ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 46ನೇ ಘಟಿಕೋತ್ಸವ ಇದೇ 13ರಂದು ನಡೆಯಲಿದ್ದು, ವಿವಿ ವಿಶ್ರಾಂತ ಕುಲಪತಿ ಡಾ.ಆರ್. ದ್ವಾರಕೀನಾಥ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, `ರಾಗಿ ಲಕ್ಷ್ಮಣ್~ ಎಂದೇ ಖ್ಯಾತರಾದ ಡಾ. ಲಕ್ಷ್ಮಣ್, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಜಿ.ವಿ.ಕೆ. ಭಟ್ ಹಾಗೂ ಡಾ.ಎಂ.ಎಸ್. ಸ್ವಾಮಿನಾಥನ್ ಅವರಿಗೆ ಇದುವರೆಗೆ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದ್ದು, ಡಾ. ದ್ವಾರಕೀನಾಥ್ ಈ ಗೌರವ ಪಡೆಯುತ್ತಿರುವ ಐದನೆಯವರು.

ಶುಕ್ರವಾರ ಬೆಳಿಗ್ಗೆ 11.30ಕ್ಕೆ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಪರಿಷತ್ನ ಅಧ್ಯಕ್ಷ ಡಾ.ಸಿ. ರಂಗರಾಜನ್ ಘಟಿಕೋತ್ಸವ ಭಾಷಣ ಮಾಡಲಿದ್ದು, ಕೃಷಿ ವಿವಿ ಕುಲಾಧಿಪತಿಗಳೂ ಆದ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಹಾಗೂ ಕೃಷಿ ಸಚಿವ ಉಮೇಶ್ ಕತ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಕೆ. ನಾರಾಯಣಗೌಡ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಘಟಿಕೋತ್ಸವದಲ್ಲಿ 387 ಸ್ನಾತಕ ಪದವಿ, 293 ಸ್ನಾತಕೋತ್ತರ ಪದವಿ ಹಾಗೂ 30 ಪಿಎಚ್.ಡಿ ಪದವಿ ಸೇರಿದಂತೆ ಒಟ್ಟು 710 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಅಲ್ಲದೆ, ವಿಶ್ವವಿದ್ಯಾಲಯದ 37 ಚಿನ್ನದ ಪದಕ ಹಾಗೂ ದಾನಿಗಳ 80 ಚಿನ್ನದ ಪದಕ ಸೇರಿದಂತೆ ಒಟ್ಟು 117 ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕೃಷಿ ಡಿಪ್ಲೋಮಾ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಈ ವರ್ಷದಿಂದ ಮಂಡ್ಯ ಹಾಗೂ ದಾವಣಗೆರೆ ಜಿಲ್ಲೆಯ ಕತ್ತಲಗೆರೆಯಲ್ಲಿ ಎರಡು ವರ್ಷಗಳ ಕೃಷಿ ಡಿಪ್ಲೋಮಾ ಆರಂಭಿಸಿದ್ದು, 103 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾಸಿಕ ಒಂದು ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅಲ್ಲದೆ, ಸಮಗ್ರ ಕೃಷಿ, ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತ ದೂರ ಶಿಕ್ಷಣವನ್ನು 2011-12ನೇ ಸಾಲಿನಿಂದ ಆರಂಭಿಸಲಾಗಿದ್ದು, ಸಾವಿರ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಕುಲಪತಿ ತಿಳಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 25 ಸಾವಿರ ಕುಟುಂಬಗಳನ್ನು ಸೇರಿಸಿಕೊಂಡು ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ ಯೋಜನೆಯನ್ನು ರಾಜ್ಯದ 15 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದರು.
ಡಾ.ಎಚ್. ಶಿವಣ್ಣ, ಡಾ.ಆರ್. ಎಚ್. ಕುಲಕರ್ಣಿ ಉಪಸ್ಥಿತರಿದ್ದರು.

