ಸೋಮವಾರ, ಜನವರಿ 20, 2020
17 °C

ನಾಳೆ ವರ್ಬ್ಯಾಟಲ್ ಫೈನಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ಭಾರತದ ಅತಿದೊಡ್ಡ ಅಂತರರಾಜ್ಯ ಶಾಲಾ ಚರ್ಚಾ ಸ್ಪರ್ಧೆ `ವರ್ಬ್ಯಾಟಲ್ ಸೌತ್~ ಫೈನಲ್ ಇದೇ 25ರಂದು ನಡೆಯಲಿದೆ.ಪುದುಚೇರಿ, ಕೊಚ್ಚಿ, ಹೈದರಾಬಾದ್ ಮತ್ತು ಚೆನ್ನೈನ ಪ್ರಾದೇಶಿಕ ವಲಯಗಳಿಂದ ಆಗಮಿಸಿರುವ 9 ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ.ವರ್ಬ್ಯಾಟಲ್ ಸೌತ್ ಫೈನಲ್‌ನಲ್ಲಿ  ಗೆದ್ದ ತಂಡಕ್ಕೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ವಿಜೇತ ತಂಡವನ್ನು ತರಬೇತಿಗೊಳಿಸಿದ ಶಿಕ್ಷಕರಿಗೆ `ಮೆಂಟರ್~ ಬಹುಮಾನವನ್ನು ನೀಡಲಾಗುವುದು. ಫೈನಲ್ ಸ್ಪರ್ಧೆಯು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿದೆ.ವರ್ಬ್ಯಾಟಲ್‌ನ ವಿವಿಧ ವಿಭಾಗಗಳಲ್ಲಿ ನಡೆದ  ಸ್ಪರ್ಧೆಗಳಲ್ಲಿ ವಿಜೇತರಿಗೆ ಹಲವು ವರ್ಷಗಳಿಂದ ರೂ. 12 ಲಕ್ಷ ಬಹುಮಾನ ನೀಡುತ್ತ ಬಂದಿದೆ. ಪತ್ರಕರ್ತ ದೀಪಕ್ ತಿಮ್ಮಯ್ಯ ಅವರು ಫೈನಲ್ ಸ್ಪರ್ಧೆಗಳ ತೀರ್ಪುಗಾರರಾಗಲಿದ್ದಾರೆ.

 

ಪ್ರತಿಕ್ರಿಯಿಸಿ (+)