ನವದೆಹಲಿ (ಪಿಟಿಐ): ಬಾಲಿವುಡ್ ಚಿತ್ರರಂಗದಲ್ಲಿ ಐದು ದಶಕಗಳ ಕಾಲ ಖಳನಾಯಕನಾಗಿ ಮಿಂಚಿದ ಹಿರಿಯ ನಟ ಪ್ರೇಮ್ ಚೋಪ್ರಾ ಅವರು ಈಗ ಪ್ರತಿಷ್ಠಿತ ಮದರ್ ತೆರೆಸಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಿನಿಮಾಗಳಲ್ಲಿ ಖಳನಾಯಕನಾಗಿದ್ದರೂ ನಿಜ ಜೀವನದಲ್ಲಿ ಸದ್ಗೃಹಸ್ಥರಾಗಿರುವ ಚೋಪ್ರಾ ಅವರು ಕೋಲ್ಕತ್ತಾದಲ್ಲಿ ನಾಳೆ ಗುರುವಾರದಂದು ಈ ಪ್ರಶಸ್ತಿ ಪಡೆಯಲಿದ್ದಾರೆ. ಐದು ದಶಕಗಳ ತಮ್ಮ ಚಿತ್ರರಂಗದ ವೃತ್ತಿ ಬದುಕಿನಲ್ಲಿ, ಸುಮಾರು 400 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಚೋಪ್ರಾ ಅವರಿಗೆ ಈಗ 76ರ ಹರೆಯ.

‘ನಮ್ಮ ದೇಶದ ಬಡಜನರ ಸೇವೆ ಮಾಡಿದ ಸಂತ ಮದರ್ ತೆರೆಸಾ ಅವರ ಹೆಸರಿನ ಈ ಪ್ರಶಸ್ತಿ ನನಗೆ ಹೆಮ್ಮೆ ಮೂಡಿಸಿದೆ, ಜೊತೆಗೆ, ರಾಜೀವ್ ಗಾಂಧಿ ಮತ್ತು ದಲೈ ಲಾಮಾ ಅವರಂಥ ಪ್ರತಿಷ್ಠಿತರು ಪಡೆದ ಈ ಪ್ರಶಸ್ತಿ ಒಲಿದು ಬಂದಿರುವುದು ನನ್ನನ್ನು ವಿನೀತನನ್ನಾಗಿಸಿದೆ’ ಎಂದು ಚೋಪ್ರಾ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.