ಭಾನುವಾರ, ಮೇ 9, 2021
26 °C

ನಟಿ ಶ್ರುತಿ ಸರಳ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಗುರುವಾರ ಚಿತ್ರ ನಟಿ ಶ್ರುತಿ ಬೆಂಗಳೂರಿನ ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅವರನ್ನು ಮದುವೆಯಾದರು.ಬೆಳಿಗ್ಗೆ ಸುಮಾರು 8.15 ರಿಂದ 8.45ರ ನಡುವಿನ ಸಮಯದಲ್ಲಿ ಅರ್ಚಕ ವಿಷ್ಣುಮೂರ್ತಿ ಉಡುಪ ಮಾರ್ಗದರ್ಶನದಲ್ಲಿ ದೇವಿಯ ಮುಂದೆ ಪರಸ್ಪರ ಹಾರ ಬದಲಾಯಿಸಿಕೊಂಡ ಬಳಿಕ ಚಂದ್ರಚೂಡ ಅವರು ಶ್ರುತಿ ಅವರಿಗೆ ಮಾಂಗಲ್ಯ ಕಟ್ಟಿದರು. ಅತ್ಯಂತ ಸರಳವಾಗಿ ಮುಗಿದ ಕಾರ್ಯಕ್ರಮದಲ್ಲಿ ಶ್ರುತಿಯವರು ಮೂಲ ಹೆಸರಾದ `ಗಿರಿಜಾ' ನಾಮಧೇಯದಲ್ಲಿಯೇ ಶಾಸ್ತ್ರ ಮುಗಿಸಿದರು. ಶ್ರುತಿಯವರ ಪುತ್ರಿ ಹಾಗೂ ಬೆರಳೆಣಿಕೆಯಷ್ಟು ಕುಟುಂಬ ಸ್ನೇಹಿತರು ಮಾತ್ರ ಅಲ್ಲಿದ್ದರು.ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಹಾಗೂ ಮಾಧ್ಯಮದವರು ದೇವಸ್ಥಾನಕ್ಕೆ ಧಾವಿಸುವ ಮೊದಲೇ ನವ ದಂಪತಿಯು ದೇವರ ದರ್ಶನ ಮುಗಿಸಿ ತೆರಳಿದ್ದರು.ಸ್ಥಳಾಂತರಗೊಂಡ `ರಹಸ್ಯ' ಮದುವೆ (ಹೊಸನಗರ ವರದಿ): ಇದಕ್ಕೂ ಮುನ್ನ ತಾಲ್ಲೂಕಿನ ಗ್ರಾಮವೊಂದರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ನಟಿ ಶ್ರುತಿ ಮದುವೆ ಕಾರಣಾಂತರದಿಂದ ಸ್ಥಳಾಂತರಗೊಂಡ ಪ್ರಸಂಗ ನಡೆಯಿತು.ತಾಲ್ಲೂಕಿನ ಮಾರುತಿಪುರದ ಬಾಣಿಗ ಜೋಡಿ ದೇವಸ್ಥಾನದಲ್ಲಿ ವಿವಾಹಕ್ಕೆ ಸಕಲ ಸಿದ್ಧತೆ ಮಾಡಲಾಗಿತ್ತು. ಸ್ಥಳೀಯ ಪುರೋಹಿತರೊಬ್ಬರ ಸಹಕಾರದೊಂದಿಗೆ ಸಿಂಗಾರಗೊಂಡಿದ್ದ ಮಂಟಪದಲ್ಲಿ ಬುಧವಾರ ಸಂಜೆ ವರಪೂಜೆ, ವರೋಪಚಾರ, ಉಟೋಪಚಾರ ಸಹ ಗುಟ್ಟಾಗಿ ನಡೆದಿತ್ತು.ವಧು-ವರರ ಹೆಸರನ್ನು ಶ್ರುತಿ ಬದಲಿಗೆ ಗಿರಿಜಾ ಹಾಗೂ ಚಂದ್ರಚೂಡ್ ಬದಲಿಗೆ ಚಂದ್ರಶೇಖರ್ ಎಂದು ನಮೂದಿಸುವ ಮೂಲಕ ರಹಸ್ಯವಾಗಿ ಏರ್ಪಾಡಿಸಗಿತ್ತು ಎನ್ನಲಾಗಿದೆ. ಆದರೆ ದೇವಸ್ಥಾನ ಸಮಿತಿ ಸದಸ್ಯರೊಬ್ಬರು ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಮಾಡಿದ ಗಲಾಟೆ, ಅವಾಂತರಕ್ಕೆ ಹೆದರಿ ಬಾಸಿಂಗ, ಹಾರಗಳನ್ನು ದೇವಸ್ಥಾನದಲ್ಲೇ ಬಿಟ್ಟ ಮದುಮಕ್ಕಳು ರಾತ್ರೋರಾತ್ರಿ ಕೊಲ್ಲೂರಿಗೆ ಪಯಣಿಸಿ ಮದುವೆ ಆಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.