ನಿರ್ಮಾಣ ಹಂತದ ಸೇತುವೆ ಸ್ಥಳಕ್ಕೆ ಭೇಟಿ: ವಿವಾದದಲ್ಲಿ ಕಾಂಗ್ರೆಸ್

7

ನಿರ್ಮಾಣ ಹಂತದ ಸೇತುವೆ ಸ್ಥಳಕ್ಕೆ ಭೇಟಿ: ವಿವಾದದಲ್ಲಿ ಕಾಂಗ್ರೆಸ್

Published:
Updated:

ಲಖನೌ (ಪಿಟಿಐ): ಬಾಂದಾ ಜಿಲ್ಲೆಯ ಕಾರಿಯಾ ಕಾಲುವೆ ಮೇಲೆ ನಿರ್ಮಾಣ ಹಂತದ ಸೇತುವೆಯನ್ನು ವೀಕ್ಷಿಸಿದ್ದಕ್ಕಾಗಿ ಇದೀಗ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಉತ್ತರ ಪ್ರದೇಶ ಲೋಕೋಪಯೋಗಿ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಈ ನಾಯಕರು ಸ್ಥಳದಿಂದ ತೆರಳಿದ ಸಂದರ್ಭದಲ್ಲಿ ಸೇತುವೆಯ ಕಾಂಕ್ರೀಟ್ ಹಲಗೆ ಕುಸಿದಿರುವುದು ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ರೀಟಾ ಬಹುಗುಣ ಜೋಶಿ, ಶಾಸಕ ವಿವೇಕ್ ಸಿಂಗ್ ಅವರ ಪಾತ್ರವನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಇಲಾಖೆ ಹೇಳಿದೆ.`ಇದೇ 12ರಂದು ನಡೆದ ಈ ಘಟನೆಯಲ್ಲಿ ಕೆಲ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಸೇತುವೆಯ ಆಧಾರಸ್ತಂಭವನ್ನು ತೆಗೆದುಹಾಕಿದ್ದಾರೆ. ರಾಹುಲ್ ಅವರ ಜೊತೆ ಈ ಮುಖಂಡರು ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ದೃಶ್ಯವನ್ನು ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ಭೇಟಿ ಸಂದರ್ಭದಲ್ಲಿ ಪಕ್ಷದ ಸಹೋದ್ಯೋಗಿಗಳು ರಾಹುಲ್ ಅವರ ಭದ್ರತೆಯನ್ನು ಸಹ ಕಡೆಗಣಿಸಿದ್ದು ಯಾಕೆ ಎಂಬ ಪ್ರಶ್ನೆ ಎದುರಾಗುತ್ತದೆ~ ಎಂದು ಇಲಾಖೆಯ ವಕ್ತಾರರು ಹೇಳಿದ್ದಾರೆ.ಈ ಆರೋಪವನ್ನು ಅಲ್ಲಗಳೆದಿರುವ ವಿವೇಕ್ ಸಿಂಗ್, ಸಾರ್ವಜನಿಕರ ಹಣದೊಂದಿಗೆ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸುವುದು ಜನಪ್ರತಿನಿಧಿಗಳ ಹಕ್ಕು ಎಂದು ಸಮರ್ಥಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry