ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ 9 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಭಾರತವು ವೈಟ್ವಾಶ್ನಿಂದ ಪಾರಾಗಿದೆ.

ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ರನ್ ಮಳೆ ಹರಿಸುವ ಮೂಲಕ ಭಾರತವು 38.3 ಓವರ್ಗಳಲ್ಲಿ ಸುಲಭವಾಗಿ ಗುರಿ ಮುಟ್ಟಿತು.

ಹಲವು ತಿಂಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುತ್ತಿರುವ ವಿರಾಟ್, ರೋಹಿತ್ ಅವರು ಸರಣಿಯ ಮೂರನೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದರು.
.Ind vs AUS | ರೋ–ಕೊ ಜೋಡಿ ಕಮಾಲ್: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು.
ರೋಹಿತ್ ಶರ್ಮಾ ದಾಖಲೆಗಳು:

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳ ಅರ್ಧಶತಕ: ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸುವ ಮೂಲಕ, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 50 ಶತಕಗಳನ್ನು ಪೂರೈಸಿದರು. ಏಕದಿನದಲ್ಲಿ 33 ಶತಕ, ಟೆಸ್ಟ್ನಲ್ಲಿ 12 ಶತಕ ಹಾಗೂ ಟಿ–20 ಕ್ರಿಕೆಟ್ನಲ್ಲಿ 5 ಶತಕಗಳನ್ನು ಸಿಡಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ 5ಕ್ಕಿಂತ ಹೆಚ್ಚು ಶತಕ ಸಿಡಿಸಿದ ಏಕೈಕ ಆಟಗಾರ ಎನ್ನುವ ದಾಖಲೆ ಬರೆದರು.

ಆಸ್ಟ್ರೇಲಿಯಾದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಪ್ರವಾಸಿ ಆಟಗಾರ: ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ 6 ಶತಕಗಳನ್ನು ಬಾರಿಸಿದ್ದು, 5 ಶತಕಗಳನ್ನು ಸಿಡಿಸಿದ್ದ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದರು. ಆಸ್ಟ್ರೇಲಿಯಾ ವಿರುದ್ಧ 9 ಶತಕಗಳನ್ನು ಬಾರಿಸಿರುವ ರೋಹಿತ್, ಒಂದೇ ತಂಡದ ವಿರುದ್ಧ ಅತಿಹೆಚ್ಚು ಶತಕ ಸಿಡಿಸಿರುವ ಎರಡನೇ ಆಟಗಾರರಾಗಿದ್ದಾರೆ. ವಿರಾಟ್ ಅವರು ಶ್ರೀಲಂಕಾ ವಿರುದ್ಧ 10 ಶತಕಗಳನ್ನು ಬಾರಿಸಿದ್ದಾರೆ.

ಆಸೀಸ್ ವಿರುದ್ಧ 2,500 ರನ್: ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ 2,500 ರನ್ ಬಾರಿಸಿದರು. ಈ ದಾಖಲೆ ಮಾಡಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ಈ ದಾಖಲೆ ಮಾಡಿದ್ದರು.

100ನೇ ಕ್ಯಾಚ್: ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾದ ನಥಾನ್ ಎಲ್ಲಿಸ್ ಅವರ ಕ್ಯಾಚ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ 100 ಕ್ಯಾಚ್ ಪಡೆದ ಸಾಧನೆ ಮಾಡಿದರು.

ಏಕದಿನದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಹಿರಿಯ ಆಟಗಾರ: ಸರಣಿಯ 3 ಪಂದ್ಯಗಳಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ 202 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಏಕದಿನ ಕ್ರಿಕೆಟ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಭಾರತದ ಹಿರಿಯ ಆಟಗಾರ ಎನ್ನುವ ಖ್ಯಾತಿಗೆ 38 ವರ್ಷ 178 ದಿನ ವಯಸ್ಸಿನ ರೋಹಿತ್ ಪಾತ್ರರಾದರು.

ಪ್ರವಾಸಿ ತಂಡದ ಪರವಾಗಿ ಅತ್ಯಧಿಕ ಸಿಕ್ಸರ್ಗಳು: ರೋಹಿತ್ ಶರ್ಮಾ ಅವರು ಪ್ರವಾಸಿ ತಂಡದ ಪರವಾಗಿ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರ ಎನ್ನುವ ದಾಖಲೆ ಬರೆದರು. 93 ಸಿಕ್ಸರ್ ಸಿಡಿಸಿರುವ ರೋಹಿತ್, 92 ಸಿಕ್ಸರ್ ಬಾರಿಸಿದ್ದ ಕ್ರಿಸ್ ಗೇಲ್ ದಾಖಲೆಯನ್ನು ಮುರಿದರು.

