ಹೊಸನಗರ: ‘ಸ್ವಾತಂತ್ರ್ಯದ ತಪ್ಪು ಗ್ರಹಿಕೆ, ವಿದೇಶಿ ಸಂಸ್ಕೃತಿಗೆ ತಮ್ಮನ್ನು ಮಾರಿಕೊಂಡ ವಿದ್ಯಾವಂತ ಸ್ತ್ರೀಯರ ಚಿತ್ರಣವೇ ಭೈರಪ್ಪ ಅವರ ‘ಕವಲು’ ಕಾದಂಬರಿಯ ಹೂರಣ’ ಎಂದು ಸಾಹಿತಿ ಕೆ.ಎನ್. ಅಂಜಲಿ ಅಶ್ವಿನ್ಕುಮಾರ್ ಅಭಿಪ್ರಾಯಪಟ್ಟರು. ಈಚೆಗೆ ತಾಲ್ಲೂಕಿನ ನಿಟ್ಟೂರಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾರ್ಗಡಿ ಮಹಾಬಲ ಐತಾಳ್ ನೆನಪಿನ ದತ್ತಿನಿಧಿ ಕಾರ್ಯಕ್ರಮದ ಸರಮಾಲಿಕೆಯಲ್ಲಿ ಉಪನ್ಯಾಸ ನೀಡಿದರು.

ಐಟಿ-ಬಿಟಿ ಯುವತಿಯರು ಸಮಾನತೆಯ ಗುಂಗಿನಲ್ಲಿ ತಮಗೆ ಅರಿವಿಲ್ಲದೇ ಮತ್ತೆ ಪುರುಷ ಪ್ರಧಾನ ಸಮಾಜ ವ್ಯವಸ್ಥೆಗೆ ಜಾರುತ್ತಿರುದನ್ನು ಸಾಹಿತಿ ಎಸ್.ಎಲ್. ಭೈರಪ್ಪ ಬಿಂಬಿಸಿದ್ದಾರೆ ಎಂದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶಾಂತಾರಾಮ ಪ್ರಭು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ದತ್ತಿನಿಧಿ ದಾನಿ ಉಪನ್ಯಾಸಕ ಕಾರಣಗಿರಿ ಗಣೇಶ್ ಐತಾಳ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಹನುಮಂತಪ್ಪ, ವೇದಿಕೆಯಲ್ಲಿ ಹಾಜರಿದ್ದರು. ಪೂರ್ಣಿಮಾ ಪ್ರಾರ್ಥಿಸಿದರು. ಅಂಬರೀಷ್ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಪ್ರಕಾಶ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.