ಗುರುವಾರ , ಮೇ 6, 2021
27 °C

ನಿಧಿಗಾಗಿ ತಗ್ಗು ತೋಡಿ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಂಬಳ: ಸಮೀಪದ ಪೇಠಾಆಲೂರ ಗ್ರಾಮದಲ್ಲಿ ಗ್ರಾ.ಪಂ ಆವರಣದ ಹಿಂದೆ ನಿಧಿ ಪತ್ತೆ ಹಚ್ಚಲು ಐದು ಭಾರಿ ತಗ್ಗು ತೋಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.ಬೆಳಿಗ್ಗೆ ಪಂಚಾಯ್ತಿಗೆ ಬಂದ ಸಾರ್ವಜನಿಕರು ಈ ನಿಧಿ ಶೋಧಿಸಿರುವ ಸ್ಥಳ ನೋಡಿ ಆಶ್ಚರ್ಯಗೊಂಡಿದ್ದಾರೆ. ಪೇಠಾಆಲೂರ ಗ್ರಾಮಸ್ಥರು ತಂಡೋಪ-ತಂಡವಾಗಿ ನಿಧಿ ಶೋಧನ ಸ್ಥಳವನ್ನು  ವೀಕ್ಷಣೆ ಮಾಡುತ್ತಿದ್ದಾರೆ.ಪೇಠಾಆಲೂರಲ್ಲಿ ಈ ನಿಧಿ ಶೋಧಿ ಸಲು 5 ಆಳದ ತಗ್ಗು ತೋಡಿದ್ದು, ನಿಧಿ ಅಥವಾ ಬಂಗಾರಗಳ ಹಂಡೆ ಸಿಕ್ಕಿರ ಬಹುದು ಎಂದು ಜನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರ ಸಹಕಾರದಿಂದಲೇ ಕೃತ್ಯ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.  ತಾಲ್ಲೂಕಿ ನಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಡಂಬಳ, ಜಂತ್ಲಿ-ಶಿರೂರ, ಕಪ್ಪತ್ತ ಗುಡ್ಡ, ಕೊರ್ಲಹಳ್ಳಿ ಬಳಿಯ ರಾಟಿ ಹನುಮಂತಪ್ಪ ದೇವಸ್ಥಾನ ಬಳಿ ಈಚೆಗೆ ನಿಧಿ ಶೋಧಿಸುವ ಘಟನೆಗಳು ನಡೆಯುತ್ತಲೇ ಇವೆ. ನಿಧಿ ಶೋಧಿಸುವ ನೆಪದಲ್ಲಿ ಪುರಾತನ ಹಾಗೂ ಐತಿಹಾಸಿಕ ಸ್ಥಳ, ವಿಗ್ರಹ, ಶಿಲ್ಪಗಳಿಗೆ ಧಕ್ಕೆ ಮಾಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸ್ಮಾರಕ ಸಂರಕ್ಷಣೆ ಮಾಡಬೇಕು ಎಂದು ಪೇಠಾಆಲೂರ ಗ್ರಾಮಸ್ಥರು ಒತ್ತಾಯಿ ಸಿದ್ದಾರೆ.`ಡಂಬಳ, ಪೇಠಾಆಲೂರ, ಜಂತ್ಲಿ-ಶಿರೂರ, ಡೋಣಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇವಸ್ಥಾನನ್ನು ಹೊಂದಿದೆ. ಹಾಗಾಗಿ ಆ ದೇವಸ್ಥಾನಗಳ ಅಸ್ತಿತ್ವಕ್ಕೆ ಧಕ್ಕೆ ಬರುವ ಅಪಾಯ ಇದೆ. ಸಂಬಂಧಿಸಿದ ಅಧಿಕಾರಿಗಳು ನಿಧಿ ಶೋಧಿಸುವ ತಂಡಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಶಣಕರ ಗುಡಿ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.