ಪಾಂಡವಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಸರ್ಕಾರಿ ನಿಯಮ ಉಲ್ಲಂಘಿಸಿ ಅರ್ಹತೆ ಇಲ್ಲದರನ್ನು ಅತಿಥಿ ಉಪನ್ಯಾಸಕಿ ಆಯ್ಕೆಮಾಡಲಾಗಿದೆ ಎಂದು ಹುದ್ದೆಯ ಆಕಾಂಕ್ಷಿಯಾಗಿದ್ದ ಆರ್. ರಾಧ ಎಂಬುವರು ಆರೋಪಿಸಿದ್ದಾರೆ.

2011- 12ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿ ತಾವು 9 ಅಂಕಗಳನ್ನು ಪಡೆದಿದ್ದರೂ 5 ಅಂಕಗಳನ್ನು ಪಡೆದಿರುವ ಅಭ್ಯರ್ಥಿ ಜಿ.ಎಲ್.ಪವಿತ್ರ ಅವರನ್ನು ಆಯ್ಕೆ ಮಾಡಲಾಗಿದೆ. ಸರ್ಕಾರ ಅತಿಥಿ ಉಪನ್ಯಾಸಕರ ನೇಮಕ ಆಧಿಕಾರ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ವಹಿಸಿದೆ. ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಪ್ರಾಂಶುಪಾಲರು, ವಿಷಯಗಳ ಮುಖ್ಯಸ್ಥರು ಹಾಗೂ ಕಾಲೇಜಿನ ಅಧೀಕ್ಷರು ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.

ಎಸ್ಎಲ್ಇಟಿ/ಎನ್ಇಟಿ/ಯುಜಿಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಮತ್ತು ಎಂ.ಫಿಲ್/ಪಿಎಚ್ಡಿ ಪದವಿ ಪಡೆದವರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಸ್ನಾತಕೋತ್ತರ ಅರ್ಹತಾ ಪದವಿಯಲ್ಲಿ ಪಡೆದ ಅಂಕಗಳ ಆಧಾರ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಸಲ್ಲಿಸಿದ ಸೇವೆಯನ್ನು ಆಧರಿಸಿ ಆಯ್ಕೆ ಮಾಡಬೇಕಾ ಗಿರುತ್ತದೆ.

ಸರ್ಕಾರ ಮತ್ತು ವಿಶ್ವವಿದ್ಯಾನಿಲಯ ಸೂಚಿಸಿರುವಂತೆ ಮಾನದಂಡಗಳನ್ನು ಇಟ್ಟುಕೊಂಡೇ ಆಯ್ಕೆ ಸಮಿತಿ 2 ಹುದ್ದೆಗಳ ರಾಜ್ಯಶಾಸ್ತ್ರ ವಿಷಯಕ್ಕೆ ಅರ್ಜಿ ಸಲ್ಲಿಸಿದ್ದ 7 ಅಭ್ಯರ್ಥಿಗಳಲ್ಲಿ 3 ಅಭ್ಯರ್ಥಿಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು 2ಎ ವರ್ಗದ ಅಭ್ಯರ್ಥಿ ಆರ್.ರಾಧಾಳಿಗೆ 9 ಅಂಕಗಳು, 3ಎ ವರ್ಗದ ಕೆ.ಸಿ. ಪುಟ್ಟರಾಮೇಗೌಡನಿಗೆ 5 ಅಂಕಗಳು ಹಾಗೂ ಜಿ.ಎಲ್. ಪವಿತ್ರಳಿಗೆ 4 ಅಂಕಗಳನ್ನು ನೀಡಲಾಗಿದೆ. ಈ ಪ್ರಕಾರ ತಮ್ಮ (ಆರ್. ರಾಧ) ಮತ್ತು ಕೆ.ಸಿ. ಪುಟ್ಟರಾಮೇಗೌಡ ಆಯ್ಕೆ ನಡೆಯಬೇಕಿತ್ತು ಎಂದು ಅವರು ತಿಳಿಸಿದ್ದಾರೆ.

ಆಯ್ಕೆ ಸಂದರ್ಭದಲ್ಲಿ 9 ಅಂಕ ಪಡೆದ ಆರ್. ರಾಧರವರನ್ನು ಕೈ ಬಿಡಲಾಗಿದೆ, 5 ಅಂಕ ಪಡೆದ ಕೆ.ಸಿ. ಪುಟ್ಟರಾಮೇಗೌಡ ಅರವರನ್ನು ಆಯ್ಕೆ ಮಾಡಲಾಗಿದೆ ಹಾಗೂ ಜಿ.ಎಲ್.ಪವಿತ್ರರವರನ್ನು ಶಾಸಕರ ಒತ್ತಡಕ್ಕೆ ಮಣಿದು ಆಯ್ಕೆ ಮಾಡಲಾಗಿದೆ ಎಂದು ದೂರಿದ್ದಾರೆ.

`ಅರ್ಜಿ ಸಲ್ಲಿಸಿದ್ದ ಬೇರೆ ಅಭ್ಯರ್ಥಿಗಳಿಗಿಂತ ನನ್ನಲ್ಲಿ ಎಲ್ಲ ಅರ್ಹತೆಗಳಿದ್ದರೂ ರಾಜಕಾರಣಿಗಳ ಹಸ್ತಕ್ಷೇಪ ದಿಂದ ಉಪನ್ಯಾಸಕರ ಹುದ್ದೆ ದೊರೆಯಲಿಲ್ಲ ` ಎಂದು ಅಭ್ಯರ್ಥಿ ಆರ್.ರಾಧ `ಪ್ರಜಾವಾಣಿ~ಗೆ ಅಳಲು ತೋಡಿಕೊಂಡರು.

`ಸರ್ಕಾರದ ಆದೇಶದಂತೆ ಆಯ್ಕೆ ಸಮಿತಿಯಲ್ಲಿ ಅಭ್ಯರ್ಥಿಗಳ ಅರ್ಹತೆಯನ್ನು ಆಧರಿಸಿ ಅಂಕಗಳನ್ನು ನೀಡಿದ್ದೇವೆ. ಆದರೆ ಶಾಸಕರ ಆದೇಶಕ್ಕೆ ಗೌರವ ನೀಡುವ ಪರಿಸ್ಥಿತಿ ಒದಗಿಬಂದುದ್ದಕ್ಕೆ ವಿಷಾದಿಸುತ್ತೇನೆ `ಎನ್ನುತ್ತಾರೆ ಪ್ರಾಂಶುಪಾಲ ಪೊ.ಸಿದ್ದರಾಮು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.