ಬುಧವಾರ, ಜೂನ್ 16, 2021
21 °C

ನಗರದಲ್ಲಿ ಇಂದು ಮಾರ್ಚ್, 17, ಶನಿವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್ ಯುವಸೇನೆ: ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ಬಸವೇಶ್ವರ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ. `ಸಹಾಯವಾಣಿ ಉದ್ಘಾಟನೆ~ ಹಾಗೂ `ಮಾಹಿತಿಗಳ ಕೈಪಿಡಿ~. ಉದ್ಘಾಟನೆ- ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎ.ನಾರಾಯಣಸ್ವಾಮಿ. ಅತಿಥಿಗಳು- ಅಖಿಲ ಭಾರತ ದಲಿತ ಕ್ರಿಯಾಸಮಿತಿ ರಾಷ್ಟ್ರೀಯ ಆಧ್ಯಕ್ಷ ಚಿ.ನಾ.ರಾಮು, ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ. ಮಧ್ಯಾಹ್ನ 3.ಜಯ ಕರ್ನಾಟಕ:
ಗಾಣಿಗಪಾಳ್ಯ, ವಾರ್ಡ್ ನಂ.198, ಹೆಮ್ಮಿಗಪುರ, ಯಶವಂತಪುರ, ನೂತನ ಶಾಖೆ ಉದ್ಘಾಟನೆ, ಉದ್ಘಾಟನೆ- ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ಅಧ್ಯಕ್ಷತೆ- ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಗೌಡ್ರು, ಜಿಲ್ಲಾ ಕಾರ್ಯಾಧ್ಯಕ್ಷ ಗುಣರಂಜನ್ ಶೆಟ್ಟಿ, ವಾರ್ಡ್ ಸದಸ್ಯೆ ವೀಣಾ ನಾಗರಾಜ್, ಸಂಜೆ 6.ಆಲ್ ಇಂಡಿಯಾ ಬ್ಯಾಂಕ್ ಡಿಪಾಸಿಟ್ ಕಲೆಕ್ಟರ್ ವರ್ಕ್‌ಮನ್ ಯೂನಿಯನ್: ನಗರೇಶ್ವರ ಸ್ವಾಮಿ ಕಲ್ಯಾಣ ಮಂಟಪ, ಪೂರ್ವ ಆಂಜನೇಯ ದೇವಸ್ಥಾನ ರಸ್ತೆ, ಗಾಂಧಿಬಜಾರ್, ಬಸವನಗುಡಿ, ಉದ್ಘಾಟನೆ- ಕೇಂದ್ರ ಕಾರ್ಮಿಕ ಮಂತ್ರಿ ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷತೆ- ಸಂಸ್ಥೆಯ ಅಧ್ಯಕ್ಷ ಎನ್. ಚಂದ್ರಶೇಖರ್, ಅತಿಥಿಗಳು- ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಆಯೋಗದ ಸದಸ್ಯ ಎಂ.ಶಿವಣ್ಣ, ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ, ಬೆಳಿಗ್ಗೆ 9.30.ಬಂದೀಖಾನೆ ಇಲಾಖೆ: ಏಟ್ರಿಯ ಹೋಟೆಲ್, ಅರಮನೆ ರಸ್ತೆ, ಡಿಜಿಪಿ, ಐಜಿಪಿ ಅವರ ರಾಷ್ಟ್ರಮಟ್ಟದ ಸಮಾವೇಶ. ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಅತಿಥಿಗಳು- ಸಮಾಜ ಕಲ್ಯಾಣ ಮತ್ತು ಬಂದೀಖಾನೆ ಇಲಾಖೆ ಸಚಿವ ಎ.ನಾರಾಯಣಸ್ವಾಮಿ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ್, ಡಿಜಿ ಶಂಕರ ಬಿದರಿ, ಬೆಳಿಗ್ಗೆ 9.ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ:
ಜ್ಞಾನಜ್ಯೋತಿ ಘಟಿಕೋತ್ಸವ ಕೇಂದ್ರ, ಸೆಂಟ್ರಲ್ ಕಾಲೇಜು ಆವರಣ, ಎಸ್‌ಬಿಎಂ ವೃತ್ತದ ಬಳಿ, ಅರಮನೆ ರಸ್ತೆ, `ಕೇಂದ್ರ ಬಜೆಟ್-2012 ವಿಶ್ಲೇಷಣೆ~ ಅತಿಥಿಗಳು- ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸ್‌ನ ಮುಖ್ಯಸ್ಥ ಟಿ.ವಿ.ಮೋಹನ್‌ದಾಸ್ ಪೈ, ಚಾರ್ಟೆಡ್ ಅಕೌಂಟೆಂಟ್ ಎಚ್. ಪದಂಚಂದ್ ಖಿಂಚಾ, ಸಂಜೆ 4.ಅಲ್-ಅಮಿನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್: ಲಾಲ್‌ಬಾಗ್ ಮುಖ್ಯದ್ವಾರ, ಹೊಸೂರು ರಸ್ತೆ, ಅತಿಥಿಗಳು- ಇಂಡಿಯನ್ ಆಪರೇಷನ್ಸ್ ಸೋನಿಕ್ ವಾಲ್‌ನ ವ್ಯವಸ್ಥಾಪಕ ಜಿ.ವಿ.ಸುರೇಶ್, ಅಲ್-ಅಮಿನ್ ಶಿಕ್ಷಣ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ವೈ.ಅಜೀಜ್ ಅಹಮದ್, ಸಂಜೆ 6.ಯುಎನ್‌ಐ ಸೌಥೆರ್ನ್ ಎಂಪ್ಲಾಯೀಸ್ ಫೆಡರೇಶನ್: ಯುಎನ್‌ಐ ಬಿಲ್ಡಿಂಗ್, ಮಿಲ್ಲರ್ ಟ್ಯಾಂಕ್ ಬೆಡ್, ವಸಂತನಗರ, `ಯುಎನ್‌ಐ ಸುವರ್ಣ ಮಹೋತ್ಸವ~, ಅತಿಥಿಗಳು- ಕಾನೂನು ಸಚಿವ ಸುರೇಶ್ ಕುಮಾರ್, ಮಾಜಿ ಸಚಿವ ಎಚ್.ಕೆ.ಪಾಟೀಲ್, ಬೆಳಿಗ್ಗೆ 11.30.ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್: `ಕ್ವಾಡ್ರಾಂಗಲ್~, ಬಿಎಂಸಿಆರ್‌ಐ, ಘಟಿಕೋತ್ಸವ ಸಮಾರಂಭ, ಅತಿಥಿಗಳು- ನಾರಾಯಣ ಹೃದಯಾಲಯದ ಸಂಸ್ಥಾಪಕ ಮುಖ್ಯಸ್ಥ ಡಾ.ದೇವಿ ಪ್ರಸಾದ್ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣೇಗೌಡ, ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‌ನ ಕುಲಪತಿ ಡಾ.ಕೆ.ಎಸ್. ಶ್ರೀಪ್ರಕಾಶ್, ಬಿಎಂಸಿಆರ್‌ಐ ನಿರ್ದೇಶಕ ಡಾ.ಒ.ಎಸ್. ಸಿದ್ದಪ್ಪ. ಬೆಳಿಗ್ಗೆ 11.ಸಾಂಸ್ಕೃತಿಕ ಕಾರ್ಯಕ್ರಮಗಳು

