಗರ 2ನೇ ಹಂತ. ಶನಿವಾರ ರಾಘವೇಶ್ವರಭಾರತೀ ಸ್ವಾಮೀಜಿಯವರ ವಾಲ್ಮೀಕಿ ರಾಮಾಯಣದ ಪುನರವತರಣ ಶ್ರೀ ರಾಮಕಥಾ ಪ್ರವಚನ. ಸಂಜೆ 6.ಶ್ರೀ ಶರಣ ಬಸವೇಶ್ವರ ಸೇವಾ ಸಮಿತಿ: ಬಸವ ಮಂಟಪ, ಬಸವೇಶ್ವರ ಪ್ರೌಢಶಾಲೆ, ರಾಜಾಜಿನಗರ 2ನೇ ಬ್ಲಾಕ್. ತ್ರಿಕಾಲ ಜ್ಞಾನಿ ಬಸವೇಶ್ವರ ಪುರಾಣ ಪ್ರವಚನ- ಪಂಡಿತ್ ಅನ್ನದಾನ ಸ್ವಾಮೀಜಿ. ಸಂಜೆ 6.30.ಆಂಜನೇಯ ಸ್ವಾಮಿ ದೇವಸ್ಥಾನ: ದೊಡ್ಡಬೆಟ್ಟಹಳ್ಳಿ. ಶ್ರೀ ಆಂಜನೇಯ ಸ್ವಾಮಿ ದೇವರಿಗೆ ಮೊದಲನೆ ಶ್ರಾವಣ ಶನಿವಾರ ಅಂಗವಾಗಿ ವೀಳ್ಯದೆಲೆ ಅಲಂಕಾರ, ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ. ಬೆಳಿಗ್ಗೆ 8ಲಕ್ಷ್ಮೀ ನರಸಿಂಹ ಸ್ವಾಮಿ ಧರ್ಮಸಂಸ್ಥೆ: ಸಂಸ್ಥೆಯ ಆವರಣ. ಜ್ಯೋತಿನಗರ ವೈಶ್ಯ ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟಿ ಅವರ 91ನೇ ವಾರ್ಷಿಕ ಆರಾಧನಾ ಮಹೋತ್ಸವ. ಅತಿಥಿ- ಚಿಕ್ಕಪೇಟೆ ವಿಧಾನ ಸಭಾ ಸದಸ್ಯ ಡಿ. ಹೇಮಚಂದ್ರಸಾಗರ್, ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್. ಸುದರ್ಶನ್. ಬೆಳಿಗ್ಗೆ 6.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.