ಹಾಸನ: ಕೆಲವು ವರ್ಷಗಳ ಹಿಂದೆ ನಗರದ ಮಹಾರಾಜ ಪಾರ್ಕ್ನಲ್ಲಿದ್ದ ಜಿಂಕೆ ಮೊದಲಾದ ಕೆಲವು ಪಕ್ಷಿ ಹಾಗೂ ಪ್ರಾಣಿಗಳನ್ನು ಗೆಂಡೆಕಟ್ಟೆ ಅರಣ್ಯಕ್ಕೆ ಸ್ಥಳಾಂತರಿಸಲಾಯಿತು. ಪಾರ್ಕ್ನಲ್ಲಿ ಜಾಗದ ಕೊರತೆ, ಶುಚಿತ್ವ ಕಾಪಾಡುವಲ್ಲಿ ಆಗುತ್ತಿದ್ದ ಸಮಸ್ಯೆ...

ಹೀಗೆ ಹಲವು ಕಾರಣಗಳಿಂದ ಇವುಗಳನ್ನು ಸ್ಥಳಾಂತರಿಸಲಾಗಿತ್ತು. ಆ ಪ್ರಾಣಿಗಳು ಹೋದ ನಂತರ ಪಾರ್ಕ್ನ ಪ್ರಮುಖ ಆಕರ್ಷಣೆ ಕಳೆದುಕೊಂಡಂತಾಗಿದೆ. ನಗರದ ಹೃದಯಭಾಗದಲ್ಲಿರುವ ಈ ಪಾರ್ಕ್ನಲ್ಲಿ ಈಗ ಮಕ್ಕಳಿಗೆ ಆಟವಾಡಲು ಒಂದಿಷ್ಟು ಆಟಿಕೆಗಳು, ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಒಂದು ಮತ್ಸ್ಯಾಲಯ ಉಳಿದುಕೊಂಡಿವೆ. ಆದರೆ, ನಿರ್ವಹಣೆಯ ಕೊರತೆಯಿಂದ ಮತ್ಸ್ಯಾಲಯವೂ ಈಗ ಅದರ ಅಂದ, ಮಹತ್ವವನ್ನು ಕಳೆದುಕೊಳ್ಳುತ್ತಿದೆ.

ಮತ್ಸ್ಯಾಲಯಕ್ಕೆ ಪ್ರತಿದಿನ ಸುಮಾರು 70 ರಿಂದ 100 ಜನರು ಬರುತ್ತಾರೆ. ಯುವಕರು, ಮಕ್ಕಳ ಸಂಖ್ಯೆ ಹೆಚ್ಚು. ಆದರೆ, ಇದರ ನಿರ್ವಹಣೆಗೆ ಇರುವುದು ಒಬ್ಬ ಮಹಿಳೆ ಮಾತ್ರ. ಅವರೆ ಹೊರಗೆ ಕೌಂಟರ್ನಲ್ಲಿ ಟಿಕೆಟ್ ಕೊಡಬೇಕು, ಮತ್ಸ್ಯಾಲಯದ ಒಳಗಡೆ ಶುಚಿತ್ವವನ್ನು ಅವರೇ ಮಾಡಬೇಕು. ಹೊರಭಾಗದಲ್ಲಿ ಬಿದ್ದ ಕಸಕಡ್ಡಿಗಳನ್ನು ಆ ಮಹಿಳೆಯೇ ಎತ್ತಿ ಸ್ವಚ್ಛಗೊಳಿಸಬೇಕು.

ಆಗಾಗ ಮೀನುಗಳಿಗೆ ಆಹಾರ ಕೊಡುವುದು, ಹೊರಭಾಗದಲ್ಲಿರುವ ಗಿಡಗಳಿಗೆ ನೀರು ಹಾಕಿ ಅದನ್ನು ನೋಡಿಕೊಳ್ಳುವುದು ಎಲ್ಲ ಕೆಲಸವನ್ನೂ ಅವರೇ ಮಾಡಬೇಕು. ಸಂಬಂಧಪಟ್ಟ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇರುವುದರಿಂದ ಈ ಮತ್ಸ್ಯಾಲಯದ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಸಮಯ ಯಾರಿಗೂ ಇಲ್ಲದಂತಾಗಿದೆ.

