ಹಾವೇರಿ: `ನಗರಕ್ಕೆ ಪೂರೈಸುವ ಕುಡಿಯುವ ನೀರನ್ನು ನಗರಸಭೆ ಸರಿಯಾಗಿ ಶುದ್ಧೀಕರಿಸದೇ ಜನತೆಗೆ ಕೊಳಕು ಮಿಶ್ರಿತ ನೀರು ಸರಬರಾಜು ಮಾಡಲಾಗುತ್ತಿದೆ' ಎಂದು ಸಂಯುಕ್ತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಕೋರಿಶೆಟ್ಟರ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಮಳೆಗಾಲದಲ್ಲಿಯೂ ಕುಡಿಯುವ ನೀರನ್ನು ಎಂಟು-ಹತ್ತು ದಿನಗಳಿಗೊಮ್ಮೆ ಒಂದು ಗಂಟೆ ಕಾಲ ಪೂರೈಸುತ್ತಿದೆ. ಜನರು ಸಂಗ್ರಹಿಸಿಟ್ಟುಕೊಂಡ ನೀರಿನ ತಳದಲ್ಲಿ ಎರಡ್ಮೂರು ಇಂಚು ಮಣ್ಣಿನಂತಹ ಕೊಳಕು ನಿಂತಿರುತ್ತದೆ. ನೀರು ಸ್ವಲ್ಪ ಅಲುಗಾಡಿದರೆ ಸಾಕು, ಅದು ನೀರಿನ ಜತೆ ಸೇರಿ ಗಡುಸಾಗಿ ಕುಡಿಯದಂತಾಗುತ್ತದೆ' ಎಂದು ಹೇಳಿದ್ದಾರೆ.

`ನಗರದಲ್ಲಿ ದೊಡ್ಡದಾದ ಜಲ ಶುದ್ಧೀಕರಣ ಘಟಕ ಇದ್ದರೂ, ಅದರಲ್ಲಿ ನೀರು ಶುದ್ಧೀಕರಣಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಸಮರ್ಪಕವಾಗಿ ಬಳಸದಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಜನರು ಬೇರೆ ದಾರಿ ಇಲ್ಲದೇ ಇದೇ ನೀರನ್ನು ಅಡುಗೆ ಮಾಡಲು ಹಾಗೂ ಕುಡಿಯಲು ಬಳಸುತ್ತಿದ್ದಾರೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಆಸ್ಪತ್ರೆ ಸೇರುವಂತೆ ಮಾಡಿದೆ' ಎಂದು ಹೇಳಿದ್ದಾರೆ.

`ನೀರಿನ ಶುದ್ಧೀಕರಣ ಘಟಕದ ನಿರ್ವಹಣೆಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ನಗರಸಭೆ, ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಸದೇ ರಾಡಿ ಮಿಶ್ರಿತ ನೀರನ್ನು ಪೂರೈಕೆ ಮಾಡುವ ಮೂಲಕ ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ಕೂಡಲೇ ನಗರಸಭೆ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ನೀರನ್ನು ಸರಿಯಾಗಿ ಶುದ್ಧೀಕರಣ ಮಾಡುವತ್ತ ಗಮನ ಹರಿಸಬೇಕಲ್ಲದೇ, ರಾಡಿ ನೀರನ್ನು ಪೂರೈಕೆ ಮಾಡುತ್ತಿರುವ ನಗರಸಭೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಕೋರಿಶೆಟ್ಟರ್ ಒತ್ತಾಯಿಸಿದ್ದಾರೆ.

