ಶುಕ್ರವಾರ, ಜನವರಿ 24, 2020
27 °C

ನಾಚಿಕೆ ಗೀಚಿಕೆ ಕೆನಡಾದಿಂದ ಆಚೆಗೆ

ಮಾನಸ Updated:

ಅಕ್ಷರ ಗಾತ್ರ : | |

ಎಲ್ಲರಿಗೂ ಸೆಕ್ಸ್ ಬಗ್ಗೆ ಕುತೂಹಲವಿರುತ್ತದೆ, ಅದು ಗಂಡು-ಹೆಣ್ಣಿನ ದೈಹಿಕ ಸಂಬಂಧ ಮಾತ್ರ ಅಲ್ಲ, ಅದು ಒಂದು ಸುಂದರ ಅನುಭವ ಅಷ್ಟೆ. ಎಲ್ಲಾ ವೃತ್ತಿಗಳಂತೆ ಇದು ಕೂಡ ಒಂದು ವೃತ್ತಿ. `ನನಗೆ ಪೋರ್ನ್ ಸ್ಟಾರ್ ಎಂದು ಹೇಳಿಕೊಳ್ಳಲು ಸ್ವಲ್ಪವೂ ನಾಚಿಕೆ ಇಲ್ಲ~ ಎಂದು ಸನ್ನಿ ನಿಸ್ಸಂಕೋಚವಾಗಿ ಹೇಳಿಕೊಳ್ಳುತ್ತಾಳೆ. ಕಲರ್ಸ್‌ ಚಾನೆಲ್‌ನಲ್ಲಿ ನಡೆಯುತ್ತಿರುವ `ಬಿಗ್ ಬಾಸ್ ಸೀಸನ್-5~ನಲ್ಲಿ ಭಾಗವಹಿಸಿದ್ದ ಸನ್ನಿಗೆ ಮಹೇಶ್ ಭಟ್ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿದೆ .ಅಪ್ಪ-ಅಮ್ಮನಿಗೆ ತಾನು ಪೋರ್ನ್ ಸ್ಟಾರ್ ಆದದ್ದು ಮೊದಲು ಗೊತ್ತೇ ಇರಲ್ಲಿಲ್ಲವಂತೆ.  `ಪೆಂಟ್ ಹೌಸ್ ನಿಯತಕಾಲಿಕೆ~ ಮುಖಪುಟದ ಛಾಯಾಚಿತ್ರಕ್ಕೆ ಒಂದು ಲಕ್ಷ ಡಾಲರ್ ಸಂಭಾವನೆ ಸಂದಾಗ ಗುಟ್ಟು ರಟ್ಟಾಯಿತು. ಆಗ ಅವರಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ಇನ್ನಿಲ್ಲದಂತೆ ಮಗಳಿಗೆ ತಿಳಿಹೇಳಿದರು. ಆದರೆ, ಸನ್ನಿ ಗಟ್ಟಿ ನಿರ್ಧಾರ ಮಾಡಿಯಾಗಿತ್ತು.ಪ್ಲೇ ಬಾಯ್ ಎಂಟರ್‌ಪ್ರೈಸನ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಮಾಟ್ ಇರ‌್ಕಸನ್ ಹಾಗೂ ಸನ್ನಿ ಒಂದು ಕಾಲದಲ್ಲಿ ನಲ್ಲ-ನಲ್ಲೆಯಾಗಿದ್ದವರು. ಇಬ್ಬರ ಕಾಮಕೇಳಿ ಇರುವ ವಸ್ತುವೇ ಒಂದು ಸಿನಿಮಾ ಆಯಿತು. ಅದು ನಿಯಮ ಉಲ್ಲಂಘಿಸಿ ತೆರೆಕಂಡ ಚಿತ್ರ ಎನ್ನುತ್ತಾರೆ ಸನ್ನಿ. ಆ ಅನುಭವದಿಂದ ತಾನು ಪಾಠ ಕಲಿತಿರುವುದಾಗಿ ಹೇಳುವ ಸನ್ನಿಗೆ ಈಗ ಗಂಡಸರನ್ನು ಎಲ್ಲಿಡಬೇಕು, ಎಷ್ಟು ಸದರ ಕೊಡಬೇಕು ಎಂಬುದು ಸ್ಪಷ್ಟವಾಗಿ ಗೊತ್ತಿದೆಯಂತೆ.ಸನ್ನಿಯ ಹಾಲಿ ಗೆಳೆಯನ ಹೆಸರು ಡೇನಿಯಲ್. ಗಂಡಸೆಂದರೆ ಅವನಂತಿರಬೇಕು ಎನ್ನುವ ಅವಳಿಗೆ ಅವನನ್ನು ಮದುವೆಯಾಗುವ ಯೋಚನೆ ಕೂಡ ಇದೆ. ಸದ್ಯಕ್ಕೆ ಬಿಗ್-ಬಾಸ್ ಬದುಕಿನಿಂದ ಮಾಮೂಲಿ ಜೀವನಕ್ಕೆ ಬಂದು ನಂತರ ಮೊದಲಿನ ವೃತ್ತಿಗೆ ಹೋಗಬೇಕೆಂಬುದು ಅವಳ ಬಯಕೆ.ವಿದೇಶದ ಅನೇಕ ಹೆಣ್ಣು ಮಕ್ಕಳು ಹಿಂದಿ ಚಿತ್ರ ನೋಡಿಕೊಂಡು ಬೆಳೆಯುತ್ತಾರೆ. ಮಹೇಶ್ ಭಟ್ ಹೆಸರಂತೂ ಅನೇಕರಿಗೆ ಪರಿಚಿತ. ನಾನು ಕೂಡ ಅವರ ಚಿತ್ರದಲ್ಲಿ ಅಭಿನಯಿಸಲು ಉತ್ಸುಕಳಾಗಿದ್ದೇನೆ ಎನ್ನುವ ಸನ್ನಿಗೆ ಹೆಚ್ಚು ಸುಂದರಿಯರಿರುವ ಬಾಲಿವುಡ್‌ನಲ್ಲಿ ನಟಿಸುವ ಬಯಕೆ ಬಹಳ ದಿನಗಳಿಂದ ಇದೆ.ಬಿಗ್ ಬಾಸ್ ಮನೆಗೆ ನಾನು ಮೊದಲು ಹೋಗಿ, `ಪೋರ್ನ್ ಸ್ಟಾರ್~ ಎಂದು ಸನ್ನಿ ಪರಿಚಯ ಮಾಡಿಕೊಂಡಾಗ ಕೆಲವರು ದಂಗಾದದ್ದೂ ಸುಳ್ಳಲ್ಲ. ಅಶ್ಲೀಲ ಚಿತ್ರಗಳ ನಟಿ ಎಂದು ಹೇಳಿಕೊಳ್ಳುವುದಕ್ಕೆ ಮುಜುಗರವನ್ನೇ ಪಡದ ಈ ನಟಿಯನ್ನು ಮೆಚ್ಚುವವರೂ ಇದ್ದಾರೆ.ತೆಗಳುವವರೂ ಇಲ್ಲದೇ ಇಲ್ಲ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನಃಸ್ಥಿತಿ ಅವರದ್ದು. ಸ್ಥಿತಪ್ರಜ್ಞರಾಗಿದ್ದರಷ್ಟೇ ಈ ವೃತ್ತಿಯಲ್ಲಿ ಉಳಿಗಾಲ ಅನ್ನೋದು ಅವರ ಅನುಭವ.ಬಿಗ್ ಬಾಸ್‌ನಲ್ಲಿ ಹಿಂದಿ ಮಾತನಾಡುವುದನ್ನು ಕೂಡ ಕಲಿತಿರುವ ಸನ್ನಿ ಹೇಳುವುದಿಷ್ಟು:  `ಈ ಶೋನಿಂದ ಕೆಟ್ಟದ್ದು, ಒಳ್ಳೆಯದು ಎರಡನ್ನೂ ಕಲಿತೆ. ನನಗೆ ಏನೂ ಬೇಜಾರಿಲ್ಲ. ಈ ಶೋನಲ್ಲಿ ನಕ್ಕಿರುವಷ್ಟು ನಾನು ಬದುಕಿನ ಯಾವ ಸಂದರ್ಭದಲ್ಲೂ ನಕ್ಕಿಲ್ಲ~. ಡೇನಿಯಲ್ ಜೊತೆ ಮದುವೆಯಾಗುವುದು ಸನ್ನಿ ಮುಂದಿನ ಗುರಿ. 

