ಗುರುವಾರ , ಮೇ 19, 2022
21 °C

ನಗರದಲ್ಲಿ ಇಂದು -ಫೆಬ್ರುವರಿ 14, ಸೋಮವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಇಎಸ್ ಪದವಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು: ಕಾಲೇಜು ಸಭಾಂಗಣ. 15ನೇ ಅಡ್ಡರಸ್ತೆ, ಮಲ್ಲೇಶ್ವರ. ರವೀಂದ್ರನಾಥ್ ಠಾಕೂರ್ ರವರ 150ನೇ ಜನ್ಮದಿನೋತ್ಸವದ ಅಂಗವಾಗಿ ವ್ಯಕ್ತಿತ್ವ ಮತ್ತು ಸಾಹಿತ್ಯ ಕುರಿತ ವಿಚಾರ ಸಂಕಿರಣ. ಉದ್ಘಾಟನೆ- ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಅಧ್ಯಕ್ಷತೆ- ಕಾಲೇಜಿನ ಪ್ರಭಾರ ಪ್ರಾಂಶುಪಾಲ ರವೀಂದ್ರ ರೇಶ್ಮೆ. ಬೆಳಿಗ್ಗೆ 10.ಸೆಂಟರ್ ಫಾರ್ ಸಸ್ಟೈನಬಲ್ ಡೆವಲಪ್‌ಮೆಂಟ್ (ಸಿಎಸ್‌ಡಿ): ಕೆಎಎಸ್ ಅಧಿಕಾರಿಗಳ ಸಂಘ. ಮಾಸ್ತಿ ಸಭಾಂಗಣ, ಇನ್‌ಫ್ಯಾಂಟ್ರಿ ರಸ್ತೆ. ಕ್ಲೈಮೇಟ್ ಚೇಂಜ್ ಆಕ್ಷನ್ ಫಾರ್ ಕರ್ನಾಟಕ. ಉದ್ಘಾಟನೆ- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಸಿಎಸ್‌ಡಿ ಮುಖ್ಯಸ್ಥ ಡಾ. ಎ. ರವೀಂದ್ರ. ಬೆಳಿಗ್ಗೆ 10.ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು ಮತ್ತು ಗೋಕುಲ ಆಯುಷ್ ಆರೋಗ್ಯಧಾಮ; ಎಂ.ಎಸ್ ರಾಮಯ್ಯ ವೈದ್ಯಕೀಯ ಶಿಕ್ಷಣ ಆಸ್ಪತ್ರೆ, ಎಂಎಸ್‌ಆರ್ ನಗರ, ನ್ಯೂ ಬಿಇಎಲ್ ರಸ್ತೆ. ಆಯುರ್ವೇದ ಒಳರೋಗಿಗಳ ಚಿಕಿತ್ಸಾ ವಿಭಾಗ ಉದ್ಘಾಟನೆ- ಗೋಕುಲ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಆರ್. ಜಯರಾಂ, ಮುಖ್ಯ ಅತಿಥಿಗಳು- ಗೋಕುಲ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಬಿ.ಆರ್. ಪ್ರಭಾಕರ್, ರಾಮಯ್ಯ ವೈದ್ಯಕೀಯ ಸಂಸ್ಥೆಯ ಪ್ರಾಂಶುಪಾಲ ಡಾ, ಎಸ್. ಕುಮಾರ್, ಅಸೋಸಿಯೇಟ್ ಡೀನ್ ಡಾ. ಡಿ.ಸಿ. ಸುಂದರೇಶ್. ಬೆಳಿಗ್ಗೆ 11.ಪ್ರೀತಿ ಶಾಲೆ ಹಾಗೂ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ. ಪ್ರೀತಿ ಪ್ರೇಮ ಅನುಬಂಧ ವಿಚಾರ ಸಂಕಿರಣ. ಪ್ರೀತಿ ಶಾಲೆಯ ಪ್ರಥಮ ವಾರ್ಷಿಕೋತ್ಸವ, ಆದರ್ಶ ದಂಪತಿ ಪ್ರಸಸ್ತಿ ಪುರಸ್ಕಾರ. ಸಾನಿಧ್ಯ- ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿ, ಉದ್ಘಾಟನೆ- ವಿಧಾನ ಪರಿಷತ್ತಿನ ಸದಸ್ಯ ಎಂ.ವಿ. ರಾಜಶೇಖರನ್, ವಿಶೇಷ ಉಪನ್ಯಾಸ- ವಿಧಾನಪರಿಷತ್ ವಿರೋಧಪಕ್ಷದ ನಾಯಕಿ ಮೋಟಮ್ಮ. ವಿಶೇಷ ಅತಿಥಿಗಳು- ಮಾಜಿ ಸಚಿವ ಎಚ್.