ಬಡತನವನ್ನೇ ಉಂಡು, ಹೊದ್ದು ಮಲಗುವ ಉತ್ತರ ಕರ್ನಾಟಕ ಭಾಗದ ಜನ ಮಾತ್ರವಲ್ಲದೆ, ಉತ್ತರ ಭಾರತದಿಂದ ಬಂದು ಇಲ್ಲಿ ನೆಲೆಯೂರಿರುವ ಬಲ್ಲಿದರೂ ಪ್ರತಿ ವರ್ಷ ರೈಲ್ವೆ ಬಜೆಟ್ ಮಂಡನೆ ವೇಳೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ.

ಬಡವರಿಗೆ ಬಸ್ ಪ್ರಯಾಣ ದರಕ್ಕಿಂತ ರೈಲು ಪ್ರಯಾಣ ದರ ತೀರಾ ಕಡಿಮೆ ಎನ್ನುವ ತೃಪ್ತಿಯಾದರೆ, ಬಲ್ಲಿದರಿಗೆ ದೂರದ ಪ್ರಯಾಣಕ್ಕೆ ರೈಲ್ವೆಯಷ್ಟು ಉತ್ತಮ ಸಾರಿಗೆ ಬೇರಿಲ್ಲ ಎಂಬ ಅಚಲ ನಂಬಿಕೆ. ಇದಕ್ಕಾಗಿಯೇ ನಮ್ಮ ಭಾಗದಲ್ಲಿ ಎಲ್ಲಿಂದ ಎಲ್ಲಿಗೆ ಹೊಸ ರೈಲುಗಳ ಸಂಚಾರ ಆರಂಭವಾಗಲಿದೆ, ಯಾವ್ಯಾವ ಹೊಸ ಮಾರ್ಗಗಳನ್ನು ಇಲಾಖೆ ಕೈಗೆತ್ತಿಕೊಳ್ಳಲಿದೆ, ಏನು ಅನುಕೂಲ ದೊರೆಯುತ್ತದೆ ಎಂದು ಬಜೆಟ್ಗಾಗಿ ಅವರೆಲ್ಲ ಕಾತರದಿಂದ ಕಾದಿರುತ್ತಾರೆ.

ಬಜೆಟ್ನಲ್ಲಿ ರಾಜ್ಯಕ್ಕೆ ದೊರೆಯುವ ಅನುದಾನದ ಪ್ರಮಾಣ ನೋಡಿದರೆ ಇಲ್ಲಿಗೆ ಮಂಜೂರಾಗಿರುವ ಯೋಜನೆಗಳು ಪೂರ್ಣಗೊಳ್ಳಲು ಇನ್ನೂ 50 ವರ್ಷವಾದರೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಈ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹೆಚ್ಚು ಹಣ ಬಿಡುಗಡೆಗೆ ಸಂಬಂಧಪಟ್ಟವರ ಮೇಲೆ ಒತ್ತಡ ಹೇರಬೇಕಾದ ರಾಜ್ಯದ ಸಂಸದರು ಒಕ್ಕೊರಲಿನಿಂದ ಒತ್ತಾಯಿಸದ ಕಾರಣ ಕರ್ನಾಟಕದ ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ನೂರಾರು ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಗೂ ರೈಲ್ವೆ ಇಲಾಖೆ ಕೊಡುವುದು ಒಂದೋ ಎರಡೋ ಕೋಟಿ ರೂಪಾಯಿ ಮಾತ್ರ. ಈ ರೀತಿ ಹಣ ಮಂಜೂರಾದರೆ ಯೋಜನೆಗಳು ಪೂರ್ಣಗೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಲ್ಲಿ ಉತ್ತರವಿಲ್ಲ. ರಾಜ್ಯದ ನಾನಾ ಹೊಸ ಮಾರ್ಗ ನಿರ್ಮಾಣ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ.

ಇದಕ್ಕೆ ಉದಾಹರಣೆ ಎಂದರೆ ಕೊಟ್ಟೂರು-ಹರಿಹರ, ಹುಬ್ಬಳ್ಳಿ-ಅಂಕೋಲಾ, ಬಾಗಲಕೋಟೆ-ಕುಡಚಿ, ಮುನಿರಾಬಾದ್-ಮೆಹಬೂಬ್ನಗರ, ಗುಲ್ಬರ್ಗ-ಬೀದರ್, ಗದ್ವಾಲ-ರಾಯಚೂರು,ಸೊಲ್ಲಾಪುರ-ಹೊಟಗಿ.