ಆರು ಹೊಸ ತಳಿಗಳ ಬಿಡುಗಡೆಗೆ ಶಿಫಾರಸು

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೆ.ಆರ್.ಎಚ್-4 ಬತ್ತದ ತಳಿ ಸೇರಿದಂತೆ ಆರು ಹೊಸ ತಳಿಗಳ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇನ್ನು ಆರು ತಿಂಗಳಲ್ಲಿ ಈ ತಳಿಗಳು ಲಭ್ಯವಾಗಲಿವೆ.
ಬತ್ತ: ಕೆಆರ್ಎಚ್-4: ಇದು 130ರಿಂದ 135 ದಿನಗಳ ಅವಧಿಯ ಹೈಬ್ರಿಡ್ ಬತ್ತದ ತಳಿಯಾಗಿದ್ದು, ಪ್ರತಿ ಹೆಕ್ಟೇರ್ಗೆ 7.8 ಟನ್ ಇಳುವರಿ ನೀಡಲಿದೆ. ಈ ತಳಿಯು ಪ್ರಚಲಿತ ತಳಿಯಾದ ಕೆಆರ್ಎಚ್-2 ಗಿಂತ ಶೇ 12ರಷ್ಟು ಹೆಚ್ಚಿನ ಇಳುವರಿ ನೀಡಲಿದೆ. ನೀರಾವರಿ ಬೇಸಾಯಕ್ಕೆ ಈ ತಳಿ ಸೂಕ್ತವಾಗಿದೆ.

ರಾಗಿ: ಕೆಎಂಆರ್-204: ಈ ತಳಿ 104 ದಿನಗಳಲ್ಲಿ ಕೊಯ್ಲಿಗೆ ಬರಲಿದೆ. ಕಾಳುಗಳು ಕೆಂಪು ಇಟ್ಟಿಗೆ ಬಣ್ಣ ಹೊಂದಿದ್ದು, ಬೆಂಕಿ ನಿರೋಧಕ ಶಕ್ತಿ ಹೊಂದಿದೆ. ನೀರಾವರಿಯಲ್ಲಿ ಈ ತಳಿಯು ಹೆಕ್ಟೇರ್ಗೆ 35ರಿಂದ 40 ಹಾಗೂ ಮಳೆಯಾಶ್ರಯದಲ್ಲಿ ಹೆಕ್ಟೇರ್ಗೆ 30ರಿಂದ 35 ಕ್ವಿಂಟಾಲ್ ಇಳುವರಿ ನೀಡಲಿದೆ.

ತೊಗರಿ: ಜಿಆರ್ಜಿ 10-2: 140ರಿಂದ 145 ದಿನಗಳ ಅವಧಿಯಲ್ಲಿ ಕೊಯ್ಲಿಗೆ ಬರುವ ಈ ತಳಿಯು ಹೆಕ್ಟೇರ್ಗೆ 14 ಕ್ವಿಂಟಾಲ್ ಇಳುವರಿ ನೀಡಲಿದೆ. ಮಳೆ ತಡವಾಗುವ ಸಂದರ್ಭಗಳಲ್ಲಿ ಈ ತಳಿಯು ಬೇಸಾಯಕ್ಕೆ ಸೂಕ್ತವಾಗಿದೆ

ಎಳ್ಳು: ಜಿಟಿ-1: ಇದು ಬಿಳಿ ಬೀಜದ ತಳಿಯಾಗಿದ್ದು, ಹೆಕ್ಟೇರ್ಗೆ 6.2 ಕ್ವಿಂಟಾಲ್ ಇಳುವರಿ ನೀಡಲಿದೆ. ಇದರಲ್ಲಿ ಶೇ 54ರಷ್ಟು ತೈಲಾಂಶವಿದ್ದು, 86 ದಿನಗಳಲ್ಲಿ ಕೊಯ್ಲಿಗೆ ಬರಲಿದೆ.

ತರಕಾರಿ ಅಲಸಂದೆ: ಎ.ವಿ-5: ಈ ತಳಿಯು ಆಗಸ್ಟ್-ಸೆಪ್ಟೆಂಬರ್ ಮತ್ತು ಜನವರಿ- ಫೆಬ್ರುವರಿ ತಿಂಗಳಲ್ಲಿ ಬಿತ್ತನೆಗೆ ಸೂಕ್ತ. 80ರಿಂದ 85 ದಿನಗಳಲ್ಲಿ ಕೊಯ್ಲಿಗೆ ಬರಲಿದೆ. ಹೆಕ್ಟೇರ್ಗೆ 9.6 ಟನ್ ಹಸಿರುಕಾಯಿ ಇಳುವರಿ ನೀಡಲಿದೆ.

ಮೇವಿನ ಓಟ್ಸ್: ಓಎಸ್-6: ಈ ತಳಿಯು ಹೆಕ್ಟೇರ್ಗೆ 255 ಕ್ವಿಂಟಾಲ್ ಹಸಿರು ಮೇವು ನೀಡಲಿದೆ. ಹೆಕ್ಟೇರ್ಗೆ 4.48 ಕ್ವಿಂಟಾಲ್ ಕಚ್ಚಾ ಸಸಾರಜನಕ ಹೊಂದಿದ್ದು, ಇದರ ಎಲೆ ಮತ್ತು ಕಾಂಡದ ಅನುಪಾತ 0.43ರಷ್ಟಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.