ಎಂ. ರೇವಣ್ಣ, ಮುಖ್ಯ ಅತಿಥಿಗಳು- ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಚಿತ್ರನಟ ಅಪ್ಪು ವೆಂಕಟೇಶ್, ಅಧ್ಯಕ್ಷತೆ- ಹೈಕೋರ್ಟ್ ನ್ಯಾಯಮೂರ್ತಿ ಏ.ಎಸ್. ಪಚ್ಛಾಪುರೆ. ಮಧ್ಯಾಹ್ನ 3.45.ನಿಮ್ಹಾನ್ಸ್: ನಿಮ್ಹಾನ್ಸ್ ಸಭಾಂಗಣ. ಸಂಸ್ಥಾಪನಾ ದಿನ ಆಚರಣೆ. ಅತಿಥಿಗಳು- ಇನ್ಪೋಸಿಸ್ ಮುಖ್ಯಸ್ಥ ಎನ್.ಆರ್. ನಾರಾಯಣ ಮೂರ್ತಿ, ಮುಖ್ಯ ಅತಿಥಿಗಳು- ನಿಮ್ಹಾನ್ಸ್ ನಿರ್ದೇಶಕ ಪ್ರೊ. ಪಿ. ಸತೀಶ್ ಚಂದ್ರ. ಸಂಜೆ 4.ದೃಶ್ಯ: ಸಂಸ ಬಯಲು ರಂಗ ಮಂದಿರ, ರವೀಂದ್ರ ಕಲಾ ಕ್ಷೇತ್ರ ಹಿಂಭಾಗ, ಜೆ.ಸಿ. ರಸ್ತೆ. ದೃಶ್ಯ ಕಾದಂಬರಿ ಬಿಡುಗಡೆ. ಬಿಡುಗಡೆ- ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಅಜಯ್ ಕುಮಾರ್ ಸಿಂಗ್, ಮುಖ್ಯ ಅತಿಥಿ- ಕಲಾವಿದ ಎಸ್.ಜಿ. ವಾಸುದೇವ್, ಅಧ್ಯಕ್ಷತೆ- ಸಾಹಿತಿ ಯು.ಆರ್. ಅನಂತಮೂರ್ತಿ. ಸಂಜೆ 5.30.ಬಸವ ಸಮಿತಿ: ಅರಿವಿನ ಮನೆ, ಬಸವ ಭವನ, ಬಸವೇಶ್ವರ ರಸ್ತೆ. ಅರಿವಿನ ಮನೆ 649ನೇ ಕಾರ್ಯಕ್ರಮ. ಜೇಡರ ದಾಸಿಮಯ್ಯನ ವಚನಗಳಲ್ಲಿ ತಾತ್ವಿಕ ಚಿಂತನೆ ವಿಚಾರ ಸಂಕಿರಣ. ಉಪನ್ಯಾಸ- ಬರ ಪರಿಹಾರ ಉಸ್ತುವಾರಿ ಕೋಶ ನಿವೃತ್ತ ನಿರ್ದೇಶಕ ಡಾ. ಎಚ್.ಚಂದ್ರಶೇಖರ, ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ. ಬಸವಲಿಂಗ ಸೊಪ್ಪಿಮಠ, ಅಧ್ಯಕ್ಷತೆ- ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ವೀರಣ್ಣ. ಸಂಜೆ 6.ಸಮುದಾಯ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ.ಟ್ಯಾಗೊರ್ 150 ಸಮುದಾಯ ರಾಷ್ಟ್ರೀಯ ಉತ್ಸವ2011. ಕವಿಗೋಷ್ಠಿ. ಭಾಗವಹಿಸುವವರು- ಡಾ. ರಂಗನಾಥ್ ಕಂಟನ ಕುಂಟೆ, ಹುಲಿಕಟ್ಟೆ ಚನ್ನಬಸಪ್ಪ, ಲಕ್ಕೂರ್ ಸಿ. ಆನಂದ, ಎಸ್. ದೇವೇಂದ್ರಗೌಡ, ಎಸ್. ಮಂಜುನಾಥ್, ರಾಮಕ್ಕ, ಶ್ವೇತಾಮಣಿ, ಡಾ. ರವಿಕುಮಾರ್ ಬಾಗಿ, ಟಿ. ಲಕ್ಷ್ಮೀನಾರಾಯಣ, ಗಂಗಪ್ಪ ತಳವಾರ, ಎಸ್. ನರಸಿಂಹ ಸ್ವಾಮಿ, ಆರ್. ದೇವರಾಜ್, ಹುಲಿಕುಂಟೆ ಮೂರ್ತಿ, ಅಧ್ಯಕ್ಷತೆ- ಸಮುದಾಯ ರಾಜ್ಯ ಸಮಿತಿ ಉಪಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ. ಸಂಜೆ 5.30.ಸದ್ಭಾವನಾ ಪ್ರತಿಷ್ಠಾನ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ದಿವಂಗತ ಎಂ.