ಮಾನವನ ನಿರ್ಲಕ್ಷ್ಯಕ್ಕೆ ಗುರಿಯಾಗಿ ಗತಕಾಲದ ವೈಭವವನ್ನು ಸಾರುವ ಅನೇಕ ದೇವಸ್ಥಾನಗಳು, ಶಿಲ್ಪಗಳಿಂದು ವಿನಾಶದ ಅಂಚಿಗೆ ಬಂದು ನಿಂತಿವೆ. ಕಾಂಕ್ರೀಟ್ ನಾಡು ನಿರ್ಮಾಣದತ್ತ ಮಾತ್ರವೇ ಆಸಕ್ತಿ ವಹಿಸಿರುವ ಇಂದಿನ ಸಮುದಾಯ ಪ್ರಾಚೀನ ಕಾಲದ ಅಮೂಲ್ಯ ಶಿಲ್ಪಗಳನ್ನು ರಕ್ಷಿಸಿಡುವಲ್ಲಿ ಮೈಮರೆತಿದ್ದಾರೆ. ಅಕ್ಕಿಆಲೂರ ಬಳಿಯ ಹೊಂಬಳಿ ಗ್ರಾಮದಲ್ಲಿರುವ ಇತಿಹಾಸವನ್ನು ಸಾರಿ ಹೇಳುವ ಪುರಾತನ ಶಿಲ್ಪಗಳ ಅಂದಿನ ಕಥೆ, ಇಂದಿನ ವ್ಯಥೆಯನ್ನೊಮ್ಮೆ ಕೇಳಿದವರ ಮನ ಮಿಡಿಯದೇ ಇರದು...!
ಆರೇಳು ನೂರರಷ್ಟು ಜನಸಂಖ್ಯೆಯನ್ನು ಹೊಂದಿರುವ ಹೊಂಬಳಿ ಹಾನಗಲ್ಲ ತಾಲ್ಲೂಕಿನ ಪುಟ್ಟ ಗ್ರಾಮ.

ವ್ಯವಸಾಯವೇ ಜನರ ಮೂಲಾ ಧಾರ. ಮಳೆಗಾಲದಲ್ಲಿ ಮಾತ್ರವೇ ತುಂಬಿ ಹರಿ ಯುವ ಧರ್ಮಾ ನದಿಯ ದಂಡೆಯ ಮೇಲಿರುವ ಈ ಊರು ತನ್ನೊಡಲಿನಲ್ಲಿ ಇತಿಹಾಸವನ್ನು ಬಚ್ಚಿಟ್ಟುಕೊಂಡಿದೆ. ಗ್ರಾಮದಲ್ಲಿ ಭಗ್ನಾ ವಸ್ಥೆಯಲ್ಲಿರುವ ಹಲವಾರು ಶಿಲ್ಪಗಳ ಕಥೆ ಒಂದೊಂದು ಶತಮಾನದ ಇತಿಹಾಸವನ್ನು ಹೇಳುತ್ತದೆ.

ರಾಷ್ಟ್ರಕೂಟ ಧ್ರುವನ ಶಾಸನ ವೊಂದು ಇಲ್ಲಿ ಸಿಕ್ಕಿರುವುದು ಈ ಗ್ರಾಮದ ಪ್ರಾಚೀತನತೆಗೆ ಸಾಕ್ಷಿಯಾಗಿದೆ. ನದಿಯ ತೀರ ದಲ್ಲಿ ಚಾಲುಕ್ಯ ಶೈಲಿಯ ಬಸವ ಣ್ಣನ ದೇವ ಸ್ಥಾನವಿದೆ. ಮೂಲ ಸ್ವರೂಪವೇನು ಉಳಿದಿರದ ಈ ದೇವಸ್ಥಾನದ ಮೂಲ ಹೆಸರು ರಾಮೇಶ್ವರ ದೇವಾಲಯ ಎಂಬುದಕ್ಕೆ ಆಧಾರಗಳಿವೆ.

ಕ್ರಿ.ಶ. 15 ನೇ ಶತಮಾನದಲ್ಲಿ ಸಹವಾಸಿ ಹೊನ್ನರಸ ಎಂಬುವವನು ರಾಮೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ ್ದದಾಗಿ ಇಲ್ಲಿನ ಶಾಸನವೊಂದು ಉಲ್ಲೇಖಿಸುತ್ತದೆ. ಆದರೆ ಊರಿನವರು ತೋರಿಸುವುದು ಬಸವಣ್ಣ ಮತ್ತು ದೇವಸ್ಥಾನದ ಸಭಾಮಂಟಪದಲ್ಲಿರುವ ವೀರ ಭದ್ರನ ಶಿಲ್ಪವನ್ನು ಮಾತ್ರ. ಮೂಲ ದೇವ ರಾದ ರಾಮೇಶ್ವರ ಮಾತ್ರ ಅವರ ನೆನಪಿಗೂ ಬರದೇ ಇರುವುದು ನಿಜಕ್ಕೂ ವಿಪ ರ್ಯಾಸ. ದೇವಾಲಯದ ಆವರಣದ ್ಲಲಿರುವ ಹಲವಾರು ಶಿಲ್ಪಗಳು ಈ ಗ್ರಾಮದ ಹಾಗೂ ದೇವಾಲಯದ ಗತವೈಭವವನ್ನು ಸಾರಿ ಹೇಳುತ್ತಿವೆ.

