ಮೈಸೂರು (ಚಿಕ್ಕಬರಗಿ): ಅರಣ್ಯ ಸಿಬ್ಬಂದಿ ಸೆರೆ ಹಿಡಿದಿರುವುದು ನರಭಕ್ಷಕ ಹುಲಿಯಲ್ಲ ಎಂದು ಎಚ್.ಡಿ. ಕೋಟೆ ತಾಲ್ಲೂಕಿನ ಚಿಕ್ಕಬರಗಿ ಗ್ರಾಮದ ಜನತೆ ಶಂಕಿಸಿದ್ದಾರೆ.

ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಹುಲಿಯನ್ನು ಸೆರೆ ಹಿಡಿದಿರುವುದಕ್ಕೆ ಅನುಮಾನ ವ್ಯಕ್ತಪಡಿಸಿರುವ ಜನತೆ, ಸೀಗೆವಾಡಿ ಹಾಡಿಯಲ್ಲಿ ದಸರಾ ಆನೆಗಳೊಂದಿಗೆ ಎರಡು ದಿನ ಕಾರ್ಯಾಚರಣೆ ನಡೆಸಿದರೂ ಅರಣ್ಯ ಸಿಬ್ಬಂದಿಗೆ ನರಭಕ್ಷಕ ಹುಲಿ ಜಾಡು ಪತ್ತೆ ಮಾಡಲು ಆಗಿರಲಿಲ್ಲ. ನಂತರ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿದ್ದರು.

ಡಿ. 4ರಂದು ವ್ಯಾಪಕ ಕಾರ್ಯಾಚರಣೆ ನಡೆಸಿದರೂ, ಹುಲಿ ಗರ್ಜನೆ ಕೇಳಿಸಿ 29 ಗುಂಡುಗಳನ್ನು ಹಾರಿಸಿದ್ದರೂ ಹುಲಿ ಇರುವಿಕೆ ಸುಳಿವು ಸಿಕ್ಕಿರಲಿಲ್ಲ. ಆದರೆ, ಗುರುವಾರ ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಅದೂ ಹುಲಿ ಅಟ್ಟಹಾಸಕ್ಕೆ ಬಲಿಯಾದ ಚಿಕ್ಕಬರಗಿ ಗ್ರಾಮದ ಬಸಪ್ಪನ ಮೃತದೇಹ ಪತ್ತೆಯಾದ 150 ಮೀಟರ್ ಅಂತರದಲ್ಲಿ ಹುಲಿಯನ್ನು ಸೆರೆ ಹಿಡಿದಿರುವುದು ಅಚ್ಚರಿ ಮತ್ತು ಅನುಮಾನ ಮೂಡಿಸಿದೆ ಎಂದು ಗ್ರಾಮದ ರೈತ ಮುಖಂಡರಾದ ಗಂಗಾಧರಪ್ಪ ಮತ್ತು ಇತರರು ಆರೋಪಿಸಿದ್ದಾರೆ. ಅಲ್ಲದೇ ಇದು ಬೇರೆಯದೇ ಹುಲಿ ಎಂದು ಅವರು ದೂರಿದ್ದಾರೆ.
ಮತ್ತೊಮ್ಮೆ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿಯನ್ನು ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರು ವರದಿ: ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾ ಅವರು ಮೃಗಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಾಚರಣೆಗೆ ಸಂಬಂಧಿಸಿದ ವಿಡಿಯೊ ತುಣುಕುಗಳು ಇವೆ. ಸೆರೆ ಸಿಕ್ಕಿರುವುದು ಕಾಡಂಚಿನ ಗ್ರಾಮಗಳಲ್ಲಿ ಮೂವರನ್ನು ಭಕ್ಷಿಸಿದ್ದ ಹುಲಿಯೇ, ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.