 

ಯಾರೀ ಸನ್ನಿ...

ಸನ್ನಿಯ ಮೂಲ ಹೆಸರು ಕರಿನ್ ಮಲ್ಹೋತ್ರ. ಸಿಖ್ ಪಂಜಾಬಿ ಮೂಲದ ಈ ಚೆಲುವೆ ಹುಟ್ಟಿದ್ದು ( ಮೇ13, 1981ರಲ್ಲಿ) ಟಿಬೆಟ್‌ನಲ್ಲಿ. ಬೆಳೆದಿದ್ದು ದೆಹಲಿಯಲ್ಲಿ. ಹೆಸರು ಮಾಡಿದ್ದು `ಪೋರ್ನೊ ಸ್ಟಾರ್~ ಆಗಿ; ಅದೂ ಕೆನಡಾದಲ್ಲಿ.

 

ಮೂವತ್ತೊಂದು ವರ್ಷದ ಸನ್ನಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಗೆಳೆಯ ಅವಳನ್ನು ಪೋರ್ನೊ ಸಿನಿಮಾದ ಮಧ್ಯವರ್ತಿ ಜಾನ್ ಸ್ಟೀಫನ್ ಎಂಬುವನಿಗೆ ಪರಿಚಯಿಸಿದ. ಈ ಸಂಪರ್ಕದಿಂದ ಪೆಂಟ್ ಹೌಸ್ ನಿಯತಕಾಲಿಕೆಯ ಛಾಯಾಗ್ರಾಹಕ ಜೇ ಅಲೆನ್ ಕಣ್ಣಿಗೆ ಅವಳು ಬಿದ್ದಳು. ಈಗ ಅವಳು ವಿಶ್ವದ ಟಾಪ್ 12 ಪೋರ್ನೋ ಸ್ಟಾರ್‌ಗಳಲ್ಲಿ ಒಬ್ಬಳು.2005ರಲ್ಲಿ `ಸನ್ನಿ~ ಹೆಸರಿನಲ್ಲೇ ಈಕೆಯ ಮೊದಲ ಸಿನಿಮಾ ಬಿಡುಗಡೆಯಾಯಿತು. ನಂತರ `ವರ್ಚುವಲ್ ವಿವಿದ್ ಗರ್ಲ್ ಸನ್ನಿ ಲಿಯೋನಿ~, `ಸನ್ನಿ ಇನ್ ಬ್ರೆಜಿಲ್~ ಚಿತ್ರಗಳು ತೆರೆಕಂಡವು. ಇದುವರೆಗೆ 33 ಅಶ್ಲೀಲ ಚಿತ್ರಗಳಲ್ಲಿ ನಟಿಸಿರುವ ಈಕೆ ಅವುಗಳಲ್ಲಿ 25ನ್ನು ತಾನೇ ನಿರ್ದೇಶಿಸಿದ್ದಾಳೆ.

ಪ್ರತಿಕ್ರಿಯಿಸಿ (+)