ಭಾನುವಾರ, ಮಾರ್ಚ್ 7, 2021
19 °C
ಶಾಸಕರಿಂದ ₹ 7 ಕೋಟಿ ವೆಚ್ಚದ ಯೋಜನೆಗೆ ಭೂಮಿಪೂಜೆ

ನದಿ ಹೂಳೆತ್ತುವ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನದಿ ಹೂಳೆತ್ತುವ ಕಾಮಗಾರಿಗೆ ಚಾಲನೆ

ರಾಮದುರ್ಗ: ಮಲಪ್ರಭಾ ನದಿ ಪಕ್ಕದ ರೈತರು ನದಿಪಾತ್ರದ ಜಮೀನು ಅತಿಕ್ರಮಣ ಮಾಡಿಕೊಂಡು ನದಿಯು ಚರಂಡಿ ರೂಪದಲ್ಲಿ ಗೋಚರಿಸುತ್ತಿದೆ. ಮುಂದಿನ ಪೀಳಿಗೆಗೆ ನದಿಯನ್ನು ಕೇವಲ ನಕ್ಷೆಯಲ್ಲಿ ಮಾತ್ರ ತೋರುವಂತಹ ಪರಿಸ್ಥಿತಿ ಇದೆ. ನದಿಯಲ್ಲಿ ತುಂಬಿರುವ ಹೂಳು ತೆಗೆದು ಸ್ವಚ್ಛಗೊಳಿಸಲಾಗು ವುದು ಎಂದು ಸರ್ಕಾರದ ಮುಖ್ಯ ಸಚೇತಕ, ಶಾಸಕ ಅಶೋಕ ಪಟ್ಟಣ ಹೇಳಿದರು.ಮಲಪ್ರಭಾ ನದಿಪಾತ್ರದಲ್ಲಿರುವ ಹೂಳು ತೆಗೆಯುವ ಅಂದಾಜು ₹ 7 ಕೋಟಿ ವೆಚ್ಚದ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನದಿಯ ಪಕ್ಕಕ್ಕೆ ಬರುವ ಪ್ರತಿ ಗ್ರಾಮದಲ್ಲಿಯೂ ಒಂದೊಂದು ದೋಬಿಘಾಟ್ ನಿರ್ಮಿಸ ಲಾಗುವುದು ಎಂದು ತಿಳಿಸಿದರು.ನದಿ ಸ್ವಚ್ಛಗೊಳಿಸುವುದು ಬಹುತೇಕ ನಾಗರಿಕರ ಕನಸಾಗಿತ್ತು. ನದಿಯನ್ನು ಕೆಲವು ರೈತರು ಅತಿಕ್ರಮಣ ಮಾಡಿ ಕೊಂಡು ಬೇಸಾಯ ಮಾಡುತ್ತಿದ್ದಾರೆ. ನದಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ತಕರಾರು ಮಾಡದೇ ಸಹಕರಿಸಬೇಕು ಎಂದು ಹೇಳಿದ ಅವರು, ತಕರಾರು ಎದುರಾದರೆ ಪೊಲೀಸ್ ಸರ್ಪಗಾವಲಿನಲ್ಲಿ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.ಪಟ್ಟಣದ ಹಳೆ ಸೇತುವೆಯನ್ನು ಕೇಂದ್ರ ಸ್ಥಾನ ಮಾಡಿಕೊಂಡು ಪೂರ್ವಕ್ಕೆ ಎರಡು ಕಿ. ಮೀ. ಮತ್ತು ಪಶ್ಚಿಮಕ್ಕೆ ಎರಡು ಕಿ. ಮೀಟರ್ ಹೂಳು ತೆಗೆಯ ಲಾಗುವುದು. ನರಗುಂದದ ಬೆಣ್ಣಿ ಹಳ್ಳದ ಕಾಮಗಾರಿಯಲ್ಲಿ ಉಳಿಕೆ ಹಣ ಅಂದಾಜು ₹ 5 ಕೋಟಿಯನ್ನು ಬಳಸಿಕೊಂಡು ಪೂರ್ವದ ಕೊಳಚಿ ಚಿಕ್ಕಡ್ಯಾಂ ತನಕ ನದಿಯ ಹೂಳು ತೆಗೆಯುವ ಯೋಜನೆ ಇದೆ ಎಂದು ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿ. ಎಸ್. ಕೊಣ್ಣೂರ ತಿಳಿಸಿದರು.ತಾಲ್ಲೂಕಿನ ರೈತರಿಗಾಗಿ ನೀರಾವರಿ ಯೋಜನೆ ಮತ್ತು ಸಾರ್ವಜನಿಕರಿಗಾಗಿ ಉತ್ತಮ ರಸ್ತೆಗಳನ್ನು ನಿರ್ಮಿಸುತ್ತಿರುವ ಶಾಸಕ ಅಶೋಕ ಪಟ್ಟಣ ಅವರನ್ನು ಮುಂದಿನ ಚುನಾವಣೆಯಲ್ಲಿ ಎಲ್ಲರೂ ಬೆಂಗಾವಲಾಗಿ ಆಯ್ಕೆ ಮಾಡಲು ಯತ್ನಿಸಬೇಕು ಎಂದು ಪುರಸಭೆಯ ಮಾಜಿ ಅಧ್ಯಕ್ಷ ಶಿವಯೋಗಿ ಚಿಕ್ಕೋಡಿ ಮುಂದಿನ ಚುನಾವಣೆಯ ಪೀಟಿಕೆ ಹಾಕಿದರು.ಪುರಸಭೆ ಅಧ್ಯಕ್ಷ ಹುಸೇನ್‌ಬಾಷಾ ಮೊರಬ, ಉಪಾಧ್ಯಕ್ಷೆ ಸುಮಂಗಲಾ ರಾಯಭಾಗ, ಸದಸ್ಯರಾದ ವಿಜಯ ಕುಮಾರ ದಿಂಡವಾರ, ಸುರೇಶ ಪತ್ತೇಪೂರ, ರಾಜು ಮಾನೆ, ಅಶೋಕ ಸುಳಿಭಾವಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಹೂರ್ ಹಾಜಿ, ಕೃಷ್ಣಪ್ಪ ಲಮಾಣಿ, ಗುತ್ತಿಗೆದಾರರಾದ ಮಹಾದೇವ ಆತಾರ, ಶ್ರೀನಾಥ ಇದ್ದರು.ಕಾಂಗ್ರೆಸ್ ಮುಖಂಡ ಜಿ.ಬಿ. ರಂಗನಗೌಡರ ಸ್ವಾಗತಿಸಿದರು. ಮಹ್ಮದ್‌ಶಫಿ ಬೆಣ್ಣಿ ಕಾರ್ಯಕ್ರಮ ನಿರೂಪಿಸಿದರು. ರಾಜು ಬೀಳಗಿ ವಂದಿಸಿದರು.***

ಪಟ್ಟಣದ ಹಳೆ ಸೇತುವೆಯನ್ನು ಕೇಂದ್ರ ಸ್ಥಾನ ಮಾಡಿಕೊಂಡು ಪೂರ್ವ ಹಾಗೂ ಪಶ್ಚಿಮಕ್ಕೆ ತಲಾ ಎರಡು ಕಿ. ಮೀ. ಹೂಳು ತೆಗೆಯಲಾಗುವುದು.

ಪಿ.ಎಸ್. ಕೊಣ್ಣೂರ, ಕಾರ್ಯನಿರ್ವಾಹಕ ಎಂಜಿನಿಯರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.