ಗುರುವಾರ , ಜನವರಿ 30, 2020
20 °C

ನದಿ ಜೋಡಣೆಗೆ ಒತ್ತಾಯಿಸಿ ಸೈಕಲ್ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನದಿ ಜೋಡಣೆ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಂತೆ ಮನವಿ ಸಲ್ಲಿಸಲು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ವಿವೇಚನಾ ಸಮಿತಿಯ ಕಾರ್ಯದರ್ಶಿ ಭದ್ರಾವತಿ ಸತೀಶ್ ಹೇಳಿದರು.ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟಿನ ಸಂಚಾರಿ ಪೀಠದ ಸ್ಥಾಪನೆ ಮತ್ತು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ದಕ್ಷಿಣ ಭಾರತದಲ್ಲಿ ನಡೆಸುವಂತೆ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು ಮತ್ತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ­ಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮಂಗಳವಾರ ಇಲ್ಲಿ ತಿಳಿಸಿದರು.ಸಮಿತಿಯ ಉಪಾಧ್ಯಕ್ಷ ಜಯಣ್ಣ   ಮಾತನಾಡಿ ಡಿ.20 ರಂದು ಬೆಂಗಳೂರಿನಿಂದ ಆರಂಭವಾಗಲಿರುವ ಜಾಥಾದಲ್ಲಿ 10 ಮಂದಿ ಪಾಲ್ಗೊಳ್ಳಲಿದ್ದು ದೆಹಲಿ ತಲುಪುವಷ್ಟರಲ್ಲಿ ಬೇರೆ ಬೇರೆ ರಾಜ್ಯಗಳ 40 ಮಂದಿ ಸ್ವಯಂಸೇವಕರು ಜೊತೆಯಾಗಲಿದ್ದಾರೆ ಎಂದರು.

ಪ್ರತಿಕ್ರಿಯಿಸಿ (+)