ರಂಗದ ಮೇಲೆ ನಿಜವಾದ ಪ್ರೀತಿ ಇರುವ ಸಮಾನ ಮನಸ್ಕರು ಕಟ್ಟಿದ ತಂಡ ‘ರಂಗಾವತಾರ್’. ನಟನೆಯ ಹೊಸ ಆಯಾಮಗಳನ್ನು ಹುಡುಕುತ್ತಾ ರಂಗಭೂಮಿಯಲ್ಲಿ ಒಂದಾಗುವ ಕನಸು ಕಂಡ ಕೃಷ್ಣಮೂರ್ತಿ ಕವತ್ತಾರ್ ಈ ತಂಡದ ರೂವಾರಿ.

ಕವತ್ತಾರ್ ಜೊತೆಗೆ ವಿದ್ಯಾರ್ಥಿಗಳಾದ ಪ್ರಮೋದ್ ಶೆಟ್ಟಿ ಹಾಗೂ ಎಂ.ಜಿ. ನವೀನ್ ಕೈಜೋಡಿಸಿದರು. ಪದಾಧಿಕಾರಿಗಳ ಹಂಗು ನಮಗಿಲ್ಲ ಎನ್ನುವ ತಂಡ ಹೊಸ ಕಲಾವಿದರನ್ನು ತನ್ನೊಂದಿಗೆ ಸೇರಿಸಿಕೊಳ್ಳುತ್ತಾ, ವಿಭಿನ್ನ ನಾಟಕಗಳನ್ನು ಮಾಡುವ ಕ್ರಿಯಾಶೀಲರ ಒಕ್ಕೂಟವೇ ಆಗಿದೆ.

‘ಬಹು ಪ್ರೀತಿಯಿಂದ, ರಂಗಭೂಮಿಯ ಒಳಹು ಕಲಿಯುವ ಹೆಬ್ಬಯಕೆಯಿಂದಲೇ ನಾನು 13 ವರ್ಷಗಳ ಹಿಂದೆ ರಂಗಾವತಾರ್ ಹುಟ್ಟು ಹಾಕಿದೆ. ನೀನಾಸಂನಲ್ಲಿ ತರಬೇತಿ ಪಡೆದ ನನ್ನ ರಂಗ ಸಾಧನೆಗಳ ಹೆಗ್ಗಳಿಕೆ ಸಿಗಬೇಕಾದುದು ರಂಗಾವತಾರ್ಗೆ’ ಎನ್ನುವ ಕೃಷ್ಣಮೂರ್ತಿ ಕವತ್ತಾರ್ ರಂಗಭೂಮಿಯನ್ನು ಬದುಕಾಗಿಯೇ ಅನುಭವಿಸಿದವರು.

‘ಮನುಷ್ಯನ ವಿಭಿನ್ನ ಮನಸ್ಥಿತಿಗಳು ರಂಗಭೂಮಿಯ ಮೇಲೆ ಅನಾವರಣಗೊಳ್ಳಲಿವೆ’ ಎನ್ನುವುದು ಅವರ ನಂಬಿಕೆ.ಬೆಂಗಳೂರಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿಗೆ ಕೃಷ್ಣಮೂರ್ತಿ ರಂಗ ತರಬೇತಿ ನೀಡಿದ್ದಾರೆ. ರಂಗಾವತಾರ್ ಮೂಲಕ ಸದಾ ವಿಶಿಷ್ಟ ನಾಟಕಗಳನ್ನು ಮಾಡಲು ಬಯಸುತ್ತಾರೆ. ಹೊಸ ಪ್ರಯೋಗಗಳಿಗೆ ಸದಾ ತೆರೆದುಕೊಳ್ಳುವುದು ಅವರ ಸ್ವಭಾವ.

ರಂಗಾವತಾರ್ ಈವರೆಗೆ 10ರಿಂದ 12 ನಾಟಕಗಳನ್ನು ಮಾತ್ರ ಮಾಡಿದೆ. ‘ಹೊಸ ನಾಟಕಗಳನ್ನು ನೀಡಬೇಕು ಎನ್ನುವ ಹಪಾಹಪಿ ನಮಗಿಲ್ಲ. ತಂಡದ ಸದಸ್ಯರೆಲ್ಲರಿಗೂ ಮಾನಸಿಕ ಬಿಡುವು ಸಿಕ್ಕಾಗ ಅದ್ಭುತವಾದ ನಾಟಕವೊಂದು ಸೆಟ್ಟೇರುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಕವತ್ತಾರ್. ಡಿ.ಕೆ.ಚೌಟ ಅವರ ‘ಧರ್ಮೆತ್ತಿ ಮಾಯೆ’ ನಾಟಕ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶಿತವಾಗಿದೆ. ಶಿವಳ್ಳಿ ತುಳುವಿನಲ್ಲಿರುವ ‘ಶಾರ್ದೋ’ 15 ಷೋ ಕಂಡಿದೆ.

