ಬುಧವಾರ, ಜನವರಿ 29, 2020
26 °C

ನಾಲ್ಕು ರಾಜ್ಯಗಳಿಗೆ ಬಿಜೆಪಿ ವೀಕ್ಷಕರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಿಜೆಪಿ ಜಯ ಸಾಧಿಸಿರುವ ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚನೆಗೆ ಸಿದ್ಧತೆ ಮಾಡಲು ಪಕ್ಷದ ಅಧ್ಯಕ್ಷ ರಾಜ್‌ನಾಥ್‌ ಸಿಂಗ್‌ ವೀಕ್ಷಕ­ರನ್ನು ನೇಮಿಸಿದ್ದಾರೆ.ಭಾನುವಾರ ವಿಧಾನಸಭಾ ಚುನಾವಣೆ ಫಲಿ­ತಾಂಶದ ಬಳಿಕ ನಡೆದ ಬಿಜೆಪಿ ಸಂಸ­ದೀಯ ಮಂಡಳಿ ಸಭೆಯಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಇತರ ಉನ್ನತ ನಾಯ­ಕರು ಈ ನಿರ್ಧಾರ ಕೈಗೊಂಡಿದ್ದಾರೆ.ಸುಷ್ಮಾ ಸ್ವರಾಜ್‌, ರಾಜೀವ್‌ ಪ್ರತಾಪ್‌ ರೂಡಿ ಹಾಗೂ ಅನಂತ ಕುಮಾರ್‌ ಮಧ್ಯಪ್ರದೇಶಕ್ಕೆ, ವೆಂಕಯ್ಯ ನಾಯ್ಡು, ಜೆ.ಪಿ. ನಡ್ಡಾ ಹಾಗೂ ಧರ್ಮೇಂದ್ರ ಪ್ರಧಾನ್‌ ಛತ್ತೀಸಗಡಕ್ಕೆ, ಅರುಣ್‌ ಜೇಟ್ಲಿ, ಅಮಿತ್‌ ಷಾ ಹಾಗೂ ಕಪ್ತಾನ್‌ ಸಿಂಗ್‌ ಸೋಲಂಕಿ ರಾಜಸ್ತಾ­ನಕ್ಕೆ, ನಿತಿನ್‌ ಗಡ್ಕರಿ ಮತ್ತು ತಾವರ್‌­ಚಂದ್‌ ಗೆಹ್ಲೋಟ್‌ ದೆಹಲಿಗೆ ವೀಕ್ಷಕರಾಗಿ ನೇಮಕವಾಗಿದ್ದಾರೆ.

ಪ್ರತಿಕ್ರಿಯಿಸಿ (+)