ಶುಕ್ರವಾರ, ಜನವರಿ 17, 2020
24 °C

ನಮ್ಮಣ್ಣ ಡಾನ್ ಅದ್ದೂರಿ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರವಿಜೋಶಿ ನಿರ್ಮಿಸುತ್ತಿರುವ `ನಮ್ಮಣ್ಣ ಡಾನ್~ ಚಿತ್ರತಂಡ ಉತ್ತರ ಕರ್ನಾಟಕ ಜಿಲ್ಲೆಗಳತ್ತ ಪ್ರಯಾಣ ಬೆಳೆಸಿತ್ತು. ಮೊದಲಿಗೆ ಗುಲ್ಬರ್ಗದ ಕಾಲೇಜು ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಲಾಯಿತು. ನಂತರ ಬಿಜಾಪುರ. ಅಲ್ಲಿಂದ ಬಾದಾಮಿ. ಕಾಲೇಜು ವಿದ್ಯಾರ್ಥಿಗಳ ಚರ್ಚೆಯ ನಡುವೆ ಬಾದಾಮಿಯ ಬನಶಂಕರಿ ಜಾತ್ರೆ ಮತ್ತು ಸವದತ್ತಿ ಎಲ್ಲಮ್ಮನ ಜಾತ್ರೆಯಲ್ಲೂ ತಂಡ ಪಾಲ್ಗೊಂಡಿತ್ತು. ರಮೇಶ್ ಅರವಿಂದ್, ಸನಾತನಿ, ರವಿಜೋಶಿ ಇದ್ದ ತಂಡ ಬಳಿಕ ಹಾಸನ, ಹುಬ್ಬಳ್ಳಿ, ಮಂಗಳೂರು ಹಾಗೂ ಶಿವಮೊಗ್ಗದಲ್ಲೂ ಪ್ರಚಾರ ನಡೆಸಿತು.

 

ಫೆಬ್ರುವರಿಯಲ್ಲಿ ಚಿತ್ರ ತೆರೆಕಾಣುತ್ತಿರುವುದರಿಂದ ಯಾತ್ರೆ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ. ಚಿತ್ರದ ನಿರ್ದೇಶಕ, ನಾಯಕ ರಮೇಶ್ ಅರವಿಂದ್. ನಾಯಕಿ ಮೋನಾ ಪರವರೇಶ್ ಮತ್ತು ಸನಾತನಿ.

ಪ್ರತಿಕ್ರಿಯಿಸಿ (+)