ರಿಯೊ ಡಿ ಜನೈರೊ (ಪಿಟಿಐ): ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಅವರು ಒಲಿಂಪಿಕ್ಸ್ನಲ್ಲಿ ಚೊಚ್ಚಲ ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಭಾರತದ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಸಾನಿಯಾ ಮತ್ತು ಬೋಪಣ್ಣ ಕ್ವಾರ್ಟರ್ ಫೈನಲ್ನಲ್ಲಿ 6–4, 6–4ರ ನೇರ ಸೆಟ್ಗಳಿಂದ ಬ್ರಿಟನ್ನ ಆ್ಯಂಡಿ ಮರ್ರೆ ಮತ್ತು ಹೀಥರ್ ವ್ಯಾಟ್ಸನ್ ವಿರುದ್ಧ ಗೆದ್ದರು.

ಒಲಿಂಪಿಕ್ಸ್ ಟೆನಿಸ್ನಲ್ಲಿ ಭಾರತ ಗೆದ್ದಿರುವುದು ಒಂದು ಪದಕ ಮಾತ್ರ. 1996ರ ಅಟ್ಲಾಂಟ ಒಲಿಂಪಿಕ್ಸ್ನ ಪುರುಷರ ಸಿಂಗಲ್ಸ್ನಲ್ಲಿ ಲಿಯಾಂಡರ್ ಪೇಸ್ ಕಂಚು ಜಯಿಸಿದ್ದರು. 20 ವರ್ಷಗಳಿಂದ ಕಾಡುತ್ತಿದ್ದ ಪದಕದ ಕೊರಗನ್ನು ನೀಗಿಸಲು ಕರ್ನಾಟಕದ ಬೋಪಣ್ಣ ಮತ್ತು ಹೈದರಾಬಾದ್ನ ಸಾನಿಯಾಗೆ ಈಗ ಉತ್ತಮ ಅವಕಾಶ ಸಿಕ್ಕಿದೆ. ಒಂದು ವೇಳೆ ಭಾರತದ ಜೋಡಿ ಸೆಮಿಫೈನಲ್ನಲ್ಲಿ ಸೋತರೂ ಕಂಚಿನ ಪದಕ ಗೆಲ್ಲಲು ಅವಕಾಶ ಸಿಗಲಿದೆ.

ಸಿಂಗಲ್ಸ್ ವಿಭಾಗದ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಮರ್ರೆ ಮತ್ತು ಈ ವರ್ಷದ ಆರಂಭದಲ್ಲಿ ನಡೆದಿದ್ದ ವಿಂಬಲ್ಡನ್ ಟೂರ್ನಿಯ ಡಬಲ್ಸ್ನಲ್ಲಿ ಪ್ರಶಸ್ತಿ ಜಯಿಸಿದ್ದ ಹೀಥರ್ ಅವರು ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ಜೋಡಿ ಎನಿಸಿತ್ತು.

ಮೊದಲ ಸೆಟ್ನ ಆರಂಭದಲ್ಲಿ ಉಭಯ ಜೋಡಿಯು ಸರ್ವ್ ಉಳಿಸಿಕೊಂಡಿತು. ಹೀಗಾಗಿ 2–2ರ ಸಮಬಲ ಕಂಡುಬಂತು.
ಆ ಬಳಿಕ ಸಾನಿಯಾ ಮತ್ತು ಬೋಪಣ್ಣ ಮಿಂಚಿದರು. ಐದನೇ ಗೇಮ್ನಲ್ಲಿ ಎದುರಾಳಿಗಳ ಸರ್ವ್ ಮುರಿದ ಅವರು ಮರು ಗೇಮ್ನಲ್ಲಿ ತಮ್ಮ ಸರ್ವ್ ಕೈಚೆಲ್ಲಿದರು.

ಆದರೆ ಏಳನೇ ಗೇಮ್ನಲ್ಲಿ ಬ್ರಿಟನ್ನ ಹೀಥರ್ ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಸಾನಿಯಾ ಬಾರಿಸಿದ ಚೆಂಡನ್ನು ಹಿಂತಿರುಗಿಸಲು ಮರ್ರೆಗೆ ಆಗಲಿಲ್ಲ. ಹೀಗಾಗಿ ಭಾರತದ ಜೋಡಿ 4–3ರ ಮುನ್ನಡೆ ಗಳಿಸಿತು.

