ಬೀದರ್: ರಮ್ಜಾನ್ ಮಾಸ ಶುರುವಾಗುತ್ತಿದ್ದಂತೆಯೇ ನಗರದಲ್ಲಿ ಹಲವು ಖಾದ್ಯದ ಅಂಗಡಿಗಳು ತೆರೆದುಕೊಂಡಿವೆ. ತರಹೇವಾರಿ ಖರ್ಜೂರ, ಮಾಂಸ ಖಾದ್ಯ, ನಾನ್ ವೆಜ್ ಸೂಪ್ ಹೆಚ್ಚು ಗಮನ ಸೆಳೆಯುತ್ತಿದ್ದು, ಸಂಜೆಯಾಗುತ್ತಿದ್ದಂತೆಯೇ ಖಾದ್ಯದ ಅಂಗಡಿಗಳು ತುಂಬಿ ತುಳುಕುತ್ತಿವೆ.

ತಾತ್ಕಾಲಿಕವಾಗಿ ತೆರೆದುಕೊಂಡಿರುವ ಹೋಟೆಲ್ ಹಾಗೂ ಸಣ್ಣಪುಟ್ಟ ಅಂಗಡಿಗಳಲ್ಲಿ ದಖನಪ್ರದೇಶದ ಜನಪ್ರಿಯ ಖಾದ್ಯ ಹರೀಸ್ ಸೇವಿಸಲು ಜನರು ಮುಗಿ ಬೀಳುತ್ತಿದ್ದಾರೆ. ತರಹೇವಾರಿ ಮಾಂಸಾಹಾರದ ಖಾದ್ಯಕ್ಕೆ ಹೈದರಾಬಾದ್ ನಗರ ಪ್ರಸಿದ್ಧಿ ಪಡೆದಿದೆ. ರಮ್ಜಾನ್ ಮಾಸದಲ್ಲಿ ಖಾದ್ಯ ಸೇವಿಸಲೆಂದೇ ಜನ ಈ ಮೊದಲು ಹೈದರಾಬಾದ್ ಗೆ ಹೋಗುತ್ತಿದ್ದರು. ಬೇಡಿಕೆ ಹಾಗೂ ಪೈಪೋಟಿ ಹೆಚ್ಚಾಗಿರುವ ಕಾರಣ ಅಲ್ಲಿಯ ಮಾಣಿಗಳು ಇಲ್ಲೇ ಬಂದು ಠಿಕಾಣಿ ಹೂಡಿದ್ದಾರೆ.

‘ಹರೀಸ್್’ ಹೆಸರಿನ ಅಡಿಯಲ್ಲಿಯೇ ಆಕರ್ಷಕ ಫಲಕಗಳನ್ನು ಸಿದ್ಧಪಡಿಸಿ ಜನನಿಬಿಡ ಸ್ಥಳಗಳಲ್ಲಿ ಅಂಗಡಿಗಳು ತೆರೆಯಲಾಗಿದೆ.
ಮಾಂಸದ ದರಕ್ಕೆ ಅನುಗುಣವಾಗಿ ಹರೀಸ್ ಮಾರಾಟವಾಗುತ್ತಿದೆ. ಚಿಕನ್, ಮಟನ್ ಹಾಗೂ ಬೀಫ್್ ಹೀಗೆ ಮೂರು ವಿಧಗಳಲ್ಲಿ ಹರೀಸ್್ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.

ಅಂಗಡಿಗಳ ಮುಂದೆ ದೊಡ್ಡ ಆಯತಾಕಾರದಲ್ಲಿ 6 ಅಡಿ ಅಗಲ ಹಾಗೂ 6 ಅಡಿ ಉದ್ದ ಹಾಗೂ ಮೂರು ಅಡಿ ಎತ್ತರದ ಬೃಹದಾಕಾರದ ಒಲೆಗಳನ್ನು ನಿರ್ಮಿಸಿ ಅದರೊಳಗೆ ದೊಡ್ಡ ಹಂಡೆ ಇಟ್ಟು ಸುತ್ತಲೂ ಕಟ್ಟೆ ಕಟ್ಟಲಾಗಿದೆ.

ಒಂದು ಬದಿಗೆ ಮಾತ್ರ ಕಿಂಡಿ ಬಿಟ್ಟು ಒಳಗಡೆ ಕಟ್ಟಿಗೆ ಉರಿದು ದಿನದ 24 ಗಂಟೆಯೂ ಕಿಚ್ಚು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇದರಲ್ಲಿ ತಯಾರಾಗುವ ಸೂಪ್ ದಿನದ 12 ಗಂಟೆಯೂ ಕುದಿಯುತ್ತಲೇ ಇರುತ್ತದೆ. ಹದವಾಗಿ ಬೇಯ್ದ ಮಾಂಸವು ಪಾಯಸ ರೂಪ ಪಡೆದ ನಂತರ ಸೇವಿಸಲು ಸಿದ್ಧವಾಗುತ್ತದೆ.

ಸಿದ್ಧಪಡಿಸಲು 12 ಗಂಟೆ ಬೇಕು: ಮಾಂಸ, ಹಸಿ ಮೆಣಸಿನಕಾಯಿ, ಪುದಿನಾ, ಕೊತಂಬರಿ, ಸಾಸಿವೆ, ಕಾಳುಮೆಣಸು, ಗರಂ ಮಸಾಲೆ, ಜಾಜಿಕಾಯಿ ಸೇರಿ ಐದು ಬಗೆಯ ಮಸಾಲೆ ಸಾಮಗ್ರಿ, ರವಾ, ತುಪ್ಪ, ಹಾಲು ಬಳಸಲಾಗುತ್ತದೆ.

ಹಂಡೆಯಲ್ಲಿ ನೀರು ಹಾಕಿ ಹಂತವಾಗಿ ಮಾಂಸ ಮಸಾಲೆ ಸಾಮಗ್ರಿ ಇನ್ನಿತರ ಅಗತ್ಯ ವಸ್ತುಗಳನ್ನು ಸುರಿದು ಬೆಳಿಗ್ಗೆಯಿಂದ ಸಂಜೆಯ ವರೆಗೂ ಹಂಡೆಯಲ್ಲಿ ಹುಟ್ಟು ಹಾಕಿ ಹದವಾಗಿ ಕನಿಷ್ಠ 12 ಗಂಟೆ ಕಾಲ ತಿರುವಬೇಕು. ಅಂದಾಗ ಅದು ಸಿದ್ಧವಾಗುತ್ತದೆ ಎಂದು ಹೇಳುತ್ತಾರೆ ಬಾಣಸಿಗ ಮೊಮಹ್ಮದ್ ತಹೀರಖಾನ್.

ಇಂದು ಮಾರುಕಟ್ಟೆಯಲ್ಲಿ ಚಿಕನ್, ಮಟನ್ ಹಾಗೂ ಬೀಫ್ ಹರೀಸ್ ಸಿಗುತ್ತದೆ. ಚಿಕನ್ ಮೆದುವಾಗಿರುವ ಕಾರಣ ಚಿಕನ್ ಹರೀಸ್ ತಯಾರಾಗಲು ಕನಿಷ್ಠ 8 ಗಂಟೆಯಾದರೂ ಬೇಕು. ಮಟನ್ (ಕುರಿ ಮಾಂಸ) ಹಾಗೂ ಬೀಫ್ ಹರೀಸ್ ಸಿದ್ಧಗೊಳ್ಳಲು 12 ಗಂಟೆ ಬೇಕಾಗುತ್ತದೆ. ಮಾಂಸದ ಸಣ್ಣ ಸಣ್ಣ ತುಣುಕು ಮಾಡಿ ಅದಕ್ಕೆ ಖಿಮಾ ರೂಪ ನೀಡಲಾಗುತ್ತದೆ. ನಂತರ ಮಸಾಲೆ ಸಾಮಗ್ರಿಗಳನ್ನು ಬಳಸಿ ದಿನವಿಡಿ ಕುದಿಸಿ ಅದಕ್ಕೆ ಪಾಯಸ ರೂಪ ನೀಡಲಾಗುತ್ತದೆ. ಒಮ್ಮೆ ತಯಾರಾದ ಹರೀಸ್ ಅನ್ನು ಇಡುವ ಹಾಗಿಲ್ಲ. ಅವತ್ತೇ ಸೇವಿಸಬೇಕಾಗುತ್ತದೆ. ಇಲ್ಲದೆ ಹೋದರೆ ಅದರ ರುಚಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಅವರು.

