ನಾನು ಒಳ್ಳೆಯ ನಟ

7

ನಾನು ಒಳ್ಳೆಯ ನಟ

Published:
Updated:
ನಾನು ಒಳ್ಳೆಯ ನಟ

‘ನಾನು ಕೇವಲ ನನ್ನ ನಟನೆಯಿಂದ ಉದ್ಯಮದಲ್ಲಿ ಜಾಗ ಕಂಡುಕೊಂಡವನು. ನನ್ನ ತಂದೆಯ ಕೃಪಾ ಕಟಾಕ್ಷ ನನ್ನ ಮೇಲೆ ಇಲ್ಲ. ಆ ಕಾರಣದಿಂದಲೇ ಎಷ್ಟೇ ಹೊಸ ಪ್ರತಿಭೆಗಳು ಬಂದರೂ ನನಗೆ ಅಸುರಕ್ಷಿತ ಮನಸ್ಥಿತಿ ಬರುವುದಿಲ್ಲ’ ಎಂದು ಹೇಳಿಕೊಂಡಿದ್ದಾನೆ ಅಭಿಷೇಕ್ ಬಚ್ಚನ್.‘ನಾನು ಇಷ್ಟಪಡುವ ಒಳ್ಳೆಯ ನಟ ನಾನೇ’ ಎಂದಿರುವ ಅಭಿಷೇಕ್ ನಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದಾನೆ. ‘ಎಲ್ಲರಂತೆ ನನ್ನ ನಟನಾ ಶೈಲಿಯಲ್ಲೂ ಮತ್ತಷ್ಟು ಸುಧಾರಣೆಗಳ ಅಗತ್ಯ ಇದೆ. ಆದರೆ ನಾನು ಎಂಥಹದೇ ಪಾತ್ರವಾದರೂ ಹೊಂದಿಕೊಳ್ಳಬಲ್ಲೆ. ನಟಿಸಬಲ್ಲೆ’ ಎಂದಿರುವ ಅಭಿಷೇಕ್ ಸದ್ಯ ತನ್ನ ಹೊಸಚಿತ್ರ ‘ಗೇಮ್’ನ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾನೆ. ನಟನೆಯಲ್ಲಿ ತನ್ನ ತಂದೆಯನ್ನು ಮೀರಿಸುವವರಿಲ್ಲ ಎನ್ನುತ್ತಲೇ ಮತ್ತೆ ‘ನಾನು ಕೂಡ ಒಳ್ಳೆಯ ನಟ ಕಣ್ರೀ’ ಎನ್ನುತ್ತಾ ನಗೆ ಉಕ್ಕಿಸಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry