ಬುಧವಾರ, ಜನವರಿ 22, 2020
26 °C

ನಾಳೆ ಮಂಗಳನೌಕೆ ‘ಪಥ ಬದಲಾವಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಮಂಗಳ ಗ್ರಹದತ್ತ ಮುನ್ನುಗ್ಗುತ್ತಿರುವ ಭಾರತದ ಪ್ರಪ್ರಥಮ ಮಂಗಳ ನೌಕೆಯನ್ನು ಸರಿಯಾದ ಪಥಕ್ಕೆ ಸೇರಿಸುವ ಕಾರ್ಯ ಡಿ.11ರಂದು ನಡೆಯಲಿದೆ.ಭೂಮಿಯ ಗುರುತ್ವಾಕರ್ಷಣ ವಲಯವನ್ನು ದಾಟಿ ಈಗಾಗಲೇ ಸಾಕಷ್ಟು ದೂರ ಕ್ರಮಿಸಿರುವ ನೌಕೆಯು ಈಗ ನಿರ್ದಿಷ್ಟ ಜಾಡಿನಲ್ಲೇ ಕ್ರಮಿಸುತ್ತಿದೆ. ಆದರೆ ನೌಕೆಯು ಮಂಗಳ ಗ್ರಹವನ್ನು ಸರಿಯಾದ ಸ್ಥಾನದಲ್ಲಿ ಸಂಧಿಸಬೇ­ಕಾದರೆ ಅದರ ಪಥವನ್ನು ನಾಲ್ಕು ಬಾರಿ ಸರಿಪಡಿಸಬೇ­ಕಾಗುತ್ತದೆ.ನೌಕೆಯು ಈಗ ಪ್ರತಿ ಸೆಕೆಂಡಿಗೆ 32.8 ಕಿ.ಮೀ. ವೇಗದಲ್ಲಿ ಮಂಗಳನತ್ತ ಧಾವಿಸುತ್ತಿದ್ದು, ಮೊದಲ ಪಥ ಬದಲಾವಣೆ ಕಸರತ್ತನ್ನು ಡಿ.11ರಂದು ನಡೆಸಲಾಗುವುದು ಎಂದು ಇಸ್ರೊ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)