ಪಿ. ಪ್ರಕಾಶ್ ಅವರಿಗೆ ಶ್ರದ್ದಾಂಜಲಿ, ಪುಷ್ಪ ನಮನ- ನುಡಿನಮನ- ಗೀತನಮನ. ಪುಷ್ಪ ನಮನದಲ್ಲಿ ಭಾಗವಹಿಸುವವರು- ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಮಾಜಿ ಸಂಸದ ಬಿ.ಎಲ್. ಶಂಕರ್, ಪತ್ರಕರ್ತ ರವೀಂದ್ರರೇಷ್ಮೆ, ರಂಗಕರ್ಮಿ ಕೆ.ವಿ. ನಾಗರಾಜ್, ಗೀತನಮನದಲ್ಲಿ ಭಾಗವಹಿಸುವವರು- ಡಾ. ಕೋ.ವೆಂ. ರಾಮಕೃಷ್ಣೇಗೌಡ, ಡಾ. ವೀರೇಶ್ ಬಳ್ಳಾರಿ, ಮೃತ್ಯುಂಜಯ ದೊಡ್ಡವಾಡ, ಆನಂದ ಮಾದಲಗೆರೆ, ಬೆಂಗಳೂರು ಮುನಿಯಪ್ಪ, ಗಾಯಿತ್ರಿರಾಮಣ್ಣ. ಸಂಜೆ 5.ಬೆಂಗಳೂರು ಸಮಾಜ ಮತ್ತು ವಿಜ್ಞಾನ ವೇದಿಕೆ: ಡಾ. ಎಚ್.ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಡಿಗ್ರಿ ಕಾಲೇಜು, ಬಸವನಗುಡಿ. ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು- ಎನ್‌ಇಎಸ್ ಮುಖ್ಯಸ್ಥ ಡಾ. ಎ.ಎಚ್. ರಾಮರಾವ್. ಸಂಜೆ 6.ತರಳಬಾಳು ಹುಣ್ಣಿಮೆ ಮಹೋತ್ಸವ: ಅರಮನೆ ಆವರಣ, ಮೇಖ್ರಿ ವೃತ್ತ. ಆಶೀರ್ವಚನ- ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮಿ, ಮುಖ್ಯ ಅತಿಥಿಗಳು- ನ್ಯಾಯಮೂರ್ತಿ ನಾಗಮೋಹನದಾಸ್, ಸಚಿವ ಸುರೇಶ್‌ಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಡಾ. ಮಹೇಶ್ ಜೋಷಿ, ವಿಶೇಷ ಆಹ್ವಾನಿತರು- ಸಂಸದ ಬಿ.ವೈ. ರಾಘವೇಂದ್ರ, ಶಾಸಕ ವಿರೂಪಾಕ್ಷ ಮಾಡಾಳು, ಉಪನ್ಯಾಸ- ವಿಧಾನಪರಿಷತ್ ವಿಶ್ರಾಂತ ಸದಸ್ಯ ಡಾ. ಏಜಾಸುದ್ದೀನ್, ಪ್ರಾಧ್ಯಾಪಕ ಡಾ. ನಟರಾಜ್ ಹುಳಿಯಾರ್, ಸಾಂಸ್ಕೃತಿಕ ಕಾರ್ಯಕ್ರಮಗಳು. ಹಾಸ್ಯ ಸಂಜೆ- ಪ್ರೊ. ಎಂ. ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ್, ಅಸಾದುಲ್ಲಾ ಬೇಗ್. ವಚನ ಗಾಯನ ಹಾಗೂ ನಾಡಗೀತೆ- ಮಾಧವಿ ಉಮೇಶ್ ಮತ್ತು ತಂಡ. ಸಂಜೆ 6.30.ಚೆ ಟ್ರಸ್ಟ್: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ. ಕ್ರಿಮಿ ನಾಟಕ ಪ್ರದರ್ಶನ. ಉದ್ಘಾಟನೆ- ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ರಚನೆ ಮತ್ತು ನಿರ್ದೇಶನ- ವಿ.ಎಂ. ಮಂಜುನಾಥ್, ರಂಗ ವಿನ್ಯಾಸ- ವಿ.ಎಂ. ರಾಜಣ್ಣ, ಸಂಗೀತ- ಅರುಣ್, ಬೆಳಕು ಡಿ.ಸಿ. ಹನ್ಮಂತ್ ಪೂಜಾರ್. ಸಂಜೆ 7.ಸಮುದಾಯ: ರವೀಂದ್ರ ಕಲಾಕ್ಷೇತ್ರ. ಕನ್ನಡ ನಾಟಕ ‘ಮಕ್ಕಳ ರವೀಂದ್ರ’. ನಿರ್ದೇಶನ- ಡಾ. ಶ್ರೀಪಾದ ಭಟ್, ಚಿಂತನ ರಂಗ ಅಧ್ಯಯನ ಕೇಂದ್ರ, ಉತ್ತರ ಕನ್ನಡ. ಸಂಜೆ 7.

