ಶುಕ್ರವಾರ, ಜೂನ್ 25, 2021
29 °C
ಕಾಲ್‌ ಸೆಂಟರ್ ಉದ್ಯೋಗಿ ಅತ್ಯಾಚಾರ ಪ್ರಕರಣ

ನಾಲ್ವರಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಇಲ್ಲಿನ ಶಕ್ತಿಮಿಲ್‌ ಆವರಣದಲ್ಲಿ ಕಾಲ್‌­­ಸೆಂಟರ್‌ ಉದ್ಯೋಗಿ ಮೇಲೆ ಸಾಮೂ­ಹಿಕ ಅತ್ಯಾ­ಚಾರ ನಡೆಸಿದ್ದ ನಾಲ್ವರು ಅಪರಾಧಿ­ಗಳಿಗೆ ತ್ವರಿತ ನ್ಯಾಯಾ­­ಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.ಈ ನಾಲ್ವರು ಅಪರಾಧಿಗಳು ಗಂಭೀರ  ಕೃತ್ಯವೆಸಗಿದ್ದಾರೆ, ಇದು ವ್ಯಕ್ತಿಯೊಬ್ಬರ ಜೀವಿ­ಸುವ ಮೂಲ­ಭೂತ ಹಕ್ಕಿಗೆ ಧಕ್ಕೆ ಉಂಟು ಮಾಡಿದಂತೆ ಎಂದು ತ್ವರಿತ ನ್ಯಾಯಾಲ­ಯದ ಪ್ರಧಾನ ನ್ಯಾಯಾ­ಧೀಶೆ ಶಾಲಿನಿ ಫನ್ಸಲ್‌ಕರ್‌ ಅಭಿಪ್ರಾ­ಯಪಟ್ಟಿದ್ದಾರೆ.‘ಅತ್ಯಾಚಾರಕ್ಕೆ ಒಳಗಾದ ಯುವತಿ ಮಾನ­ಸಿಕವಾಗಿ ಕುಗ್ಗಿ ಹೋಗಿದ್ದಾಳೆ ಎಂಬುದನ್ನು ನಾವು ಮರೆಯಬಾರದು.  ಅಪರಾಧಿಗಳಾದ ವಿಜಯ್‌ ಜಾಧವ್‌ (19), ಮೊಹಮದ್‌ ಕ್ವಾಸಿಮ್‌ ಹಫೀಜ್‌ ಶೇಖ್‌ ಅಲಿಯಾಸ್‌ ಕ್ವಾಸಿಮ್‌ ಬೆಂಗಾಲಿ (21), ಮೊಹಮದ್‌ ಅನ್ಸಾರಿ (28) ಮತ್ತು ಮೊಹಮದ್‌ ಅಶ್ಫಕ್‌ ನಡೆಸಿದ್ದು ಪೂರ್ವ ನಿಯೋಜಿತ ಸಂಚು’ ಎಂದು ಅವರು ತಿಳಿಸಿದ್ದಾರೆ.ಪ್ರಕರಣ 24ಕ್ಕೆ: ಶಕ್ತಿ­ಮಿಲ್‌ ಆವರಣ­ದ­ಲ್ಲಿಯೇ  ಪತ್ರಿಕಾ ಛಾಯಾ­ಗ್ರಾಹಕಿ ಮೇಲೆ ನಡೆದ ಸಾಮೂ­ಹಿಕ ಅತ್ಯಾಚಾರ­ದಲ್ಲೂ ಇದೇ ಆರೋಪಿಗಳು (ವಿಜಯ್‌ ಜಾಧವ್‌, ಕ್ವಾಸಿಮ್‌ ಬೆಂಗಾಲಿ ಮತ್ತು ಮೊಹ­ಮದ್ ಅನ್ಸಾರಿ) ಪಾಲ್ಗೊಂ­ಡಿದ್ದಾರೆ. ಆದ್ದರಿಂದ ಇವರ ವಿರುದ್ಧ ಅಪ­ರಾಧ ಪುನರಾವರ್ತನೆಗೆ ಸಂಬಂಧಿಸಿ­ದಂತೆ ಐಪಿಸಿ ಕಲಂ 376 (ಇ) ಅನ್ವಯ ಹೆಚ್ಚುವರಿ ದೋಷಾರೋಪ ದಾಖಲಿಸಿ­ಕೊಳ್ಳುವಂತೆ ವಿಶೇಷ ಪ್ರಾಸಿಕ್ಯೂಟರ್‌ ಉಜ್ವಲ್‌ ನಿಕಮ್‌ ಅರ್ಜಿ ಸಲ್ಲಿಸಿದರು.