ಎಂಟನೇ ಗೇಮ್ನಲ್ಲಿ ಸಾನಿಯಾ ಮನಮೋಹಕ ಸರ್ವ್ಗಳನ್ನು ಮಾಡಿ ದರು. ಸಾನಿಯಾ ಬಾರಿಸಿದ ಚೆಂಡನ್ನು ಹಿಂತಿರುಗಿಸಲು ಎದುರಾಳಿಗಳು ಪ್ರಯಾಸ ಪಟ್ಟರಲ್ಲದೆ, ಸುಲಭವಾಗಿ ಗೇಮ್ ಬಿಟ್ಟುಕೊಟ್ಟರು.

ಒಂಬತ್ತನೇ ಗೇಮ್ನಲ್ಲೂ ಭಾರತದ ಜೋಡಿ ಎದುರಾಳಿಗಳ ಸರ್ವ್ ಮುರಿಯಿತು. ಬೋಪಣ್ಣ ಎರಡು ಅಮೋಘ ಏಸ್ಗಳನ್ನು ಸಿಡಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಇದರೊಂದಿಗೆ ಭಾರತದ ಜೋಡಿ ಸುಲಭವಾಗಿ ಸೆಟ್ ಜಯಿಸಿತು.

ಎರಡನೇ ಸೆಟ್ನಲ್ಲಿ ಮರ್ರೆ ಮತ್ತು ಹೀಥರ್ ಲಯ ಕಂಡುಕೊಂಡರು. ತಮ್ಮ ಸರ್ವ್ ಉಳಿಸಿಕೊಂಡ ಅವರು ಮುನ್ನಡೆ ಪಡೆದರು. ಇನ್ನೊಂದೆಡೆ ಸಾನಿಯಾ ಮತ್ತು ಬೋಪಣ್ಣ ಕೂಡ ಸರ್ವ್ ಕಾಪಾಡಿ ಕೊಂಡರು. ನಾಲ್ಕು ಗೇಮ್ವರೆಗೂ ಸಮಬಲದ ಪೈಪೋಟಿ ಮುಂದುವರಿಯಿತು. ಆದರೆ ಐದನೇ ಗೇಮ್ನಲ್ಲಿ ಬ್ರಿಟನ್ನ ಜೋಡಿಯ ಸರ್ವ್ ಮುರಿದ ಸಾನಿಯಾ ಮತ್ತು ಬೋಪಣ್ಣ 3–2ರಲ್ಲಿ ಮುನ್ನಡೆ ಪಡೆದರು. ಮೂರು ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಬ್ರಿಟನ್ನ ಆ್ಯಂಡಿ ಮರ್ರೆ ಪಂದ್ಯಕ್ಕೂ ಮುನ್ನ ಸಿಂಗಲ್ಸ್ ನಲ್ಲಿ ಆಡಿದ್ದರು.

ಇದರಿಂದ ಸಾಕಷ್ಟು ದಣಿದಂತಿದ್ದ ಅವರಿಗೆ ಪರಿಣಾಮಕಾರಿಯಾಗಿ ಆಡ ಲು ಆಗಲಿಲ್ಲ. ಇದು ಭಾರತದ ಜೋಡಿಗೆ ವರದಾನವಾಯಿತು. ಇದರ ಲಾಭ ಪಡೆದ ಸಾನಿಯಾ ಮತ್ತು ಬೋಪಣ್ಣ ಸುಲಭವಾಗಿ ಪಂದ್ಯ ಗೆದ್ದರು.

ಸೆಮಿಫೈನಲ್ನಲ್ಲಿ ಸಾನಿಯಾ ಮತ್ತು ಬೋಪಣ್ಣ ಅವರು ಅಮೆರಿಕದ ವೀನಸ್ ವಿಲಿಯಮ್ಸ್ ಮತ್ತು ರಾಜೀವ್ ರಾಮ್ ವಿರುದ್ಧ ಆಡುವರು.

