ಗಂಗಾವತಿ: ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಹೆಸರಿಲ್ಲದ ಇಲಾಖೆಯೊಂದು ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆಗಳ ಮಾಹಿತಿ ಪಡೆಯಲು ತಾಲ್ಲೂಕಿನ ವಿವಿಧ ಭಾಗದಿಂದ ಆಗಮಿಸುವ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಇಲಾಖೆ ಹೆಸರೇಳಿಕೊಂಡು ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹಿಂದುಳಿದ ಇಲಾಖೆ: ಸಹಜವಾಗಿ ಯಾವುದೇ ಸರ್ಕಾರಿ ಇಲಾಖೆಗಳು ಸ್ವಂತ ಅಥವಾ ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸುತ್ತಿದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ತಮ್ಮ ಇಲಾಖೆಯ ಹೆಸರುಳ್ಳ ನಾಮ ಫಲಕವನ್ನು ಕಚೇರಿಯ ಮುಂದೆ ಹಾಕಿಸುವುದು ವಾಡಿಕೆ.

ಆದರೆ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ `ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ~ಯ ಕಚೇರಿ ಮುಂದೆ ಕನಿಷ್ಠ ಒಂದು ನಾಮ ಫಲಕವಿಲ್ಲ. ಹೀಗಾಗಿ ಜನ ಕಚೇರಿಯನ್ನು ಅರಸುತ್ತಾ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಒಂದು ನಾಮ ಫಲಕ ಹಾಕಿಸುವಲ್ಲಿಯೇ ಇಲಾಖೆಯ ಸ್ಥಳೀಯ ಅಧಿಕಾರಿಗಳು ಹಿಂದುಳಿದಿದ್ದಾರೆ. ಇನ್ನೂ ಇಲಾಖೆ ಮೂಲಕ ಸರ್ಕಾರದಿಂದ ಜಾರಿಯಾಗುವ ಯೋಜನೆಗಳನ್ನು ಜನರಿಗೆ ಅದೆಷ್ಟು ತ್ವರಿತವಾಗಿ ತಲುಪಿಸುತ್ತಾರೆ? ಎಂದು ರೇವಣಪ್ಪ ಕನ್ನೇರಮಡು ಪ್ರಶ್ನಿಸುತ್ತಾರೆ.

ಸಿಬ್ಬಂದಿ ಮನೆಯಲ್ಲಿ: ವಾಸ್ತವಿಕವಾಗಿ ಇಲಾಖೆಯ ತಾಲ್ಲೂಕು ಕಚೇರಿ ಆರಂಭಿಸಲು ಸ್ವಂತದೊಂದು ಕಟ್ಟಡ ಇಲ್ಲ. ಕನಿಷ್ಠ ಪಕ್ಷ ಬಾಡಿಗೆ ಪಡೆಯಲು ಅಧಿಕಾರಿಗಳು ವಿಚಾರಣೆ ನಡೆಸಿದರೆ, ಇಲಾಖೆಯ ಕರಾರುಗಳಿಂದ ಯಾವೊಬ್ಬ ಮನೆ ಮಾಲಿಕರು ಇಲಾಖೆಗೆ ಬಾಡಿಗೆ ನೀಡಲು ಮುಂದಾಗುತ್ತಿಲ್ಲ.

ಹೀಗಾಗಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ಸಿಬ್ಬಂದಿಗೆಂದು ನಿರ್ಮಿಸಲಾದ ಗೃಹ (ಕ್ವಾರ್ಟರ್ಸ್)ದಲ್ಲಿ ಕಚೇರಿ ನಡೆಯುತ್ತಿದೆ. ಆದರೆ ಕನಿಷ್ಠ ಒಂದು ನಾಮ ಫಲಕ ಹಾಕಿಸುವಷ್ಟು ಗಂಭೀರ ಸ್ಥಿತಿ ಇಲಾಖೆಗಿಲ್ಲ. ಜನರ ಅನುಕೂಲಕ್ಕಾಗಿಯಾದರೂ ನಾಮಫಲಕ ಹಾಕಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.