ಸುಳ್ಳು ಮಾಹಿತಿ: `ನಗರದ ನೀರಿನ ಮೂಲಗಳಾದ ತುಂಗಭದ್ರಾ ಹಾಗೂ ವರದಾ ನದಿಗಳು ತುಂಬಿ ಹರಿಯುತ್ತಿವೆ. ಆದರೂ ಸಮರ್ಪಕ ನೀರು ಪೂರೈಸಲು ನಗರಸಭೆಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣಗಳೇನು ಎಂಬುದು ಉತ್ತರ ಸಿಗಲಾರದ ಪ್ರಶ್ನೆಯಾಗಿದೆ. ಆದರೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮಾತ್ರ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಮಾಹಿತಿಯಲ್ಲಿ ಯಾವುದೇ ಕುಡಿಯುವ ನೀರಿನ ಸಮಸ್ಯೆ ನಗರದಲ್ಲಿ ಇಲ್ಲ' ಎಂದು ಹೇಳಿದ್ದಾರೆ.

`ತುಂಗಭದ್ರಾ ಹಾಗೂ ವರದಾ ನದಿಯಿಂದ ಸಮರ್ಪಕ ನೀರು ದೊರೆಯುತ್ತಿದ್ದು, ಈ ನದಿಗಳನ್ನು ನೀರನ್ನು ಪ್ರತಿ ವಾರಕ್ಕೆ ಒಂದು ಇಲ್ಲವೇ ಎರಡು ಬಾರಿ ಪೂರೈಸಲಾಗುತ್ತಿದೆ. ನಗರದಲ್ಲಿರುವ 239 ಬೋರ್ವೆಲ್ಗಳಿಂದ ನಗರದ ಜನತೆಗೆ ಪ್ರತಿ ದಿನವೂ ನೀರು ನೀಡಲಾಗುತ್ತದೆ' ಎಂದು ತಿಳಿಸಿದ್ದಾರೆ.

`ನಗರದಲ್ಲಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ನದಿ ನೀರನ್ನು ಹಾಗೂ ಪ್ರತಿ ದಿನ ಬೋರ್ವೆಲ್ ನೀರನ್ನು ಪೂರೈಕೆ ಮಾಡುತ್ತಿದ್ದರೆ, ನಗರದ ಜನತೆ ಖಾಲಿ ಕೊಡಗಳನ್ನು ಹಿಡಿದು ಏಕೆ ಪ್ರತಿಭಟನೆ ಮಾಡುತ್ತಿದ್ದರು ಎಂದು ಪ್ರಶ್ನಿಸಿರುವ ಕೋರಿಶೆಟ್ಟರ್ ಅವರು, ಯೋಜನಾ ನಿರ್ದೇಶಕರು ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಯಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ನಗರದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ' ಎಂದು ಆಪಾದಿಸಿದ್ದಾರೆ.

`ಅಲ್ಲದೇ ಹಾವೇರಿ ನಗರದ ಕುಡಿಯುವ ನೀರಿನ ಪೂರೈಕೆ, ಅದಕ್ಕೆ ಖರ್ಚು ಮಾಡಿರುವ ಹಣ ಹಾಗೂ ನೀರಿನ ಕರ ಏರಿಕೆ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಆದೇಶ ನೀಡಿ ಹದಿನೈದು ದಿನಗಳು ಕಳೆದರೂ ಈವರೆಗೆ ತನಿಖೆ ನಡೆಸದೇ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ' ಎಂದು ಹೇಳಿದ್ದಾರೆ.

`ಈಗಾಗಲೇ ನೀರಿನ ಅವ್ಯವಸ್ಥೆ ಬಗ್ಗೆ ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಅವರೇ ಬೇಜಾರುಗೊಂಡು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಇಂತಹದರಲ್ಲಿ ಅಧಿಕಾರಿಗಳು ನೀಡುವ ತಪ್ಪು ಮಾಹಿತಿಯನ್ನು ಕೇಳಿ ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಜಿಲ್ಲಾಧಿಕಾರಿಗಳು ಒಮ್ಮೆ ನಗರ ಪ್ರದಕ್ಷಿಣೆ ಮಾಡಿ ವಸ್ತುಸ್ಥಿತಿಯನ್ನು ಅರಿತು ಸಮರ್ಪಕ ಹಾಗೂ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕಲ್ಲದೇ, ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಪ್ರತಿಭಟನೆಗೆ ಮುಂದಾಗಲಾಗುವುದು' ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.