ಐಪಿಸಿ ಕಲಂ 376 (ಇ) ಅಡಿಯಲ್ಲಿ ಈ ದೋಷಾರೋಪಕ್ಕೆ ಗರಿಷ್ಠ ಶಿಕ್ಷೆ ಎಂದರೆ ಮರಣದಂಡನೆ. ಇದರ ಬಗ್ಗೆ ಮಾ. 24ರಂದು ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.2013ರ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆದಿದ್ದ ಎರಡು ಸಾಮೂಹಿಕ ಅತ್ಯಾ­ಚಾರ ಪ್ರಕರಣಗಳಲ್ಲಿ 18 ವರ್ಷದ ಒಳಗಿನ ಇಬ್ಬರು ಬಾಲಕರು ಸೇರಿದಂತೆ   ಏಳು ಜನರನ್ನು ಬಂಧಿಸಲಾಗಿತ್ತು. ಅವ­ರಲ್ಲಿ ಮೂವರು ಎರಡೂ ಪ್ರಕರಣ­ಗಳಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಬಾಲಾರೋಪಿಗಳ ಬಗ್ಗೆ ಬಾಲಾ­ಪರಾಧ ನ್ಯಾಯ-­ಮಂಡಳಿಯು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದೆ.  ಅಪರಾಧವೆಸಗುವುದು ಇವರ ಹವ್ಯಾಸ­ವಾಗಿರುವುದರಿಂದ ಇವರಿಗೆ ಗರಿಷ್ಠ ಶಿಕ್ಷೆಯಾದ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಬೇಕು ಎಂದು ನಿಕಮ್ ವಾದಿಸಿದ್ದರು.

ಅಪರಾಧ ವಿಭಾಗದ ಮುಖ್ಯಸ್ಥರಾಗಿ­ದ್ದಾಗ ಪ್ರಕರಣದ ಉಸ್ತುವಾರಿ ವಹಿಸಿದ್ದ ಈಗಿನ ಎಟಿಎಸ್‌ ಮುಖ್ಯಸ್ಥ  ಹಿಮಾಂಶು ರಾಯ್‌ ಸಹ ತೀರ್ಪನ್ನು ಸ್ವಾಗತಿಸಿದ್ದಾರೆ.ಕಾಲ್‌ ಸೆಂಟರ್‌ ಉದ್ಯೋಗಿ ಘಟನೆ ನಡೆದು ಒಂದು ತಿಂಗಳ ನಂತರ ದೂರು ನೀಡಿದ್ದರಿಂದ ಸಾಕ್ಷಾಧಾರಗಳನ್ನು ಕಲೆ ಹಾಕುವುದು ದೊಡ್ಡ ಸವಾಲಾಗಿತ್ತು. ಆದರೆ ಶಕ್ತಿಮಿಲ್‌ ಆವರಣ ನಿರ್ಜನ ಪ್ರದೇಶವಾಗಿದ್ದರಿಂದ ಘಟನೆ ನಡೆದ ಸ್ಥಳ­ದಲ್ಲಿ ಕೆಲವು ಸಾಕ್ಷಾಧಾರಗಳು ಸಿಕ್ಕಿದ್ದ­ರಿಂದ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.