ಬೆಂಗಳೂರು: ನಗರ ಪ್ರದೇಶಗಳಲ್ಲಿನ ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಒದಗಿಸುವ ‘ನಗರ ಯಶಸ್ವಿನಿ’ ಯೋಜನೆ ಜಾರಿಗೆ ಸಹಕಾರ ಇಲಾಖೆ ಆದೇಶ ಹೊರಡಿಸಿದೆ.

2014–15ನೇ ಸಾಲಿನ ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ನೋಂದಣಿ ಪ್ರಕ್ರಿಯೆ ಇದೇ 15ರಿಂದ ಆರಂಭವಾಗಲಿದ್ದು, ಮೇ 31ಕ್ಕೆ ಅಂತ್ಯವಾಗಲಿದೆ.

ರೈತರ ಯಶಸ್ವಿನಿ ಯೋಜನೆಯಡಿ ಒಬ್ಬರಿಗೆ ವಾರ್ಷಿಕ ವಂತಿಗೆಯನ್ನು ಈಗ ರೂ. 250ಕ್ಕೆ ಏರಿಸಲಾಗಿದೆ. ಆದರೆ, ನಗರ ಯಶಸ್ವಿನಿ ಯೋಜನೆಯ ವಂತಿಗೆಯನ್ನು ರೂ. 1,010 ಎಂದು ನಿಗದಿಪಡಿಸಲಾಗಿದೆ.

ಗ್ರಾಮೀಣ ಭಾಗದಲ್ಲಿನ ಪರಿಶಿಷ್ಟರಿಗೆ ಸರ್ಕಾರವೇ ವಂತಿಗೆ ಪಾವತಿಸುತ್ತಿತ್ತು. ಆದರೆ, ನಗರ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರು ತಮ್ಮ ಜೇಬಿನಿಂದ ರೂ. 810 ವಂತಿಗೆ ಪಾವತಿಸಬೇಕು. ಇದರ ಜತೆಗೆ ರಾಜ್ಯ ಸರ್ಕಾರ ರೂ. 200 ಪಾವತಿಸಲಿದೆ. ಪ್ರತಿಯೊಬ್ಬ ಸದಸ್ಯರಿಂದ ಸಂಗ್ರಹಿಸುವ ವಂತಿಗೆಯಲ್ಲಿ ರೂ. 10ನ್ನು ಸಹಕಾರ ಸಂಘಗಳು ಇಟ್ಟುಕೊಳ್ಳಲಿವೆ. ಉಳಿದ ರೂ. 1,000ಯನ್ನು ಯಶಸ್ವಿನಿ ಟ್ರಸ್ಟ್ಗೆ ಸಂದಾಯ ಮಾಡಬೇಕಾಗುತ್ತದೆ ಎಂದು ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ಕುಟುಂಬವೊಂದರಲ್ಲಿ ಐವರಿಗಿಂತ ಹೆಚ್ಚು ಮಂದಿ ಇದ್ದರೆ, ಅಂತಹವರು ಪಾವತಿಸುವ ವಂತಿಗೆಯಲ್ಲಿ ಶೇ 15ರಷ್ಟು ರಿಯಾಯಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ನವಜಾತ ಶಿಶುವಿನಿಂದ ಹಿಡಿದು 75 ವರ್ಷದ ವರೆಗಿನವರು ಯೋಜನೆಯ ಲಾಭ ಪಡೆಯಬಹುದು. ಹೆಸರು ನೋಂದಾಯಿಸಿಕೊಂಡ ಮೂರು ತಿಂಗಳ ನಂತರ ಶಸ್ತ್ರಚಿಕಿತ್ಸೆಗೆ ಅರ್ಹರಾಗುತ್ತಾರೆ’ ಎಂದು ಯಶಸ್ವಿನಿ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಎಂ.ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರ ಯಶಸ್ವಿನಿ ಯೋಜನೆಯ ಫಲಾನುಭವಿಗಳು ಗರಿಷ್ಠ ರೂ. 2ಲಕ್ಷ ವೆಚ್ಚದವರೆಗೆ ಚಿಕಿತ್ಸೆ ಪಡೆಯ ಬಹುದು. ನಗರ ಯಶಸ್ವಿನಿ ಯೋಜನೆಯಡಿ ಈ ಮಿತಿ ರೂ. 2.5 ಲಕ್ಷ.

