ಗುರುವಾರ , ಮೇ 6, 2021
23 °C

ನಿಮಗೂ ದಂತ ಕಲೆ ಸಮಸ್ಯೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹಳ ಜನರಿಗೆ ಹಲ್ಲು ಹುಳುಕು, ಬಾಯಿ ದುರ್ವಾಸನೆ, ವಸಡಿನ ರೋಗವನ್ನು ಬಿಟ್ಟರೆ ಕಾಡುವ ಮತ್ತೊಂದು ಸಮಸ್ಯೆ ಎಂದರೆ ದಂತ ಕಲೆ.ದಂತ ಕಲೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು:ಬಾಹ್ಯ ಕಲೆಗಳು 

* ಹಳದಿ ಬಣ್ಣದ ಕಲೆ: ಈ ಕಲೆ ಯಾರು ಕ್ರಮಬದ್ಧವಾಗಿ ಹಲ್ಲನ್ನು ಸ್ವಚ್ಛಗೊಳಿಸುವುದಿಲ್ಲವೋ ಅವರಲ್ಲಿ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಸಹಿತವಾದ ತೆಳು ಹಳದಿ ಬಣ್ಣ ಹಲ್ಲುಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಈ ಕಲೆ ಸಾಮಾನ್ಯವಾಗಿ ಎಲ್ಲಾ ವಯೋಮಾನದ ಜನರಲ್ಲಿಯೂ ಉಂಟಾಗುತ್ತದೆ.* ಹಸಿರು ಕಲೆ: ಈ ಕಲೆಯು ಕ್ರೋಮೊಜಿನಿಕ್ ಮತ್ತು ಫಂಗೈ (Chormogenic Bacteria & Fungi)ಎಂಬ ಕೀಟಾಣುಗಳಿಂದ ಉಂಟಾಗುತ್ತದೆ. ಈ ಕಲೆಯನ್ನು ಸಾಮಾನ್ಯವಾಗಿ ಹಾಲು ಹಲ್ಲುಗಳಲ್ಲಿ ಮತ್ತು ಶಾಶ್ವತ ಹಲ್ಲುಗಳಲ್ಲಿ ನೋಡಬಹುದು.* ಕಪ್ಪು ಬಣ್ಣದ ಕಲೆ: ಈ ಕಪ್ಪು ಕಲೆಗಳು ಗ್ರಾಮ್ ಪಾಸಿಟೀವ್‌ರಾಡ್ಸ್(Gram Positive rods) ಎಂಬ ಕೀಟಾಣುಗಳಿಂದ ಉಂಟಾಗುತ್ತದೆ. ಈ ಕಲೆ ಎಲ್ಲಾ ವಯಸ್ಸಿನವರಲ್ಲಿ ಕಾಣಬಹುದು.* ಹೊಗೆಸೊಪ್ಪಿನ ಕಲೆ: ತಂಬಾಕು ದಹನದಿಂದ ಅಥವಾ ತಂಬಾಕು ಸೇವಿಸುವವರಲ್ಲಿ ಉತ್ಪತ್ತಿಯಾದ ಪದಾರ್ಥಗಳು ಹಲ್ಲಿನ ಸಂದುಗಳಲ್ಲಿ ತೂರಿ ಹೋದಾಗ ತೆಳು ಕಂದು ಬಣ್ಣ ಕಲೆ ಉಂಟಾಗುತ್ತದೆ. ಈ ಕಲೆ ಜಾಸ್ತಿ ಧೂಮಪಾನಿಗಳಲ್ಲಿ ಮತ್ತು ತಂಬಾಕು ಸೇವಿಸುವವರಲ್ಲಿ ಕಾಣಬಹುದು.* ಕಂದು ಬಣ್ಣದ ಕಲೆ: ಈ ಕಲೆ ಅತಿಯಾದ ಕಾಫಿ, ಟೀ, ಸೋಯಾಸಾಸ್, ಎಲೆ-ಅಡಿಕೆ ಸೇವಿಸುವವರಲ್ಲಿ ಕಾಣುತ್ತದೆ. ಅಲ್ಲದೇ, ಬಹುಕಾಲ ಬಾಯಿ ಸ್ವಚ್ಛಗೊಳಿಸಲು ಔಷದಿಯನ್ನು ಉಪಯೋಗಿಸಿದಾಗ ಈ ಔಷದಿಯಲ್ಲಿ ಇರುವ ರಾಸಾಯನಿಕ ಅಂಶವಾದ ಕ್ಲೋರ್ ಹೆಕ್ಸಿಡಿನ್‌ನಿಂದಲೂ ಈ ಕಲೆ ಉಂಟಾಗುತ್ತದೆ.* ಕಿತ್ತಳೆ ಮತ್ತು ಕೆಂಪು ಕಲೆ: ಈ ಕಲೆಯು ಕ್ರೋಮಿಜಿನಿಕ್ ಕೀಟಾಣು (Chromogenic Bacteria)  ಗಳಿಂದ ಉಂಟಾಗುತ್ತದೆ.ಆಂತರಿಕ ಕಲೆಗಳು