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ: ಸುಚಿತ್ರ ಕಿ.ರಂ.ನುಡಿ ಮನೆ. ನಂ.36, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ, `ಸೃಜನಶೀಲ ದಂಪತಿ ವೈಶಿಷ್ಟ್ಯ~, ಎಚ್.ಎ.ಅನಿಲ್ ಕುಮಾರ್ ಮತ್ತು ಸುರೇಖ ಅವರ ಬದುಕು ಬರಹ, ಕೃತಿ ವಾಚನ, ಸಲ್ಲಾಪ, ಸಂವಾದ. ಸಂಜೆ 5.30.ಡಾ.ಪು.ತಿ.ನ.ಟ್ರಸ್ಟ್, ಅನನ್ಯ:  ಸೇವಾ ಸದನ, 14ನೇ ಅಡ್ಡ ರಸ್ತೆ, ಮಲ್ಲೇಶ್ವರ. ಡಾ.ಪು.ತಿ.ನ ಜನ್ಮದಿನದ ಅಂಗವಾಗಿ ಅವರ ಕೃತಿಗಳ ಶಾಸ್ತ್ರೀಯ ಗಾಯನ ಡಾ.ಟಿ.ಎಸ್.ಸತ್ಯವತಿ ಅವರಿಂದ, ಸಹಗಾಯನ- ಅಶ್ವಿನ್ ಸತೀಶ್, ಪಿಟೀಲು- ನಳಿನಾ ಮೋಹನ್, ಮೃದಂಗ- ಕೆ.ಯು.ಜಯಚಂದ್ರ ರಾವ್, ಘಟಂ- ದಯಾನಂದ ಮೋಹಿತೆ, ಸಂಜೆ 6.ಗುಂಡಯ್ಯ ಮುನಿಯಮ್ಮ ಸಾಂಸ್ಕೃತಿಕ ಪ್ರತಿಷ್ಠಾನ
: ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ಆದರ್ಶ ಅದೃಷ್ಟಶಾಲಿ ದಂಪತಿಗಳ ಸಮಾರಂಭ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸುಗಮ ಸಂಗೀತ. `ಸಾಹಿತ್ಯ ವಿಶಾರದ ಪ್ರಶಸ್ತಿ~ ಪುರಸ್ಕೃತರು ಕವಿ ಡಾ.ದೊಡ್ಡರಂಗೇಗೌಡ. ಗಾಯಕ ಯಶವಂತ ಹಳಿಬಂಡಿ ಮತ್ತು ಆನಂದ ಮಾದಲಗೆರೆ ತಂಡದವರಿಂದ ಸುಗಮ ಸಂಗೀತ. ಉದ್ಘಾಟನೆ- ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ, ಅಧ್ಯಕ್ಷತೆ- ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್, ಅತಿಥಿಗಳು- ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಸಿ.ಕೆ.ರಾಮೇಗೌಡ, ಬಸವನಗುಡಿ ವಿಧಾನ ಸಭಾ ಕ್ಷೇತ್ರದ ಕ.ಸಾ.ಪ. ಅಧ್ಯಕ್ಷ ಎಂ.ಕೆ.ರಂಗಪ್ಪ, ಜಿಲ್ಲಾ ಕ.ಸಾ.ಪ. ಸಂಚಾಲಕ ಎಂ.ತಿಮ್ಮಯ್ಯ, ತೆಲುಗು ಜಂಗಮ ಸಮಾಜ ಸಂಘದ ಸಭಾಧ್ಯಕ್ಷ ಎಂ.ಗುರಪ್ಪ, ಸಂಜೆ 5.ಸಂವಾದ ಟ್ರಸ್ಟ್: ಜಯರಾಮ ಸೇವಾ ಮಂಡಳಿ, 8ನೇ ಬಡಾವಣೆ, ಜಯನಗರ. ಯುಗಾದಿ ಸಂಗೀತ ಸಂಭ್ರಮ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಫಯಾಜ್ ಖಾನ್ ಅವರಿಂದ, ತಬಲಾ- ವಿದ್ವಾನ್ ಗುರುಸಂಗಪ್ಪ ಹೂಗಾರ್, ವಿದ್ವಾನ್ ಮಧು ಭಟ್, ಸಂಜೆ 6.