ಇಬ್ಬರು ಆಟಗಾರ್ತಿಯರ ಜೊತೆ ಕಿಡಿಗೇಡಿಯೊಬ್ಬ ಅಸಭ್ಯವಾಗಿ ನಡೆದುಕೊಂಡ ಘಟನೆಯಿಂದ ನೋವಾಗಿದೆ ಮತ್ತು ಆಘಾತವಾಗಿದೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
‘ಯಾವುದೇ ಮಹಿಳೆ ಇಂಥ ಮಾನಸಿಕ ಆಘಾತ ಎದುರಿಸುವಂತಾಗಬಾರದು. ಅವರಿಗೆ ನಮ್ಮ ನೈತಿಕ ಬೆಂಬಲ ಇದೆ. ಇಂಥ ಘಟನೆ ನಡೆದಿರುವುದು ದುರದೃಷ್ಟಕರ’ ಎಂದೂ ಹೇಳಿದೆ.