ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಬಹುತೇಕ ಕೊನೆಯ ಬಾರಿ ಆಡಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಭಾರತ ತಂಡಕ್ಕೆ ಸಮಾಧಾನಕರ ಜಯದ ಕಾಣಿಕೆ ನೀಡಿದರು. ಆತಿಥೇಯ ತಂಡವು ಸರಣಿಯನ್ನು 2–1ರಿಂದ ಗೆದ್ದಿತು. ಆದರೆ ರೋಹಿತ್ ಮತ್ತು ವಿರಾಟ್ ಕೋಟಿ ಕೋಟಿ ಅಭಿಮಾನಿಗಳ ಹೃದಯಗಳನ್ನು ಜಯಿಸಿದರು.

ಶನಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 9 ವಿಕೆಟ್ಗಳಿಂದ ಜಯಿಸಿತು. 237 ರನ್ಗಳ ಸಾಧಾರಣ ಗುರಿಯನ್ನು ಭಾರತ ತಂಡವು ರೋಹಿತ್ ಶರ್ಮಾ (ಅಜೇಯ 121) ಮತ್ತು ವಿರಾಟ್ ಕೊಹ್ಲಿ (ಅಜೇಯ 74) ಅವರ ಮುರಿಯದ ಎರಡನೇ ವಿಕೆಟ್ ಜೊತೆಯಾಟ (168 ರನ್)ದ ನೆರವಿನಿಂದ 38.3 ಓವರ್ಗಳಲ್ಲಿ ಸುಲಭವಾಗಿ ಮುಟ್ಟಿತು.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಹರ್ಷಿತ್ ರಾಣಾ (39ಕ್ಕೆ4) ಮತ್ತು ವಾಷಿಂಗ್ಟನ್ ಸುಂದರ್ (44ಕ್ಕೆ2) ಅವರ ಅಮೋಘ ಬೌಲಿಂಗ್ ಮುಂದೆ ಆಸ್ಟ್ರೇಲಿಯಾ ತಂಡವು 46.4 ಓವರ್ಗಳಲ್ಲಿ 236 ರನ್ ಗಳಿಸಿತು. ಮ್ಯಾಟ್ ರೆನ್ಷಾ (56; 58ಎಸೆತ) ಅವರ ಅರ್ಧಶತಕ ತಂಡಕ್ಕೆ ಆಸರೆಯಾಯಿತು.

ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ರೋಹಿತ್ ಮತ್ತು ನಾಯಕ ಗಿಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. 11ನೇ ಓವರ್ನಲ್ಲಿ ಗಿಲ್ ಔಟಾದರು. ಜೊತೆಯಾಟ ಮುರಿಯಿತು. ಇದಾದ ಮೇಲೆ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ರೋಹಿತ್ ಮತ್ತು ಕೊಹ್ಲಿಯ ‘ವಿಂಟೇಜ್ ಆಟ’ವನ್ನು ಕಣ್ತುಂಬಿಕೊಂಡರು.

ಸರಣಿಯ ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ರೋಹಿತ್ ಇಲ್ಲಿ ಆತ್ಮವಿಶ್ವಾಸಭರಿತ ಆಟವಾಡಿದರು. ಇನಿಂಗ್ಸ್ ಕಟ್ಟುವ ಹೊಣೆ ಹೊತ್ತ ಅವರು ಮಿಚೆಲ್ ಸ್ಟಾರ್ಕ್ ಅವರ ಎಸೆತಗಳಲ್ಲಿ ನಿಖರ ಮತ್ತು ನವೀರಾದ ಡ್ರೈವ್ ಹಾಗೂ ಫ್ಲಿಕ್ಗಳನ್ನು ಆಡಿದ ರೋಹಿತ್, ಸ್ಪಿನ್ನರ್ ಆ್ಯಡಂ ಜಂಪಾ ಎಸೆತದಲ್ಲಿ ಸಿಕ್ಸರ್ ಎತ್ತುವ ಮೂಲಕ ಸ್ಪಿನ್ ಬೌಲಿಂಗ್ಗೂ ಸವಾಲೊಡ್ಡಿದರು. ರೋಹಿತ್ ಏಕದಿನ ಕ್ರಿಕೆಟ್ನಲ್ಲಿ 33ನೇ ಶತಕ ದಾಖಲಿಸಿದರು. ಅವರು ಟೆಸ್ಟ್ನಲ್ಲಿ 12 ಮತ್ತು ಟಿ20 ಕ್ರಿಕೆಟ್ನಲ್ಲಿ ಐದು ಶತಕ ಗಳಿಸಿದ್ದಾರೆ ರೋಹಿತ್ 63 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರದ 50 ರನ್ಗಳನ್ನು 42 ಎಸೆತಗಳಲ್ಲಿ ಸೇರಿಸಿದರು.