ನಗರ ಪ್ರದೇಶಗಳಲ್ಲಿ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆ ಜಾಸ್ತಿ (ಅಂದಾಜು ಪ್ರಕಾರ 100 ಸದಸ್ಯರಲ್ಲಿ 7 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗು ತ್ತಾರೆ). ಈ ಕಾರಣಕ್ಕೆ ವಂತಿಗೆ ಪ್ರಮಾಣ ಹೆಚ್ಚಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ಇದು ಸ್ವಯಂ ಬಂಡವಾಳ ಯೋಜನೆ ಯಾಗಿರುವ ಕಾರಣ ಸದಸ್ಯರು ಕೊಡುವ ವಂತಿಗೆ ಹಣದಲ್ಲೇ ಚಿಕಿತ್ಸೆ ಕೊಡಿಸಲಾಗುತ್ತದೆ. ಹೆಚ್ಚು ಹೆಚ್ಚು ಸಹಕಾರಿಗಳು ಸದಸ್ಯರಾದರೆ ಮಾತ್ರ ಇದು ಯಶಸ್ವಿ ಆಗುತ್ತದೆ.

ನಗರ ಪ್ರದೇಶಗಳಲ್ಲಿನ ಸಹಕಾರ ಸಂಘಗಳಲ್ಲಿ 75.65 ಲಕ್ಷ ಸದಸ್ಯರಿದ್ದಾರೆ. ಇವರಲ್ಲಿ ಈ ವರ್ಷ ಕನಿಷ್ಠ 30 ಲಕ್ಷ ಮಂದಿಯನ್ನು ಯೋಜನೆ ವ್ಯಾಪ್ತಿಗೆ ತರಲು ಸರ್ಕಾರ ಗುರಿ ಹಾಕಿಕೊಂಡಿದೆ.

823 ಬಗೆ ಶಸ್ತ್ರಚಿಕಿತ್ಸೆಗೆ ಅವಕಾಶ
ನಗರ ಪ್ರದೇಶಗಳಲ್ಲಿನ ಯಶಸ್ವಿನಿ ಫಲಾನುಭವಿಗಳಿಗೂ 823 ವಿವಿಧ ರೀತಿಯ ಶಸ್ತ್ರಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 496 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಅರ್ಜಿ ಎಲ್ಲಿ ಸಿಗುತ್ತದೆ?
ಸದಸ್ಯರು ತಮ್ಮ ಸಹಕಾರ ಸಂಘಗಳ ಕಚೇರಿಗಳಿಂದಲೇ ಅರ್ಜಿ ನಮೂನೆ ಪಡೆಯಬೇಕು. ವಂತಿಗೆ ಜತೆಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಂಘಗಳಲ್ಲೇ ಕೊಟ್ಟು ಗುರುತಿನ ಚೀಟಿ ಪಡೆಯಬೇಕು.

ಯಾರು ಅರ್ಹರು...?
ನೌಕರರ ಸಹಕಾರ ಸಂಘಗಳ ಸದಸ್ಯರು ಮಾತ್ರ ಈ ಯೋಜನೆಯ ಅನುಕೂಲ ಪಡೆಯಲು ಅರ್ಹರಲ್ಲ. ಗೃಹ ನಿರ್ಮಾಣ ಸಹಕಾರ ಸಂಘಗಳು, ಆಟೋ ಚಾಲಕರ ಸಹಕಾರ ಸಂಘಗಳು, ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಗಳು ಸೇರಿದಂತೆ ಉಳಿದ ಎಲ್ಲ ರೀತಿಯ ಸಹಕಾರ ಸಂಘಗಳ ಸದಸ್ಯರು ಈ ಯೋಜನೆ ವ್ಯಾಪ್ತಿಗೆ ಬರಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.