ಸುಮಾರು ಐದು ಅಡಿ ಎತ್ತರದ ವಿಷ್ಣು, ಸೂರ್ಯ, ಆದಿಶಕ್ತಿ ಮತ್ತು ಸರಸ್ವತಿ ಶಿಲ್ಪಗಳು ತಮ್ಮ ಭವ್ಯತೆ ಹಾಗೂ ಸೌಂದರ್ಯದಿಂದ ಗಮನ ಸೆಳೆಯುತ್ತವೆ. ಕಾಲನ ತುಳಿತಕ್ಕೂ, ಮಾನವನ ನಿರ್ಲಕ್ಷ್ಯಕ್ಕೂ ಸಿಕ್ಕಿ ಜರ್ಜರಿತವಾಗಿವೆ. ಚತುರ್ಭುಜ ವಿಷ್ಣು ಶಿಲ್ಪವು ಶಂಖಚಕ್ರ ಗಧಾ ಪದ್ಮಗಳನ್ನು ಧರಿಸಿ ಸಮಭಂಗಿಯಲ್ಲಿ ನಿಂತಿದ್ದು ಅದರ ಕಾಲುಗಳ ಭಾಗ ಮುರಿದು ಹೋಗಿದೆ. ಎರಡೂ ಕೈಯಲ್ಲಿ ತಾವರೆಗಳನ್ನು ಹಿಡಿದು ಸಮಭಂಗಿಯಲ್ಲಿ ನಿಂತಿರುವ ಸೂರ್ಯನ ಮೂರ್ತಿ ತನ್ನ ಪೀಠ ಮತ್ತು ಪ್ರಭಾವಳಿ ಯಿಂದಾಗಿ ಗಮನ ಸೆಳೆಯುತ್ತದೆ. ಒರಟಾದ ಪೀಠದ ಮೇಲೆ ನಿಂತಿರುವ ಆದಿಶಕ್ತಿ ಶಿಲ್ಪದ ಶಿರಸ್ಸು ಹಾಗೂ ಮುಂದಿನ ಎರಡೂ ಕೈಗಳು ಮುರಿದಿವೆ. ಹಿಂದಿನ ಎರಡೂ ಕೈಗಳಲ್ಲಿ ಗಧೆ ಮತ್ತು ಕಮಲವಿದ್ದು, ಶಿಲ್ಪ ಸಮಭಂಗಿಯಲ್ಲಿದೆ. ಪೀಠಭಾಗದಲ್ಲಿ ಲಕ್ಷ್ಮೀ, ಸರಸ್ವತಿ, ಪಾರ್ವತಿ ಯನ್ನು ಅವರವರ ವಾಹನಗಳೊಂದಿಗೆ ಕೆತ್ತಲಾ ಗಿರುವುದು ಈ ಶಿಲ್ಪದ ವೈಶಿಷ್ಟ್ಯತೆ ಯಾಗಿದೆ.

ಸುಮಾರು ಎರಡು ಅಡಿ ಎತ್ತರದ ಹಂಸ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತಿರುವ ಸರಸ್ವತಿ ಶಿಲ್ಪ ಆಕರ್ಷಕವಾಗಿದ್ದು ಗದುಗಿನ ಸರಸ್ವತಿಯನ್ನು ನೆನಪಿಸುತ್ತದೆ. ಅತ್ಯಂತ ನೋವಿನ ಸಂಗತಿಯೆಂದರೆ ಈ ಸುಂದರ ಶಿಲ್ಪದ ತಲೆ ಮತ್ತು ಮೂರು ಕೈಗಳು ಮುರಿದು ಹೋಗಿ ರುವುದು. ಬಲಭಾಗದ ಹಿಂದಿನ ಕೈಯೊಂದೇ ಇದ್ದು ಅದರಲ್ಲಿ ಅಂಕುಶವಿದೆ. ಸ್ವಲ್ಪ ಇತ್ತೀಚಿ ನದಾದ ದುರ್ಗಿಯ ಶಿಲ್ಪ ರೌದ್ರತೆಯಿಂದ ಕೂಡಿದೆ.

