ನಸುಕಿನಲ್ಲಿಯೇ ಕಚೇರಿಗೆ ಹಾಜರಾದ ಚಾಂಡಿ
ತಿರುವನಂತಪುರ (ಪಿಟಿಐ): ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಪಿಐ (ಎಂ) ಕಾರ್ಯಕರ್ತರು ಸಚಿವಾಲಯಕ್ಕೆ ಮುತ್ತಿಗೆ ಹಾಕುವುದನ್ನು ತಿಳಿದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಬೆಳಿಗ್ಗೆ 5 ಗಂಟೆಗೇ ಕಚೇರಿಗೆ ಹಾಜರಾದ ಘಟನೆ ನಡೆದಿದೆ.
ಬೆಲೆ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಸಿಪಿಐ (ಎಂ) ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನೆಗೆ ಮುಂದಾಗಿದ್ದರು. ಇದನ್ನು ತಿಳಿದ ಮುಖ್ಯಮಂತ್ರಿ ಹಾಗೂ ಇತರ ನಾಲ್ವರು ಸಚಿವರು ಎಂಟು ಗಂಟೆಗೆ ನಿಗದಿಪಡಿಸಿದ್ದ ಸಚಿವ ಸಂಪುಟ ಸಭೆಗೆ ಬೆಳಿಗ್ಗೆ 5ಕ್ಕೇ ಹಾಜರಾದರು.
ಉಳಿದ ಸಚಿವರು ಬಳಿಕ ಕಾರ್ಯಾಲಯಕ್ಕೆ ಆಗಮಿಸಿದರು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.