ಶನಿವಾರ, ಮೇ 8, 2021
27 °C

ನಾಳೆ `ನಾಗರಿಕ ಸನ್ನದು' ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ನಮ್ಮ ಬೆಂಗಳೂರು ನಗರ ಹೇಗಿರಬೇಕು, ಯಾವ ರೀತಿಯ ಕೆಲಸ ಆಗಬೇಕು, ಅವುಗಳ ನಿರ್ವಹಣೆ ನಿಗದಿತ ಕಾಲಮಿತಿಯೊಳಗೆ ಯಾವ ರೀತಿ ನಡೆಯಬೇಕು ಎಂಬುದರ ಕುರಿತು ರಾಜ್ಯ ಸರ್ಕಾರಕ್ಕೆ ಕೆಲವೊಂದು ಸಲಹೆ ಹಾಗೂ ಸೂಚನೆಗಳನ್ನು ನೀಡಲು ನಮ್ಮ ಬೆಂಗಳೂರು ಪ್ರತಿಷ್ಠಾನ `ನಾಗರಿಕ ಸನ್ನದು' ತಯಾರಿಸಿದೆ' ಎಂದು ಪ್ರತಿಷ್ಠಾನದ ನಿರ್ದೇಶಕಿ ಪಿ. ಮಹಾಲಕ್ಷ್ಮಿ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕ ಸನ್ನದಿನಲ್ಲಿ ಪ್ರಮುಖವಾಗಿ ರಾಜ್ಯದಲ್ಲಿ ಪರಿಣಾಮಕಾರಿ ಆಡಳಿತ ಹೇಗೆ ನಡೆಸಬೇಕು, ನಗರದಲ್ಲಿ ಕೈಗೊಳ್ಳುವ ಯೋಜನೆಗಳ ಸರಿಯಾದ ನಿರ್ವಹಣೆ, ಗುಣಮಟ್ಟ, ಯೋಜನೆಯ ಕಾಲಮಿತಿ ಹಾಗೂ ಅದಕ್ಕೆ ವಿನಿಯೋಗಿಸುವ ಸಾರ್ವಜನಿಕರ ಹಣ ವ್ಯರ್ಥವಾಗದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜೊತೆಗೆ ಸಾರ್ವಜನಿಕರು ನಗರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ನಗರದ ಅಭಿವೃದ್ಧಿಗೆ ಆಗಬೇಕಾದ ಕಾರ್ಯಗಳ ಪಟ್ಟಿ ಮಾಡಲಾಗಿದೆ ಎಂದರು. ಪ್ರತಿಷ್ಠಾನದ ವತಿಯಿಂದ ಇದೇ 7ರಂದು ಸಂಜೆ 3ರಿಂದ 5ಗಂಟೆವರೆಗೆ ನಗರದ ಪುರಭವನದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿದ್ದು, ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ 28 ಶಾಸಕರಿಗೆ ಸನ್ಮಾನ ಮಾಡಲಾಗುವುದು. ನಂತರ ಪ್ರತಿಷ್ಠಾನ ಸಿದ್ಧಪಡಿಸಿರುವ ನಾಗರಿಕ ಸನ್ನದನ್ನು ಮುಖ್ಯಮಂತ್ರಿಯವರಿಗೆ ನೀಡಲಾಗುವುದು ಎಂದು ತಿಳಿಸಿದರು.ಈಶಾನ್ಯ ನಿವಾಸಿ ಅಭಿವೃದ್ಧಿ ಸಂಘಟನೆಯ ಕಾರ್ಯದರ್ಶಿ ಡಿ.ಎಸ್.ರಾಜಶೇಖರ್, ಈ ಬೃಹತ್ ವೇದಿಕೆಯಲ್ಲಿ ಜನಪ್ರತಿನಿಧಿಗಳಿಗೆ ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕರು ನಿಮ್ಮಂದಿಗೆ ಕೈಜೋಡಿಸಲಿದ್ದೇವೆ ಎಂದು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ. ಜೊತೆಗೆ ಈ ಬಾರಿ ಕೇವಲ ಆಶ್ವಾಸನೆ ನೀಡಿದರೆ ಸಾಲದು, ನಿಗದಿತ ಕಾಲಮಿತಿಯೊಳಗೆ ಹೇಳಿದ ಕೆಲಸಗಳನ್ನು ಮಾಡುವಂತೆ ಒತ್ತಾಯಿಸಲಾಗುವುದು ಎಂದರು.ಸರ್ಕಾರ ತಮ್ಮ ಮನಸ್ಸಿಗೆ ಬಂದಂತೆ ಯೋಜನೆಗಳನ್ನು ಜಾರಿ ಮಾಡಬಾರದು, ಆ ಯೋಜನೆಯಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತದೆಯೇ ಎಂಬುದರ ಬಗ್ಗೆ ಮೊದಲು ಸಾರ್ವಜನಿಕರೊಂದಿಗೆ ಚರ್ಚಿಸಿ, ಅವರ ಸಲಹೆ ಪಡೆದ ನಂತರ ಅದನ್ನು ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸದಸ್ಯರು, 300ಕ್ಕೂ ಹೆಚ್ಚಿನ ನಿವಾಸಿ ಅಭಿವೃದ್ಧಿ ಸಂಘಟನೆಗಳು ಹಾಗೂ ನಗರದ ಮೂಲೆ ಮೂಲೆಗಳಿಂದ ಬರುವ ನಾಗರಿಕರು ಭಾಗವಹಿಸಲಿದ್ದು, ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜಶೇಖರ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.