‘ಸಭ್ಯರು, ಆಸಕ್ತಿಯಿಂದ ಬರುವ ಮಕ್ಕಳನ್ನು ಯಾವುದೇ ತೊಂದರೆ ಇಲ್ಲದೆ ಬಿಡಬಹುದು. ಆದರೆ, ಕೆಲವು ಯುವಕರನ್ನು ಮತ್ಸ್ಯಾಲಯದ ಒಳಗೆ ಬಿಡುವಾಗ ನಾವೂ ಹೋಗಲೇಬೇಕಾಗುತ್ತದೆ. ಇಟ್ಟಿರುವ ತೊಟ್ಟಿಯನ್ನೇ ತಳ್ಳಿ ಅಕ್ವೇರಿಯಂ ಒಳಗೆ ಕೈ ಹಾಕಿ ಮೀನು ತೆಗೆಯಲು ಶ್ರಮಿಸುವವರು ಇದ್ದಾರೆ. ಸ್ವಲ್ಪ ಯಾಮಾರಿದ್ರೂ ಸಮಸ್ಯೆಯಾಗುತ್ತದೆ’ ಎಂದು ಅಲ್ಲಿದ್ದ ಮಹಿಳೆ ನುಡಿಯುತ್ತಾರೆ.

ಕೆಲವೊಮ್ಮೆ ನಾನು ಬೇರೆ ಯಾವುದಾದರೂ ಕೆಲಸದಲ್ಲಿದ್ದರೆ ಜನರು ಟಿಕೆಟ್ ಪಡೆಯದೆಯೇ ಒಗಡೆ ಹೋಗುತ್ತಾರೆ. ಅನಂತರ ಕೇಳಿದರೆ ಕೆಲವರು ಹಣ ಕೊಡುತ್ತಾರೆ, ಇನ್ನೂ ಕೆಲವರು ನೀವು ಕೌಂಟರ್ನಲ್ಲೇ ಇರಬೇಕು, ಅದನ್ನು ಬಿಟ್ಟು ಬೇರೆ ಅಲ್ಲಿ ಇಲ್ಲಿ ಸುತ್ತಾಡಿದರೆ ನಾವೇಕೆ ಹಣ ಕೊಡಬೇಕು ಎಂದು ನಮ್ಮನ್ನೇ ದಬಾಯಿಸುತ್ತಾರೆ’ ಎಂಬುದು ಮಹಿಳೆಯ ದೂರು.

ಮತ್ಸ್ಯಾಲಯದ ಒಳಗೆ ಹಾಗೂ ಹೊರಭಾಗದಲ್ಲಿ ಸಣ್ಣ ಕಾರಂಜಿ ನಿರ್ಮಿಸಿ ಅಂದ ಹೆಚ್ಚಿಸುವ ಪ್ರಯತ್ನ ಹಿಂದೆ ನಡೆದಿರುವ ಬಗ್ಗೆ ಈ ಆವರಣದಲ್ಲಿ ಕುರುಹುಗಳಿವೆ. ಆದರೆ, ಯಾವುದೂ ಈಗ ಕೆಲಸ ಮಾಡುತ್ತಿಲ್ಲ. ಇರುವ ಮೀನುಗಳ ಬಗ್ಗೆ ಸರಿಯಾದ ವಿವರ ನೀಡುವ ವ್ಯವಸ್ಥೆಯೂ ಇಲ್ಲ. ಸುಮ್ಮನೆ ಪಾರ್ಕ್ ಒಳಗೆ ಬಂದಾಗ ಸಮಯ ಇದ್ದರೆ ಒಮ್ಮೆ ಒಳಗಡೆ ಬಂದು ಹೋಗಬಹುದು ಅಷ್ಟೇ.

ಈಚೆಗೆ ಪಾರ್ಕ್ ಒಳಗೆ ಮಕ್ಕಳ ಆಟಿಕೆಗಳನ್ನು ಹೊಸದಾಗಿ ಹಾಕಿರುವುದರಿಂದ ಮತ್ಸ್ಯಾಲಯಕ್ಕೆ ಬರುವವರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಮಕ್ಕಳು ಅಲ್ಲೇ ಆಟವಾಡಿ ಮರಳಿ ಮನೆಗೆ ಹೋಗುತ್ತಾರೆ. ಅದೂ ಇಲ್ಲದಿದ್ದಾಗ ಮಕ್ಕಳೆಲ್ಲರೂ ಮತ್ಸ್ಯಾಲಯಕ್ಕೆ ಬರುತ್ತಿದ್ದರು. ಇಂಥವರಲ್ಲಿ ಕೆಲವರನ್ನು ನಿಭಾಯಿಸುವುದೇ ಕಷ್ಟವಾಗುತ್ತಿತ್ತು ಎಂದು ಸಿಬ್ಬಂದಿ ಹೇಳುತ್ತಾರೆ. ಒಟ್ಟಾರೆ ಇರುವ ಒಂದು ಮತ್ಸ್ಯಾಲಯ ಅಂದ ಕಳೆದುಕೊಳ್ಳಲು ಅಧಿಕಾರಿಗಳು ಮತ್ತು ಜನರು ಸಮಾನ ಕಾರಣರು ಎಂಬಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.