1997-98ನೇ ಸಾಲಿನಲ್ಲಿಯೇ ಮಂಜೂರಾತಿ ದೊರೆತಿರುವ ಹುಬ್ಬಳ್ಳಿ-ಅಂಕೋಲಾ ಮಾರ್ಗಕ್ಕೆ ಇನ್ನೂ ಬಾಲಗ್ರಹದ ಬಾಧೆ ಬಿಟ್ಟಿಲ್ಲ. 997.58 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ 34 ಕಿ.ಮೀವರೆಗಿನ ಕಾಮಗಾರಿಯೂ ಮುಗಿದಿದೆ. ಆದರೆ ಇದಕ್ಕಿನ್ನೂ ಪರಿಸರ ಇಲಾಖೆಯ ಮಂಜೂರಾತಿ ಸಿಕ್ಕಿಲ್ಲ. ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್ ನೇಮಿಸಿರುವ ಸಿಇಸಿ ಅಧ್ಯಯನ ನಡೆಸಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆ ಬಹಳ ಮಹತ್ವದ್ದು. ಉತ್ತರ ಒಳನಾಡು ಮತ್ತು ಕರಾವಳಿಗೆ ಸಂಪರ್ಕ ಕಲ್ಪಿಸಲು ಅನಿವಾರ್ಯವಾದ ಯೋಜನೆ ಇದು. ಯೋಜನೆ ಅನುಷ್ಠಾನದಿಂದ ಈ ಭಾಗದಲ್ಲಿ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಅನುಕೂಲ. ಆದರೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕೂಡ ಅಷ್ಟಾಗಿ ಮುತುವರ್ಜಿ ವಹಿಸಲಿಲ್ಲ ಎಂಬ ಮಾತುಗಳು ಕೇಳಿಬರುತ್ತವೆ. ಈ ಯೋಜನೆಯ ಅನುಷ್ಠಾನಕ್ಕೆ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಪ್ರಯತ್ನಪಡುತ್ತಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ಯೋಜನೆಗೆ ಇಲಾಖೆ 2012 ಜನವರಿವರೆಗೆ ಒಟ್ಟು 69.18 ಕೋಟಿ ರೂ. ವಿನಿಯೋಗಿಸಿದೆ. ಹುಬ್ಬಳ್ಳಿಯಿಂದ ಕಿರುವತ್ತಿವರೆಗೆ ಕಾಮಗಾರಿ ನಡೆದಿದೆ. ಅಲ್ಲಿಂದ ಮುಂದಕ್ಕೆ ಭೂಸ್ವಾಧೀನವಾಗಿಲ್ಲ.

ಇನ್ನೊಂದು ಪ್ರಮುಖ ಮಾರ್ಗ ಕೊಟ್ಟೂರು-ಹರಿಹರ. 1995-96ರಲ್ಲಿ ಮಂಜೂರಾದ ಈ ಯೋಜನೆಯ ಶೇ 95ರಷ್ಟು ಕಾಮಗಾರಿ ಮುಗಿದಿದೆ. ಉಳಿದಿರುವ ಕಾಮಗಾರಿಯನ್ನು ಇಲಾಖೆ ತ್ವರಿತವಾಗಿ ಪೂರ್ಣಗೊಳಿಸಿ, ರೈಲುಗಳ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಲು ಬಳ್ಳಾರಿ ಸಂಸದೆ ಜೆ.ಶಾಂತಾ ನೇತೃತ್ವದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳೂ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದರು.

2010-11ರಲ್ಲಿ ಮಂಜೂರಾದ ಬಾಗಲಕೋಟೆ-ಕುಡಚಿ ನಡುವಿನ 142 ಕಿ.ಮೀ ಮಾರ್ಗ ನಿರ್ಮಾಣಕ್ಕೆ 816.14 ಕೋಟಿ ರೂಪಾಯಿ ವೆಚ್ಚವಾಗಲಿದೆ. ಮಂಜೂರಾತಿ ಸಿಕ್ಕಿ ವರ್ಷ ಕಳೆದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಅದೇ ರೀತಿ ಮುನಿರಾಬಾದ್-ಮೆಹಬೂಬ್ನಗರ ನಡುವಿನ 246 ಕಿ.ಮೀ (ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಗೆ 165 ಕಿ.ಮೀ) ಯೋಜನೆಗೆ 2007-08ರಲ್ಲಿ ಮಂಜೂರಾತಿ ದೊರೆತಿದ್ದು ಶೇ 5 ರಷ್ಟು ಕಾಮಗಾರಿ ಆಗಿದೆ.