ಧಾರ್ಮಿಕ ಕಾರ್ಯಕ್ರಮಗಳು

ಸಿದ್ದಿ ಗಣಪತಿ ದೇವಾಲಯ ಸಮಿತಿ:
ಕೆಎಸ್‌ಆರ್‌ಟಿಸಿ ಲೇಔಟ್, ಚಿಕ್ಕಕಲ್ಲಸಂದ್ರ, ಉತ್ತರಹಳ್ಳಿ ರಸ್ತೆ. ತ್ಯಾಗರಾಜ, ಪುರಂದರದಾಸ, ಕನಕದಾಸರ ಆರಾಧನಾ 6ನೇ ವರ್ಷದ ಆರಾಧನ ಮಹೋತ್ಸವ ಮತ್ತು ಮನೋರಂಜನಿ ಪ್ರಸಸ್ತಿ ಪ್ರದಾನ ಸಮಾರಂಭ. ದಾಸಾಮೃತ- ಗಾನಸೌರಭ. ಸರಸ್ವತಿ ಗಾನ ಮಂಡಳಿ. ನಳಿನಿ ರಘುನಂದನ್ ಮತ್ತು ತಂಡದವರಿಂದ. ಸಂಜೆ 6.30.ಈಶ್ವರ ಸೇವಾ ಸಮಿತಿ: ಟೀಚರ್ಸ್‌ ಕಾಲೋನಿ, ನಾಗಶೆಟ್ಟಿಹಳ್ಳಿ. ಕಾಶೀವಿಶ್ವನಾಥೇಶ್ವರ ಸ್ವಾಮಿ ದೇವಸ್ಥಾನ. ಸಹಸ್ರ ಕುಂಭಾಭಿಷೇಕ ಮತ್ತು ಪಂಚಲಿಂಗಗಗಳ ಪ್ರತಿಷ್ಠಾಪನಾ ಮಹೋತ್ಸವ. ಬೆಳಿಗ್ಗೆ 5.30. ಹರಿಕಥೆ- ಕರಿಬಸವಯ್ಯ ಮತ್ತು ತಂಡ. ಸಂಜೆ 6.30.ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಕಾಶಿ ವಿಶ್ವನಾಥ ದೇವಸ್ಥಾನ, 4ನೇ ತಿರುವು, ರಿಂಗ್ ರೋಡ್, ಬಿ ಚನ್ನಸಂದ್ರ. ಶಿವಾನಂದ ಲಹರಿ ಸ್ತೋತ್ರ. ಭಜನೆ ಮತ್ತು ಉಪನ್ಯಾಸ ಕಾರ್ಯಕ್ರಮ- ಚಂದ್ರೇಶಾನಂದಜಿ. ಸಂಜೆ 6.ಸಿಟಿ ಭಾವಸಾರ ಕ್ಷತ್ರಿಯ ಸೇವಾ ಮಂಡಳಿ:  ನಂ39, ಹುರಿಯೋಪೇಟೆ. ವಿಠ್ಠಲ ರಖುಮಾಯಿ ಮಂದಿರ . ಸಪ್ತಾಹ ಮಹೋತ್ಸವ. ಅಭಿಷೇಕ ಕಾರ್ಯಕ್ರಮ ಬೆಳಿಗ್ಗೆ 7.ಸಿಟಿ ಭಾವಸಾರ ಕ್ಷತ್ರಿಯ ಸೇವಾ ಮಂಡಳಿ: ನಂ. 39, ಹುರಿಯೋಪೇಟೆ. ವಿಠ್ಠಲ ರಖುಮಾಯಿ ಮಂದಿರ . ಸಪ್ತಾಹ ಮಹೋತ್ಸವ. ವಾಸವಿ ನಿರಂಜನ ಮಂಡಳಿ- ರಮಾಮಣಿ ಮತ್ತು ಸಂಗಡಿಗರು ಭಕ್ತಿಗೀತೆಗಳು. ಸಂಜೆ 5.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.