ಶುಕ್ರವಾರ, ಮೇ 14, 2021
21 °C

ನದಿ ನೀರಿನಿಂದ ವಿದ್ಯುತ್ ಉತ್ಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಸಾಗರಗಳಿಗೆ ಸೇರುವ ನದಿ ನೀರಿನ ಕೇವಲ ಶೇ 10ರಷ್ಟನ್ನು ಬಳಸಿಕೊಂಡು 50 ಕೋಟಿ ಜನರಿಗೆ ಬೇಕಾಗುವಷ್ಟು ಸ್ವಚ್ಛ ಪರಿಸರಸ್ನೇಹಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಕಂಡುಹಿಡಿದಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.



ನದಿ ಮತ್ತು ಸಮುದ್ರದ ನೀರಿನಲವಣಾಂಶದಲ್ಲಿನ ವ್ಯತ್ಯಾಸವನ್ನು ಬಳಸಿಕೊಂಡು `ಪ್ರೆಷರ್-ರಿಟಾರ್ಡೆಡ್ ಆಸ್ಮೋಸಿಸ್~ ಮೂಲಕ ವಿದ್ಯುತ್ ಉತ್ಪಾದಿಸಲು ಸಾಧ್ಯ. ಇಲ್ಲಿ ಇಂಗಾಲದ ಡೈಆಕ್ಸೈಡ್ ಹೊರಹೊಮ್ಮುವುದಿಲ್ಲ. ಇಷ್ಟೇ ವಿದ್ಯುತ್ತನ್ನು ಕಲ್ಲಿದ್ದಲಿನಿಂದ ಉತ್ಪಾದಿಸಿದರೆ 100 ಕೋಟಿ  ಟನ್ ಇಂಗಾಲದ ಡೈಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ ಎಂದು ಯೇಲ್ ಎಂಜಿನಿಯರಿಂಗ್ ಸ್ಕೂಲ್‌ಸಂಶೋಧಕರು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.