ರೋಗಗ್ರಸ್ತವಾದ ಹಲ್ಲಿನ ತಿರುಳು: ಹಲ್ಲಿಗೆ ಪೆಟ್ಟು ಬಿದ್ದಾಗ ಅಥವಾ ರೋಗಗ್ರಸ್ತವಾದ ಹಲ್ಲಿನ ತಿರುಳಿನಲ್ಲಿರುವ ರಕ್ತನಾಳಗಳ ಬಿರುಕು ಉಂಟಾಗಿ ತಿರುಳಿನ ಸಾಯುವಿಕೆಯಿಂದ ಹಲ್ಲು ಹಳದಿ ಮಿಶ್ರಿತ ಕಂದು, ಕೆಂಪು ಮಿಶ್ರಿತ ಕಂದು, ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ.* ಟೆಟ್ರಾಸೈಕ್ಲಿನ್ ಕಲೆ: ಟೆಟ್ರಾ ಸೈಕ್ಲಿನ್ ಎಂಬ ಔಷಧಿ (ಮಾತ್ರೆಯನ್ನು) ಕಾಯಿಲೆ ಪೀಡಿತ ತಾಯಿ ಅಥವಾ ಮಗು ಸೇವಿಸಿದಾಗ ಮಗುವಿನ ಹಲ್ಲಿನ ಮೇಲೆ ಈ ಕಲೆ ಉಂಟಾಗುತ್ತದೆ.* ಲೋಹದ ಕಲೆ: ಹುಳುಕು ಹಲ್ಲಿನ ಚಿಕಿತ್ಸೆಯಲ್ಲಿ (ಬೆಳ್ಳಿಯ ಅಳವಡಿಕೆಯ) ಲೋಹದ ಅಂಶವು ಹಲ್ಲಿನ ಎನಾಮನ್ ಮತ್ತು ಡೆಂಟೈನ್‌ನಲ್ಲಿ ತೂರಿ ಹೋದಾಗ ಉಂಟಾಗುವ ಕಲೆಯೇ ಲೋಹದ ಕಲೆ.* ಫ್ಲೋರೋಸಿಸ್ ಕಲೆ: ನಾವು ಉಪಯೋಗಿಸುವ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಖನಿಜ 2 ಪಿ.ಪಿ.ಎಂ. ಗಿಂತ ಹೆಚ್ಚಾಗಿದ್ದರೆ ಉಂಟಾಗುವ ಕಲೆ ಫ್ಲೋರೋಸಿಸ್ ಕಲೆ.* ಎರಿತ್ರೋಬ್ಲಾಸ್ಟೋಸಿಸ್ ಫೀಟಾಲಿಸ್: ಎನಾಮಲ್ ಮತ್ತು ಡೆಂಟೈನ್‌ನಲ್ಲಿ ರಕ್ತದ ಬಣ್ಣ ದ್ರವ್ಯಗಳು ಬೆಳೆಯುವ ಹಲ್ಲುಗಳಲ್ಲಿ ಸೇರಿಕೊಂಡಾಗ ಈ ಕಲೆ ಉಂಟಾಗುತ್ತದೆ.ಈ ಎಲ್ಲಾ ದಂತ ಕಲೆಗಳಿಗೆ ಚಿಕಿತ್ಸೆ ಇದೆ. ಕಲೆಯನ್ನು ಕಡೆಗಣಿಸದೆ ಕೂಡಲೇ ನಿಮ್ಮ ದಂತವೈದ್ಯರನ್ನು  ಕಂಡು ನಿಮ್ಮ ದಂತ ಕಲೆಗೆ ಪರಿಹಾರ ಪಡೆದುಕೊಳ್ಳಿ.

(ಲೇಖಕರ ಮೊಬೈಲ್ ಸಂಖ್ಯೆ 9986288267)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.