ಪ್ರಮುಖ ನಾಟಕಗಳು
ರಾಘವೇಂದ್ರ ಪಾಟೀಲರ ‘ಲಯ’, ಬಿ.ಆರ್.ಲಕ್ಷ್ಮಣರಾಯರ ‘ಮಲೆ ಮಲ್ಲೇಶ’, ಡಿ.ಕೆ.ಚೌಟ ಅವರ ‘ಹುಲಿ ಮತ್ತು ಹುಡುಗಿ’, ‘ಮೂಜಿ ಮುಟ್ಟು, ಮೂಜಿ ಲೋಕ’, ‘ಯುಗಾಂತ್ಯ’, ಬೇಂದ್ರ ಕವನ ಆಧರಿಸಿದ ‘ಅನ್ನಾವತಾರ’, ‘ಕರಿಯಜ್ಜನ ಕತೆ’, ‘ಸಾಯುವನೇ ಚಿರಂಜೀವಿ’ ಮುಂತಾದ ನಾಟಕಗಳನ್ನು ಈ ತಂಡ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದಲ್ಲಿ ಅಭಿನಯಿಸಿದೆ.

ಏಕವ್ಯಕ್ತಿ ನಾಟಕ ಪ್ರದರ್ಶನವಾದ ‘ಸಾಯುವನೇ ಚಿರಂಜೀವಿ’ ಈವರೆಗೆ 110 ಪ್ರದರ್ಶನ ಕಂಡಿದೆ. ಯಕ್ಷಗಾನದ ಕುಣಿತ, ನಟನೆ, ಮಾತು ಹೀಗೆ ವಿಭಿನ್ನ ಆಯಾಮವಿರುವ ಈ ಏಕವ್ಯಕ್ತಿ ಪ್ರದರ್ಶನವನ್ನು ರಂಗಾವತಾರ್ ತಂಡದ ಮೂಲಕ ನಡೆಸಲಾಗುವ ಸೆಮಿನಾರ್ಗಳಲ್ಲೂ ಬಳಸಿಕೊಳ್ಳಲಾಗಿದೆ.

ನಟನೆಯ ಬಗ್ಗೆ ಇನ್ನಷ್ಟು, ಮತ್ತಷ್ಟು ಕಲಿಯಬೇಕು ಎಂಬ ತುಡಿತದಿಂದಲೇ ರಂಗಾವತಾರ್ ಮೂಲಕ ಅನೇಕ ನಟನಾ ತರಬೇತಿಗಳನ್ನು ನಡೆಸಿಕೊಟ್ಟಿದ್ದಾರೆ ಕೃಷ್ಣಮೂರ್ತಿ.

‘ನಟನಾ ಕಸುಬು ಒಂದು ಅವಲೋಕನ’ ಸೆಮಿನಾರ್ಗಳು ಮಕ್ಕಳಿಗಾಗಿ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಬೀದಿ ಮಕ್ಕಳು, ಬುಡಕಟ್ಟು ಜನಾಂಗದ ಮಕ್ಕಳು, ಶ್ರವಣದೋಶವಿರುವ ಮಕ್ಕಳಿಂದಲೂ ನಾಟಕ ಮಾಡಿಸಿದ ಖುಷಿ ಕೃಷ್ಣಮೂರ್ತಿ ಅವರದ್ದು. ಏಳು ದಿನಗಳ ಏಕವ್ಯಕ್ತಿ ರಂಗೋತ್ಸವವನ್ನೂ ತಂಡ ಆಯೋಜಿಸಿತ್ತು.

ರಂಗಾವತಾರ್ ತಂಡದೊಂದಿಗೆ ಕೆಲಸ ಮಾಡಿದ ಅನೇಕರು ಸಿನಿಮಾ, ಕಿರುತೆರೆ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಮಹಾಭಾರತ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರ ಮಾಡಿದ ವಲ್ಲಭ, ಅನಿರುದ್ಧ, ಸುಪ್ರೀತ್ ಶೆಟ್ಟಿ, ಶ್ರೀಪತಿ ಮಂಜನಬೈಲ್, ರಾಜಶೇಖರ ಮುಂತಾದವರು ರಂಗಾವತಾರ್ ಭಾಗವೇ ಆಗಿದ್ದರು.

