ಬುಧವಾರ, ಏಪ್ರಿಲ್ 14, 2021
23 °C

ನಾಳಿನ ಹುಣ್ಣಿಮೆಗೆ ಭಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆಯ ಹುಣ್ಣಿಮೆಯಂದು ಚಂದ್ರ ಭೂಮಿಗೆ ಬಹಳ ಹತ್ತಿರ ಬರುತ್ತಾನೆ. ಇದರಿಂದ ಪ್ರಳಯವಾಗುತ್ತದೆ ಎಂದೆಲ್ಲ ಭಯ ಹುಟ್ಟಿಸುವವರ ಮಾತನ್ನು ನಂಬಬೇಕಾಗಿಲ್ಲ. ಜಪಾನ್‌ನಲ್ಲಿ ಉಂಟಾಗಿರುವ ಭೂಕಂಪ- ಸುನಾಮಿಯಿಂದ ಜನರಲ್ಲಿ ಭೀತಿ ಹುಟ್ಟಿರುವುದು ನಿಜ. ಇದನ್ನೇ ದೊಡ್ಡದು ಮಾಡಿಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಾ ಜ್ಯೋತಿಷಿಗಳು ಜನರನ್ನು ಅಧೀರರನ್ನಾಗಿ ಮಾಡುತ್ತಿರುವುದು ದುರದೃಷ್ಟಕರ.ಈಗಿನಂತೆಯೇ ಚಂದ್ರ 1955, 1974, 1992 ಮತ್ತು 2005ರಲ್ಲಿ ಭೂಮಿಗೆ ಬಹಳ ಹತ್ತಿರ ಬಂದಿದ್ದ. ಆಗೆಲ್ಲ ಅನಾಹುತಗಳು ಸಂಭವಿಸಿವೆ ಎಂದು ಕಣಿ ಹೇಳುವವರು ಕೆಲ ಘಟನೆಗಳನ್ನು ಹೆಣೆಯುತ್ತಿದ್ದಾರೆ. ಆದರೆ ಆಗ ಮುಳುಗದ ಜಗತ್ತು ಈಗ ಮುಳುಗುತ್ತದೆಯೇ ಎಂದು ಆಲೋಚಿಸಬೇಕು. ಚಂದ್ರ ಭೂಮಿಗೆ ಹತ್ತಿರವಾದಾಗ ಏನಾದರೂ ಅವಘಡ ಸಂಭವಿಸಿದ್ದಲ್ಲಿ ಅದು ಕಾಕತಾಳೀಯವೇ ಹೊರತು ಬೇರೆ ಕಾರಣವಿಲ್ಲ.ಜ್ಯೋತಿಷಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಈ ಮುಂಚೆಯೇ ಜಪಾನ್ ದುರಂತವನ್ನು ಮುಂಗಾಣುವವರಿದ್ದರೆ ಅದನ್ನು ತಪ್ಪಿಸಲು ಪ್ರಯತ್ನಿಸಬಹುದಿತ್ತಲ್ಲವೇ? ಸುಮ್ಮನೆ ಭಯ ಪಡುವುದನ್ನು ಬಿಟ್ಟು ಭೂಮಿಯ ಹತ್ತಿರ ಬರುವ ಪೂರ್ಣಚಂದ್ರನ ದೃಶ್ಯವೈಭವ ನೋಡಿ ಸವಿಯೋಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.