ನಡಾಲ್– ಲೊಪೆಜ್ಗೆ ಚಿನ್ನ: ಸ್ಪೇನ್ನ ರಫೆಲ್ ನಡಾಲ್ ಮತ್ತು ಅವರ ಆತ್ಮೀಯ ಸ್ನೇಹಿತ ಮಾರ್ಕ್ ಲೊಪೆಜ್ ಅವರು ಪುರುಷರ ಡಬಲ್ಸ್ನಲ್ಲಿ ಚಿನ್ನ ಗೆದ್ದರು.

ಫೈನಲ್ನಲ್ಲಿ ನಡಾಲ್ ಮತ್ತು ಲೊಪೆಜ್ 6–2, 3–6, 6-4ರಲ್ಲಿ ರುಮೇನಿಯಾದ ಫ್ಲೋರಿನ್ ಮಾರ್ಗಿಯ ಮತ್ತು ಹೋರಿಯ ಟೆಕಾವ್ ಅವರನ್ನು ಮಣಿಸಿದರು.

ನಡಾಲ್ ಒಲಿಂಪಿಕ್ಸ್ನಲ್ಲಿ ಗೆದ್ದ ಎರಡನೇ ಚಿನ್ನ ಇದಾಗಿದೆ. 2008ರ ಬೀಜಿಂಗ್ ಒಲಿಂಪಿಕ್ಸ್ನ ಸಿಂಗಲ್ಸ್ನಲ್ಲಿ ಅವರು ಚಿನ್ನದ ಸಾಧನೆ ಮಾಡಿದ್ದರು. ಅವರು ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಚಿನ್ನ ಗೆದ್ದ ವಿಶ್ವದ ನಾಲ್ಕನೇ ಆಟಗಾರ ಎನಿಸಿದರು. ಅಮೆರಿಕದ ಸೆರೆನಾ ಮತ್ತು ವೀನಸ್ ವಿಲಿಯಮ್ಸ್ ಹಾಗೂ ಚಿಲಿಯ ನಿಕೊಲಸ್ ಮಾಸು ಅವರು ಈ ಸಾಧನೆ ಮಾಡಿದ್ದರು.

ಸಿಂಗಲ್ಸ್ನಲ್ಲಿ ಸೆಮಿಗೆ: ಇದಕ್ಕೂ ಮುನ್ನ 30 ವರ್ಷದ ನಡಾಲ್ ಸಿಂಗಲ್ಸ್ ವಿಭಾಗ ದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.
ಕ್ವಾರ್ಟರ್ ಫೈನಲ್ನಲ್ಲಿ ನಡಾಲ್ 2–6, 6–4, 6–2ರಲ್ಲಿ ಬ್ರೆಜಿಲ್ನ ಥಾಮಸ್ ಬೆಲ್ಲುಕಿ ವಿರುದ್ಧ ಗೆದ್ದಿದ್ದರು.

ಸೆಮಿಯಲ್ಲಿ ನಡಾಲ್, ಅರ್ಜೆಂಟೀನಾ ದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಆಡುವರು.
ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಪೊಟ್ರೊ 7–5, 7–6ರಲ್ಲಿ ಸ್ಪೇನ್ನ ರಾಬರ್ಟ್ ಬೌಟಿಸ್ಟಾ ಅಗತ್ ವಿರುದ್ಧ ಗೆದ್ದಿದ್ದರು.

ಸೆಮಿಗೆ ಮರ್ರೆ: ದಿಟ್ಟ ಆಟ ಆಡಿದ ಬ್ರಿಟನ್ನ ಆ್ಯಂಡಿ ಮರ್ರೆ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲುಪಿದರು.

ಕ್ವಾರ್ಟರ್ ಫೈನಲ್ನಲ್ಲಿ ಮರ್ರೆ 6–0, 4–6, 7–6ರಲ್ಲಿ ಅಮೆರಿಕದ ಸ್ಟೀವ್ ಜಾನ್ಸನ್ ಮೇಲೆ ಗೆದ್ದರು.
ಇನ್ನೊಂದು ಪಂದ್ಯದಲ್ಲಿ ಜಪಾನ್ನ ಕಿ ನಿಶಿಕೋರಿ 7–6, 4–6, 7–6ರಲ್ಲಿ ಫ್ರಾನ್ಸ್ನ ಗಾಯೆಲ್ ಮೊಂಫಿಲ್ಸ್ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.