ಇನ್ನೊಂದು ಬದಿಯಲ್ಲಿ ಕೊಹ್ಲಿ ಲಯ ಕಂಡುಕೊಂಡರು. ಕಳೆದೆರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಕೊಹ್ಲಿ ಇಲ್ಲಿ ಸ್ಟಾರ್ಕ್ ಎಸೆತವನ್ನು ನೇರ ಡ್ರೈವ್ ಮೂಲಕ ಬೌಂಡರಿಗೆ ಕಳಿಸಿದರು. ಎಂದಿನಂತೆ ಸಿಂಗಲ್ ಮತ್ತು ಡಬಲ್ ರನ್ಗಳನ್ನು ಚುರುಕಾಗಿ ಗಳಿಸುವಲ್ಲಿ ಯಶಸ್ವಿಯಾದರು.

ನೇಥನ್ ಎಲಿಸ್ ಬೌಲಿಂಗ್ನಲ್ಲಿ ಒಂದು ಸಲ ‘ಯುಡಿಆರ್ಎಸ್’ ನಿಂದ ಜೀವದಾನ ಗಳಿಸಿದ ‘ಚೇಸಿಂಗ್ ಮಾಸ್ಟರ್’ 36 ರನ್ ಗಳಿಸಿದ್ದರು. ಅಲ್ಲಿಂದ ಮುಂದೆ ಕೊಹ್ಲಿ ಆಟವನ್ನು ನಿಯಂತ್ರಿಸಲು ಯಾವ ಬೌಲರ್ಗಳಿಗೂ ಸಾಧ್ಯವಾಗಲಿಲ್ಲ. ಕೊಹ್ಲಿ 56 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಕೊಹ್ಲಿ ವಿಜಯದ ರನ್ ಗಳಿಸಲು ಬೌಂಡರಿ ಹೊಡೆದ ನಂತರ ಆಸ್ಟ್ರೇಲಿಯಾದ ಆಟಗಾರರೆಲ್ಲರೂ ಸುತ್ತುವರಿದರು. ರೋಹಿತ್ ಮತ್ತು ಕೊಹ್ಲಿಯ ಕೈಕುಲುಕಿ ಅಭಿನಂದಿಸಿದರು. ಮೈದಾನದಲ್ಲಿದ್ದ ಅಭಿಮಾನಿಗಳು ಪ್ಲೇಕಾರ್ಡ್ಗಳು, ಬ್ಯಾನರ್ಗಳನ್ನು ತೋರಿಸಿ ಇಬ್ಬರೂ ಆಟಗಾರರ ಮೇಲೆ ಅಭಿಮಾನದ ಮಳೆಗರೆದರು.

12–ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಮತ್ತು ಕೊಹ್ಲಿ ಭಾಗಿಯಾದ 150ಕ್ಕೂ ಅಧಿಕ ರನ್ಗಳ ಜೊತೆಯಾಟಗಳು. ಸಚಿನ್ ತೆಂಡೂಲ್ಕರ್–ಸೌರವ್ ಗಂಗೂಲಿ ದಾಖಲೆಯನ್ನು ಸರಿಗಟ್ಟಿದರು

1–ಏಕದಿನ+ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ 18,437 ರನ್ ಗಳಿಸಿದರು. ಇದರೊಂದಿಗೆ ನಿಗದಿಯ ಓವರ್ಗಳ ಕ್ರಿಕೆಟ್ನಲ್ಲಿ ಅಗ್ರಸ್ಥಾನ ಪಡೆದರು. ಈ ಹಾದಿಯಲ್ಲಿ ಅವರು ಸಚಿನ್ ತೆಂಡೂಲ್ಕರ್ (18,436ರನ್) ದಾಖಲೆ ಮೀರಿದರು

6–ರೋಹಿತ್ ಅವರು ಆಸ್ಟ್ರೇಲಿಯಾದಲ್ಲಿ ಗಳಿಸಿದ ಶತಕಗಳು. ಪ್ರವಾಸಿ ಬ್ಯಾಟರ್ ಗಳಿಸಿದ ಅತ್ಯಧಿಕ ಶತಕದ ದಾಖಲೆ ಇದು. ವಿರಾಟ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ತಲಾ 5 ಶತಕ ದಾಖಲಿಸಿದ್ದಾರೆ

100–ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಪಡೆದ ಕ್ಯಾಚ್ಗಳ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.