ಇದಲ್ಲದೇ ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಗದಗ-ಹಾವೇರಿ, ತಾಳಗುಪ್ಪ-ಹೊನ್ನಾವರ, ವಿಜಾಪುರ-ಶಹಾಬಾದ್, ಧಾರವಾಡ-ಕಿತ್ತೂರು-ಬೆಳಗಾವಿ, ತುಮಕೂರು-ದಾವಣಗೆರೆ, ಗದಗ-ವಾಡಿ, ಆಲಮಟ್ಟಿ-ಯಾದಗಿರಿ (ಮುದ್ದೇಬಿಹಾಳ ಮಾರ್ಗ), ಆಲಮಟ್ಟಿ-ಕೊಪ್ಪಳ (ಕೂಡಲಸಂಗಮ ಮಾರ್ಗ), ವಿಜಾಪುರ-ಅಥಣಿ-ಷೆಡ್ವಾಲ್, ಬೆಳಗಾವಿ-ಬಾಗಲಕೋಟೆ-ರಾಯಚೂರು ಮಾರ್ಗಗಳಿಗೆ ಈ ಬಾರಿ ಮಂಜೂರಾತಿ ಸಿಗಬಹುದು ಎಂಬ ನಿರೀಕ್ಷೆ ಈ ಭಾಗದ ಜನತೆಯದ್ದಾಗಿದೆ. ಜತೆಗೆ ಸರಕು ಸಾಗಣೆಗೆ ಪ್ರತ್ಯೇಕ ಮಾರ್ಗ ನಿರ್ಮಾಣದ ಅಗತ್ಯವೂ ಇದೆ.

ಜೋಡಿ ಮಾರ್ಗ ನಿರ್ಮಾಣ ಕಾಮಗಾರಿಗೂ ಅಷ್ಟಾಗಿ ಆದ್ಯತೆ ಸಿಕ್ಕಿಲ್ಲ. ಹುಬ್ಬಳ್ಳಿ-ಲೋಂಡಾ-ವಾಸ್ಕೊ ನಡುವಿನ 352 ಕಿ.ಮೀ ಜೋಡಿ ಮಾರ್ಗ ನಿರ್ಮಾಣಕ್ಕೆ 2010-11ರಲ್ಲಿ ಮಂಜೂರಾತಿ ದೊರೆತಿದೆ. ಜನವರಿ 2012ರವರೆಗೆ ಅಂದರೆ ಎರಡು ವರ್ಷದ ಅವಧಿಯಲ್ಲಿ 42.57 ಕೋಟಿ ಮಾತ್ರ ವೆಚ್ಚವಾಗಿದೆ.

ಇದು ಯೋಜನೆ ಅನುಷ್ಠಾನದಲ್ಲಿನ ವಿಳಂಬಕ್ಕೆ ಕೈಗನ್ನಡಿ. ಹುಬ್ಬಳ್ಳಿ-ಮುಂಬೈ, ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ-ಗುಲ್ಬರ್ಗ ಮಧ್ಯೆ ನಿತ್ಯ ಸೂಪರ್ ಫಾಸ್ಟ್ ರೈಲುಗಳನ್ನು ಓಡಿಸಬೇಕು. ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲನ್ನು ಈಗಿರುವ ವಾರಕ್ಕೆ ಎರಡು ದಿನಗಳ ಬದಲಿಗೆ ನಿತ್ಯವೂ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೂಲಕವೇ ಓಡಿಸಬೇಕು ಎಂಬ ಬೇಡಿಕೆಗಳು ಪ್ರಮುಖವಾಗಿವೆ. ಗುಲ್ಬರ್ಗ ಹೊಸ ವಿಭಾಗ ರಚನೆ ಬೇಡಿಕೆ ಈ ಬಾರಿ ಈಡೇರಬಹುದು ಎಂಬ ಆಶಾಭಾವನೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.