ಬುಧವಾರ, ಜನವರಿ 22, 2020
16 °C

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇದೇ 15ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕೆಪಿಟಿಸಿಎಲ್ ವತಿಯಿಂದ 220 ಕೆವಿ ಎಸ್ಆರ್ಎಸ್ನಿಂದ ಹೊರಡುವ 110 ಕೆ.ವಿ ಕಾವೂರು- ಕೆಐಒಸಿಎಲ್ ಲೈನಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ  ಎಂಸಿ­ಎಫ್, ಎಂಆರ್‌ಪಿಎಲ್‌, ಕೆಐಒಸಿಎಲ್‌, ರುಚಿ­ಸೋಯ, ಎನ್ಎಂಪಿಟಿ, ಹೆಚ್‌ಪಿಸಿಎಲ್‌,  ಯುಪಿಸಿಎಲ್, ಬಿಎಎಸ್ಎಫ್, ಬ್ರೈಟ್ ಪ್ಯಾಕೇಜರ್ಸ್, ರಾಜಶ್ರೀ ಪ್ಯಾಕೇಜರ್ಸ್, ಎಸ್ಇಜೆಡ್‌, ಪಣಂಬೂರು ಹಾಗೂ ಬೈಕಂಪಾಡಿ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜುಗೊಳ್ಳುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.17ರಂದು ನಿಲುಗಡೆ: ಇದೇ 17ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ 33 ಕೆವಿ ಕಾವೂರು – ಮಣ್ಣಗುಡ್ಡ ಫೀಡರಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 33/11ಕೆವಿ ಕುದ್ರೋಳಿ ಹಾಗೂ 33/11ಕೆವಿ ಮಣ್ಣಗುಡ್ಡ ಉಪಕೇಂದ್ರಗಳಿಂದ ಹೊರಡುವ ಎಲ್ಲಾ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಹೀಗಾಗಿ- ಕೊಟ್ಟಾರ, ಕೋಡಿಕಲ್, ಉರ್ವಸ್ಟೋರ್, ಅಶೋಕನಗರ, ಹೊೈಗೆಬೈಲ್, ದಂಬೇಲ್, ಉರ್ವ, ಬೋಳೂರು, ಚಿಲಿಂಬಿ, ಮಟದ ಕಣಿ, ಮಣ್ಣಗುಡ್ಡ, ಬೊಕ್ಕಪಟ್ನ, ಹ್ಯಾಟ್‍ಹಿಲ್, ಲೇಡಿಹಿಲ್, ಲಾಲ್‍ಭಾಗ್, ಬಲ್ಲಾಳ್‌ಬಾಗ್, ಎಂ.ಜಿ.ರೋಡ್, ಅಳಕೆ, ಕುದ್ರೋಳಿ, ಕೋಡಿಯಾಲ್ ಬೈಲ್, ಕೊಡಿಯಾಲ್ ಗುತ್ತು ಸುತ್ತಮುತ್ತ ವಿದ್ಯುತ್‌ ನಿಲುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)