ಆರೋಗ್ಯಕ್ಕೆ ಉತ್ತಮ: ದಿನವಿಡಿ ಉಪವಾಸ ಮಾಡಿ ಒಮ್ಮೆಲೇ ಗಟ್ಟಿ ಆಹಾರ ಸೇವಿಸುವುದು ಸೂಕ್ತವಾಗಿರುವುದಿಲ್ಲ. ಹೀಗಾಗಿ ತೆಳು ಆಹಾರವನ್ನು ಸಿದ್ಧಪಡಿಸಲಾಗುತ್ತದೆ. ಹರೀಸ್ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹಾಗೂ ಪೋಷಕಾಂಶಗಳು ಕಡಿಮೆಯಾಗದಂತೆ ಮಾಡುತ್ತದೆ. ದೇಹದಲ್ಲಿ ಚೈತನ್ಯ ತುಂಬುತ್ತದೆ. ಹೀಗಾಗಿ ಈ ಮಾಸದಲ್ಲಿ ಹರೀಸ್ ಬೇಡಿಕೆ ಹೆಚ್ಚು ಎನ್ನುತ್ತಾರೆ ಖಾದ್ಯಪ್ರಿಯ ಖಾಜಿ ಅಲಿಯೋದ್ದಿನ್ (ಅಲಿಬಾಬಾ). ಮೂಲತಃ ಇದು ಸೌದಿ ಅರೆಬಿಯಾದ ಖಾದ್ಯವಾಗಿದೆ.

ಜನಪ್ರಿಯಗೊಂಡು ಇಲ್ಲಿಯ ವರೆಗೂ ಬಂದಿದೆ. ಮೊದ ಮೊದಲು ಹೈದರಾಬಾದ್ ನಲ್ಲಿ ಮಾತ್ರ ಮಾಡಲಾಗುತ್ತಿದ್ದ ಈ ಖಾದ್ಯ 30 ವರ್ಷಗಳ ಹಿಂದೆ ಬೀದರ್ ನಗರಕ್ಕೂ ಪ್ರವೇಶ ಮಾಡಿದೆ. ಅದರ ಸ್ವಾದ ನಗರದಲ್ಲಿ ದೊಡ್ಡ ಮಾರುಕಟ್ಟೆಯನ್ನೇ ಸೃಷ್ಟಿಸಿದೆ.

ಅಂತೆಯೇ ಪುರುಷರು ಹೋಟೆಲ್ ನಲ್ಲೇ ತಿಂದು ಬಿಸಿ ಬಿಸಿಯಾದ ಹರೀಸ್ ಅನ್ನು ಮನೆ ಮಂದಿಗೂ ಕಟ್ಟಿಕೊಂಡು ಹೋಗುತ್ತಿದ್ದಾರೆ.

ಒಂಟೆ ಮಾಂಸದಿಂದ ತಯಾರಿಸಲಾದ ಹರೀಸ್ ಸಹ ದೊರೆಯುತ್ತದೆ. ಅದರ ರುಚಿ ಅರಿತಿರುವ ಆಯ್ದ ಜನರು ಮಾತ್ರ ಅದರ ಸೇವನೆ ಮಾಡುತ್ತಾರೆ
ಮೊಹಮ್ಮದ್ ಯುಸೂಫ್, ಹರೀಸ್ ತಯಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.