ವಿರಾಟ್ ಕೊಹ್ಲಿ ದಾಖಲೆಗಳು:

ಸೀಮಿತ ಓವರ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್: ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ 74 ರನ್ ಗಳಿಸುವ ಮೂಲಕ ಸೀಮಿತ ಓವರ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರ ಎನ್ನುವ ಖ್ಯಾತಿಗೆ ಪಾತ್ರವಾದರು. ಏಕದಿನ ಹಾಗೂ ಟಿ–20 ಕ್ರಿಕೆಟ್ನಲ್ಲಿ ವಿರಾಟ್ 18,437 ರನ್ ಗಳಿಸಿದ್ದು, 18,436 ರನ್ಗಳಿಸಿದ್ದ ಸಚಿನ್ ದಾಖಲೆಯನ್ನು ಮುರಿದರು.

ಏಕದಿನ ರನ್ ಗಳಿಕೆಯಲ್ಲಿ ಸಂಗಕ್ಕಾರ ದಾಖಲೆ ಮುರಿದ ಕೊಹ್ಲಿ: ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ 293 ಇನಿಂಗ್ಸ್ನಲ್ಲಿ 14,235 ರನ್ಗಳಿಸುವ ಮೂಲಕ, 380 ಇನಿಂಗ್ಸ್ನಲ್ಲಿ14,234 ರನ್ ಗಳಿಸಿದ್ದ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಮುರಿದರು. 18,426 ರನ್ ಗಳಿಸಿರುವ ಸಚಿನ್ ಅಗ್ರಸ್ಥಾನದಲ್ಲಿದ್ದಾರೆ.
.ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಸ್: ಸಂಗಕ್ಕರ ದಾಖಲೆ ಮುರಿದ ಕೊಹ್ಲಿ.
75ನೇ ಅರ್ಧಶತಕ: ಸರಣಿಯ ಕೊನೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ನಲ್ಲಿ 75ನೇ ಅರ್ಧಶತಕ ಬಾರಿಸಿದರು.

ಆಸೀಸ್ ವಿರುದ್ಧ 2,500 ರನ್: ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ 2,500 ರನ್ ಬಾರಿಸಿದರು. ಈ ದಾಖಲೆ ಮಾಡಿದ ಮೂರನೇ ಭಾರತೀಯ ಆಟಗಾರರಾಗಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್, ಹಾಗೂ ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಈ ದಾಖಲೆ ಮಾಡಿದ್ದರು.

ವಿರಾಟ್ ಹಾಗೂ ರೋಹಿತ್ ಅವರು ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ 150 ರನ್ ಜೊತೆಯಾಟ ಆಡಿದ ಜೋಡಿಯಾದರು. ಇದುವರೆಗೂ 12 ಬಾರಿ ಇವರಿಬ್ಬರೂ 150 ರನ್ ಜೊತೆಯಾಟ ಆಡಿದ್ದು, 12 ಬಾರಿ 150 ರನ್ಗಳ ಜೊತೆಯಾಟವಾಡಿದ್ದ ಸಚಿನ್ ಮತ್ತು ಗಂಗೂಲಿ ದಾಖಲೆಯನ್ನು ಸರಿಗಟ್ಟಿದರು.

ವಿರಾಟ್ ಹಾಗೂ ರೋಹಿತ್ ಜೋಡಿ ಏಕದಿನದಲ್ಲಿ 19 ಬಾರಿ ಶತಕದ ಜೊತೆಯಾಟವಾಡಿದ್ದು, ಶಿಖರ್ ಧವನ್ ಹಾಗೂ ರೋಹಿತ್ ಜೋಡಿಯ 18 ಶತಕಗಳ ಜೊತೆಯಾಟದ ದಾಖಲೆ ಮುರಿಯಿತು.

ಇದೇ ಪಂದ್ಯದಲ್ಲಿ ವಿರಾಟ್ ಹಾಗೂ ರೋಹಿತ್ ಜೋಡಿ ಆಸ್ಟ್ರೇಲಿಯಾದಲ್ಲಿ ಸಾವಿರ ರನ್ಗಳ ಜೊತೆಯಾಟದ ದಾಖಲೆಯನ್ನು ಕೂಡ ಬರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.