ಕೋಲಾರ: ಹಲವು ವರ್ಷಗಳಿಂದ ಮರೆಗೆ ಸರಿದಿದ್ದ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಈಗ ವಿವಾದದಲ್ಲಿದೆ. ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅಧ್ಯಕ್ಷರಾಗಿರುವ ಸ್ಕಾಟ್ಸ್ ಗಾರ್ಮೆಂಟ್ಸ್ ತಾಲ್ಲೂಕಿನ ಸಂಗೊಡಹಳ್ಳಿ ಮತ್ತು ಸುಲ್ತಾನ್ತಿಪ್ಪಸಂದ್ರದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಗಳು ಈ ವಿವಾದದ ಕೇಂದ್ರ ಬಿಂದು.

`ಕಟ್ಟಡ ಕಾಮಗಾರಿಗಳನ್ನು ಶುರು ಮಾಡುವ ಮುನ್ನ ಪೂರ್ವಾನುಮತಿ ಪಡೆಯದಿರುವುದೂ ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘನೆ ಮಾಡಿರುವುದರಿಂದ ಕಟ್ಟಡಗಳನ್ನು ಉರುಳಿಸಬೇಕು~ ಎಂಬ ನಿರ್ಧಾರ ಕೈಗೊಂಡ ಪ್ರಾಧಿಕಾರದ ನಿಲುವಿಗೆ ಹಲವು ರಾಜಕಾರಣಿಗಳಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.

ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವು ಪ್ರಮುಖರು ಪ್ರಾಧಿಕಾರದ ನಿಲುವನ್ನು ಬದಲಿಸುವಂತೆ ಈಗಾಗಲೇ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್ಕುಮಾರ್ ಅವರನ್ನು ಕೋರಿ ಮನವಿ ಸಲ್ಲಿಸಿದ್ದಾರೆ. ಮನವಿ ಹಿನ್ನೆಲೆಯಲ್ಲಿ, ಪ್ರಾಧಿಕಾರದ ನಿರ್ಧಾರ ಜಾರಿಗೆ ಬರದಂತೆ ತಡೆಯಲಾಗಿದೆ. ಸಚಿವ ಸುರೇಶ್ಕುಮಾರ್ ಸ್ಥಳಕ್ಕೆ ಶನಿವಾರ ಭೇಟಿ ನೀಡಲಿದ್ದಾರೆ.

ಏನಿದು ವಿವಾದ?:ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡ ಸ್ಕಾಟ್ಸ್ ಸಂಸ್ಥೆಯೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಜಿಲ್ಲೆಯ 3 ಸಾವಿರ ಮಂದಿಗೆ, ಅದರಲ್ಲೂ ಕೌಶಲ್ಯವಿಲ್ಲದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ನಿರ್ಧಾರವಾಗಿತ್ತು.

ಅದರಂತೆ ನಗರಸಭೆ ವ್ಯಾಪ್ತಿಯಲ್ಲಿರುವ ಸುಲ್ತಾನ್ ತಿಪ್ಪಸಂದ್ರದಲ್ಲಿ ಮತ್ತು ಕೊಂಡರಾಜನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಸಂಗೊಂಡಹಳ್ಳಿಯಲ್ಲಿ ಕಾರ್ಖಾನೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಎರಡೂ ಕಡೆ ಕಾಮಗಾರಿ ಛಾವಣಿ ಹಂತದಲ್ಲಿದೆ.

ಈಗ ವಿವಾದ ಜನ್ಮತಾಳಿದೆ. ಸುಲ್ತಾನ್ತಿಪ್ಪಸಂದ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಶುರು ಮಾಡುವ ಮುಂಚೆಯೇ ಸಂಸ್ಥೆಯು ಪೂರ್ವಾನುಮತಿ, ವಿನ್ಯಾಸದ ಅನುಮೋದನೆ, ಪ್ರಾರಂಭಿಕ ಪ್ರಮಾಣಪತ್ರ ಪಡೆದಿಲ್ಲ. ರೈಲ್ವೆ ಸರಹದ್ದಿನಿಂದ 100 ಅಡಿಗಳ (30 ಮೀ) ಮಾರ್ಜಿನ್ ಬಿಡದೆ ಕೇವಲ 18 ಮೀ ಮಾರ್ಜಿನ್ ಬಿಟ್ಟು ನಿರ್ಮಾಣ ಮಾಡಲಾಗಿದೆ. ವಲಯ ನಿಯಮಾವಳಿಯಂತೆ 12 ಮೀ ಅಗಲದ ರಸ್ತೆ ಸಂಪರ್ಕದ ಬದಲು ಕೇವಲ 9 ಅಡಿ ಮಾತ್ರ ಇದೆ. ವಿನ್ಯಾಸ ಅನುಮೋದನೆಗೆ ಜು 4ರಂದು ಅರ್ಜಿ ಸಲ್ಲಿಸಿರುವ ಸಂಸ್ಥೆಯು ಅದಕ್ಕಿಂತ ಮೊದಲೇ ಕಾಮಗಾರಿ ಆರಂಭಿಸಿದೆ. ಹೀಗಾಗಿ ವಿನ್ಯಾಸ ನಕ್ಷೆ ನೀಡಲು ಸಾಧ್ಯವಿಲ್ಲ ಎಂದು ಆ.16ರಂದು ಪ್ರಾಧಿಕಾರದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಅದೇ ರೀತಿ, ಸಂಗೊಂಡಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಯಲ್ಲೂ ನಿಯಮ ಉಲ್ಲಂಘಿಸಿರುವ ಕುರಿತು ಚರ್ಚೆ ನಡೆದು, ವಿನ್ಯಾಸ ಅನುಮೋದನೆ, ಪ್ರಾರಂಭಿಕ ಪ್ರಮಾಣಪತ್ರ ನೀಡಲು ಅಸಾಧ್ಯವೆಂದು ನಿರ್ಧರಿಸಲಾಗಿತ್ತು. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದು, ಕಾಮಗಾರಿಗಳನ್ನು ಸಕ್ರಮಗೊಳಿಸುವ ದಾರಿ ಕುರಿತು ಪರಿಶೀಲಿಸುವುದು, ಒತ್ತುವರಿ ತೆರವುಗೊಳಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿದೆ. ಸುಲ್ತಾನ್ಪಾಳ್ಯದಲ್ಲಿನ ಕಾಮಗಾರಿ ಅನುಮೋದನೆಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂಬುದು ಸಂಸ್ಥೆಯ ಪ್ರತಿನಿಧಿಗಳ ಆಕ್ಷೇಪ. ಅದಕ್ಕೆ ಹಲವು ರಾಜಕೀಯ ಮುಖಂಡರ ಬೆಂಬಲವೂ ದೊರಕಿದೆ.