ಫಯಾಜ್ ಖಾನ್: ಧಾರವಾಡದ ಸುಪ್ರಸಿದ್ಧ ಕಿರಣಾ ಘರಾನಾದ ಗಾಯಕರ ಕುಟುಂಬದಲ್ಲಿ ಜನನ. ತಂದೆ ಆಕಾಶವಾಣಿಯ ಪ್ರಸಿದ್ಧ ಕಲಾವಿದ ಉಸ್ತಾದ್ ಅಬ್ದುಲ್ ಖಾದರ್ ಖಾನ್. ಚಿಕ್ಕ ವಯಸ್ಸಿನಲ್ಲಿಯೇ ತಂದೆಯವರಿಂದ ಸಾರಂಗೀ ವಾದನ ಕಲಿತ ಇವರು ಪದ್ಮ ವಿಭೂಷಣ ರಾಮನಾಯಣ್ ಅವರ ಶಿಷ್ಯರು. ಶಾಸ್ತ್ರೀಯ ಗಾಯಕರಲ್ಲದೆ ಭಕ್ತಿ ಸಂಗೀತ, ಗಜಲ್ ಹಾಡುಗಾರಿಕೆಯಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ.ನಿರ್ಮಾಣ್ ಶೆಲ್ಟರ್ಸ್‌, ವೀಯೆಲ್ಲೆನ್ ನಿರ್ಮಾಣ್ ಪುರಂದರ ಪ್ರತಿಷ್ಠಾನ: ಪುರಂದರ ಮಂಟಪ, ಶ್ರೀ ವೆಂಕಟೇಶ್ವರ ದೇವಾಲಯದ ಎದುರು, ನಿಸರ್ಗ ಬಡಾವಣೆ, ಕೊಪ್ಪಗೇಟ್ ಹತ್ತಿರ, ಬನ್ನೇರುಘಟ್ಟ ರಸ್ತೆ. ಡಾ. ಡಿ.ವಿ.ಗುಂಡಪ್ಪ ಅವರ 125ನೇ ಜನ್ಮದಿನೋತ್ಸವ ಮತ್ತು `ನುಡಿ ನಮನ~ ಸಮಾರಂಭ, ಅಧ್ಯಕ್ಷತೆ- ರಂಗ ಕಲಾವಿದ ಮಾಸ್ಟರ್ ಹಿರಣ್ಣಯ್ಯ, ಉಪನ್ಯಾಸ- ಸಾಹಿತಿ ಪ್ರೊ. ಜಿ.ಅಶ್ವತ್ಥನಾರಾಯಣ, ಡಿವಿಜಿ ಕೃತಿಗಳ ಗಾಯನ ಶಂಕರ ಶಾನಭೊಗ್ ಮತ್ತು ತಂಡದವರಿಂದ. ಸಂಜೆ 6.ಸಂವಾದ ಕನ್ನಡ ಮಾಸ ಪತ್ರಿಕೆ: ಸೆನೆಟ್ ಹಾಲ್, ಸೆಂಟ್ರಲ್ ಆವರಣ, `ಸಂಭ್ರಮ; ಸವಾಲು~ ಒಂದು ಚರ್ಚೆ ಹಾಗೂ ವಿಶೇಷಾಂಕ ಬಿಡುಗಡೆ, ಅತಿಥಿಗಳು- ಸಾಹಿತಿ ದೇವನೂರು ಮಹಾದೇವ, ಡಾ.ಬರಗೂರು ರಾಮಚಂದ್ರ, ಪ್ರೊ.ವಿ.ಎಸ್. ಶ್ರೀಧರ್, ಪ್ರೊ. ಮುಜಾಪ್ಫರ್ ಅಸ್ಸಾದಿ, ಎಸ್.ಮರಿಸ್ವಾಮಿ, ಸಂಜೆ 4.30.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್: ಇಂಡಿಯನ್ ಕಾರ್ಟೂನ್ ಗ್ಯಾಲರಿ, ಮಿಡ್ ಫೋರ್ಡ್ ಹೌಸ್, ಮಿಡ್‌ಫೋರ್ಡ್ ಗಾರ್ಡನ್, ಎಂ.ಜಿ.ರಸ್ತೆ, ಬಿಗ್ ಕಿಡ್ಸ್ ಕೆಂಪ್ ಹತ್ತಿರ. ಜಗದೀಶ್ ಕುಂಟೆ ಅವರ `ಸಿಲ್ಕನ್ ಪಿಂಚಸ್~ ವ್ಯಂಗ್ಯಚಿತ್ರ ಪ್ರದರ್ಶನ. ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಬೆಳಿಗ್ಗೆ 10. ಮಾರ್ಚ್ 31ರ ವರೆಗೆ ಪ್ರದರ್ಶನವಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.