ಸಾಹಿತಿ ಡಿ.ಕೆ.ಚೌಟ ಅವರು ರಂಗಾವತಾರ್ ತಂಡದ ಬೆನ್ನೆಲುಬು. ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಬೆಳೆದ ಆತ್ಮೀಯತೆಯೇ ರಂಗಾವತಾರ್ ಬೆಳವಣಿಗೆಗೆ ಬೆಂಗಾವಲು ಎನ್ನುತ್ತಾರೆ ಕೃಷ್ಣಮೂರ್ತಿ.

ಹೊಸ ಹೊಸ ನಾಟಕಗಳು ರೂಪುಗೊಳ್ಳುವ ಸಂದರ್ಭದಲ್ಲಿ ವೇದಿಕೆಯಾಗುವುದು ಎಚ್.ಎನ್.ಕಲಾಕ್ಷೇತ್ರ, ಕೃಷ್ಣಮೂರ್ತಿ ರಂಗಾಭಿನಯ ಕೇಂದ್ರ. ಕೆಲವೊಮ್ಮೆ ಜಾಗ ಎಲ್ಲಿ ಸಿಗುತ್ತದೆಯೋ ಅಲ್ಲಿ. ಅನೇಕ ಬಾರಿ ಪಾರ್ಕ್ಗಳೂ ನಾಟಕಾಭ್ಯಾಸದ ತಾಣವಾಗಿದ್ದಿದೆ. ವೈಯಕ್ತಿಕ ಪ್ರತಿಷ್ಠೆಗಳನ್ನು ಬಿಟ್ಟು ಬಂದಾಗಲಷ್ಟೇ ರಂಗಭೂಮಿ ಒಪ್ಪಿಕೊಳ್ಳುತ್ತದೆ ಎಂಬ ನಂಬಿಕೆ ಅವರದ್ದು.

ಎಚ್.ಎಸ್.ವಿ. ಅವರ ‘ಉತ್ತರಾಯಣ’ ಕವನ ಆಧರಿಸಿದ ನಾಟಕವನ್ನು ಮಾಡಬೇಕು ಎಂಬುದು ಕೃಷ್ಣಮೂರ್ತಿ ಅವರ ದೊಡ್ಡ ಕನಸು. ಯಕ್ಷಗಾನ, ಕಥಕ್ ಹೀಗೆ ಕಲೆಯ ವಿವಿಧ ಆಯಾಮಗಳನ್ನು ಸೇರಿಸಿಕೊಂಡು ರೂಪು ತಾಳುವ ಈ ನಾಟಕಕ್ಕಾಗಿ ತಯಾರಿ ನಡೆಸಿದ್ದಾರೆ ಕೃಷ್ಣಮೂರ್ತಿ.

ನಾಟಕ ಅನುಭವಿಸಿ
ಅನುಭವಿಸಿ ಅಭಿನಯಿಸುದಲ್ಲ– ಅಭಿನಯವನ್ನೇ ಅನುಭವಿಸಬೇಕು ಎನ್ನುವುದು ರಂಗಾವತಾರ್ ನಿಲುವು. ರಂಗಭೂಮಿಯಲ್ಲಿ ಭ್ರಮೆಯಿಲ್ಲ. ಅದು ಸರಳ ಆದರೆ ಸುಲಭವಲ್ಲ ಎನ್ನುವ ಕೃಷ್ಣಮೂರ್ತಿ ಇದುವರೆಗೆ 200ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.

‘ಇತ್ತೀಚೆಗೆ ಅನೇಕ ನಾಟಕ ತಂಡಗಳು ಹುಟ್ಟಿಕೊಳ್ಳುತ್ತಿವೆ. ಕೆಲ ತಂಡಗಳಲ್ಲಿ ಜೀವನ ಪ್ರೀತಿ ಕಡಿಮೆ ಆಗಿರುವುದು ಎದ್ದು ಕಾಣುತ್ತದೆ. ಕೆಲವೊಮ್ಮೆ ವೈಯಕ್ತಿಕ ಸಮಸ್ಯೆಗಳ ಛಾಪು ರಂಗದ ಮೇಲೆ ಬಂದು ಸಾರ್ವತ್ರಿಕ ಆಗುತ್ತಿರುವುದು ಕಾಣಿಸುತ್ತದೆ.

ಇಂಥ ಸೂಕ್ಷ್ಮಗಳನ್ನು ಗಮನಿಸಿ ರಂಗದ ಮೇಲೆ ಜೀವಂತಿಕೆ ಹುಟ್ಟು ಹಾಕಬೇಕು. ಎಲ್ಲರನ್ನೂ ಸಮಾನವಾಗಿ ತನ್ನ ತೆಕ್ಕೆಗೆ ಎಳೆದುಕೊಳ್ಳುವ ರಂಗದ ಬಗ್ಗೆ ಪ್ರೀತಿ, ಗೌರವ, ಕ್ರಿಯಾಶೀಲ ಮನಸ್ಸು ಇರಬೇಕು’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.