`ನಿಯಮ ಮೀರಿರುವುದರಿಂದ ಕಟ್ಟಡವನ್ನು ಕೆಡವಲೇಬೇಕು~ ಎಂಬುದು ಪ್ರಾಧಿಕಾರದ ಅಧ್ಯಕ್ಷ ಶ್ರೀರಾಂ ಅವರ ನಿರ್ಧಾರ. ಆದರೆ ಆ ನಿರ್ಧಾರಕ್ಕೆ ಈಗ ವಿರೋಧ ವ್ಯಕ್ತವಾಗಿದೆ. ಇದೇ ವೇಳೆ, ಕಟ್ಟಡ ನಸೀರ್ ಅಹ್ಮದ್ ಅವರಿಗೆ ಸೇರಿದೆ ಎಂಬ ಕಾರಣದಿಂದ, ನಿಯಮ ಉಲ್ಲಂಘನೆಯಾಗಿದ್ದರೂ ಕಟ್ಟಡ ಕಾಮಗಾರಿಗಳನ್ನು ಉಳಿಸಲು ಜೆಡಿಎಸ್, ಕಾಂಗ್ರೆಸ್ ಮುಖಂಡರು ವಕಾಲತ್ತು ವಹಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.

ಈ ಹಂತದಲ್ಲಿ ಪ್ರಕರಣ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರವರೆಗೂ ಹೋಗಿದೆ. ಕಾನೂನು ಸಚಿವರ ಭೇಟಿಯೇ ಕಟ್ಟಡ ಕಾಮಗಾರಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

ನಿರ್ಧಾರದಲ್ಲಿ ಬದಲಿಲ್ಲ: ಶ್ರೀರಾಂ
ಕೋಲಾರ: `ನಿಯಮ ಉಲ್ಲಂಘಿಸಿರುವುದರಿಂದ ಕಟ್ಟಡ ಕೆಡವಬೇಕು ಎಂಬ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ~ ಎಂಬುದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎನ್.ಶ್ರೀರಾಂ ಅವರ ಸ್ಪಷ್ಟ ನುಡಿ.
`ಪ್ರಜಾವಾಣಿ~ಯೊಡನೆ ಗುರುವಾರ ಮಾತನಾಡಿದ ಅವರು, `ನನ್ನ ನಿರ್ಧಾರ ಬದಲಿಸುವುದಿಲ್ಲ. ಸಚಿವರು ಸಮೀಕ್ಷೆ ನಡೆಸಲಿ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು~ ಎಂದರು.

`ರೈಲ್ವೆ ಇಲಾಖೆಗೆ ಸಂಬಂಧಿಸಿದ ಭೂಮಿಯನ್ನು ಕಟ್ಟಡಕ್ಕಾಗಿ ಕಬಳಿಸಲಾಗಿದೆ. ನಿಯಮಗಳ ಪ್ರಕಾರ ನಿರ್ಮಿಸಿಲ್ಲ. ಇಡೀ ಕಟ್ಟಡ ಅನಧಿಕೃತ ನಿರ್ಮಾಣವಾಗಿದೆ. ಕಟ್ಟಡ ರಕ್ಷಣೆಗಾಗಿ ನಿಂತಿರುವ ಮುಖಂಡರು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮೊದಲು ಹೋರಾಟ ಮಾಡಲಿ. ಅದು ಬಿಟ್ಟು ಭೂಮಿ ಒತ್ತುವರಿ ಮಾಡಿಕೊಂಡವರ ಬೆಂಬಲಕ್ಕೆ ನಿಲ್ಲುವುದು ಸರಿಯಲ್ಲ~ ಎಂದರು.

`ನಿಯಮ ಉಲ್ಲಂಘನೆ ಬಗ್ಗೆ ಮಾತನಾಡಬೇಕಿದ್ದ ಮುಖಂಡರು, ಕಟ್ಟಡ ಕೆಡವಿದರೆ ಕೋಮು ಸಾಮರಸ್ಯ ಕೆಡುತ್ತದೆ ಎಂದು ಹೇಳುತ್ತಿರುವುದೂ ಸರಿಯಲ್ಲ. ಕಾನೂನು ಸಚಿವರಿಗೆ ಉತ್ತಮ ಹೆಸರಿದೆ. ಅವರು ನಿಯಮ ಮೀರಿ ಕೆಲಸ ಮಾಡುವುದನ್ನು ಇಷ್ಟಪಡುವುದಿಲ್ಲ. ನನ್ನ ನಿಲುವಿಗೆ ಅವರ ಬೆಂಬಲ ದೊರಕುತ್ತದೆ ಎಂಬ ವಿಶ್ವಾಸವಿದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.