ಆಕರ್ಷಕ ಪ್ರಭಾವಳಿಯಿಂದ ಸುತ್ತು ವರೆದ ಆಸೀನ ಮೂರ್ತಿಯ ಚತುರ್ಭುಜಗಳಲ್ಲಿ ಕತ್ತಿ, ಅಂಕುಶ, ಡಮರು ಮತ್ತು ಕಪಾಲಗಳಿವೆ. ಇಕ್ಕೆಲಗಳಲ್ಲಿ ಬೇತಾಳಗಳಿದ್ದು ಬಲಭಾಗದ ಬೇತಾಳವನ್ನು ತುತ್ತೂರಿ ಊದುತ್ತಿರುವ ಹಾಗೆ ಕೆತ್ತಲಾಗಿದೆ. ಎಡಭಾಗದ ತೊಡೆಯ ಕೆಳಭಾಗದಲ್ಲಿ ಒಂದು ರುಂಡವಿದ್ದರೆ ಬಲಭಾಗದ ತೊಡೆಯ ಕೆಳಗೆ ಹೆಡೆ ಎತ್ತಿದ ಸರ್ಪವಿದೆ. ಧರಿಸಿರುವ ರುಂಡ ಮಾಲೆಯಂತೂ ಶಿಲ್ಪದ ಭಯಂಕರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇವುಗಳಲ್ಲದೇ ಊರಾ ಚೆಯ ಬಯಲಿನಲ್ಲಿ ಸುಮಾರು 15 ಅಡಿ ಎತ್ತರದ ಬೃಹತ್ ಗಣಪತಿ ಹಂಪೆಯ ಸಾಸಿವೆ ಕಾಳು ಗಣಪತಿಯನ್ನು ಹೋಲುತ್ತದೆ. ವಿಜಯ ನಗರದ ಈ ಶಿಲ್ಪದ ಮುಂಭಾಗ ಭಗ್ನ ವಾಗಿದೆ. ಆದರೆ ಹಿಂಬಾಗದ ಕೆತ್ತನೆಗಳನ್ನು ಗಮನಿಸಿದಾಗ ಶಿಲ್ಪದ ಭವ್ಯತೆ ಎಂತಹವರನ್ನೂ ಬೆರಗು ಗೊಳಿಸುತ್ತದೆ.

ಇತಿಹಾಸದ ವೈಭವ ಉಳಿಸಿ ಎನ್ನುತ್ತಿವೆ
ಬದಲಾಗುತ್ತಿರುವ ಜೀವನ ಶೈಲಿ ಹಾಗೂ ನಮ್ಮಳಗಿನ ನಿರ್ಲಕ್ಷ್ಯತೆಯಿಂದಾಗಿ ಗತವೈಭ ವವನ್ನಾಗಲಿ ಅಥವಾ ಶಿಲ್ಪಗಳ ಸೌಂದರ್ಯ ವನ್ನು ಆಸ್ವಾದಿಸಲು ನಮಗೆ ಸಮಯವೇ ಇಲ್ಲದಂತಾಗಿರುವುದು ನೋವಿನ ಸಂಗತಿ. ಕೆಲವರು ಬಾರದ ಮಳೆಗೆ ತಮ್ಮನ್ನೇ ತಾವು ಶಪಿಸಿಕೊಳ್ಳುವರಾದರೆ, ಮತ್ತಷ್ಟು ಜನ ಬದುಕಿನ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಂಕ್ರೀಟ್ ನಾಡಿನ ನಿರ್ಮಾಣಕ್ಕೆ ಹಾತೊರೆ ಯುವ ಮನಸ್ಸು ಗಳು ಗತ ವೈಭವ ಸಾರುವ ಶಿಲ್ಪ ಗಳನ್ನು, ದೇವಸ್ಥಾನಗಳನ್ನು ಸಂರಕ್ಷಿಸುವ ಅಗತ್ಯವಿದೆ.

ಗತ ವೈಭವದ ಕುರುಹುಗಳೆನಿಸಿರುವ ಶಿಲ್ಪಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಊರಿನಲ್ಲಿಯೇ ಸೂಕ್ತ ವೇದಿಕೆ ಕಲ್ಪಿಸಬೇಕು. ಅಥವಾ ಹತ್ತಿರದ ಮ್ಯೂಸಿಯಂನಲ್ಲಿ ಜೋಪಾನವಾಗಿ ಸಂರಕ್ಷಿ ಸಿಡಬೇಕು. ಈ ನಿಟ್ಟಿನಲ್ಲಿ ಈಗಲಾದರೂ ಅಗತ್ಯ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.