ಶುಕ್ರವಾರ, ಏಪ್ರಿಲ್ 23, 2021
21 °C

ನಿಲುಗಡೆ ಕೊಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ಇಂಟರ್‌ಸಿಟಿ ರೈಲಿಗೆ ಯಶವಂತಪುರದಲ್ಲಿ ನಿಲುಗಡೆ ಕೊಡುವುದಿಲ್ಲ. ಬೆಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಹೆಚ್ಚುತ್ತಿರುವ ಒತ್ತಡದಿಂದಾಗಿ ಬಹಳಷ್ಟು ರೈಲುಗಳನ್ನು ಯಶವಂತಪುರದಿಂದಲೇ ಆರಂಭಿಸಲಾಗುತ್ತಿದೆ.

 

ಉತ್ತರಭಾರತದ ಅನೇಕ ಕಡೆ ತೆರಳುವ ಪ್ರಯಾಣಿಕರು ಇದರಿಂದಾಗಿ ಕಷ್ಟ ಅನುಭವಿಸಬೇಕಾಗಿದೆ. ಹಾಗೆಯೇ ಉತ್ತರಭಾರತದಿಂದ ಆಗಮಿಸಿದ ಚಿಕ್ಕಮಗಳೂರು, ಶಿವಮೊಗ್ಗದೆಡೆಗೆ ತೆರಳುವ ಪ್ರಯಾಣಿಕರು ಯಶವಂತಪುರದಿಂದ ಕೇಂದ್ರ ರೈಲು ನಿಲ್ದಾಣಕ್ಕೆ ಬಂದು ಶಿವಮೊಗ್ಗ ಇಂಟರ್‌ಸಿಟಿ ಹತ್ತಬೇಕಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಯಶವಂತಪುರದಲ್ಲಿ ಕೇವಲ ಒಂದೆರಡು ನಿಮಿಷದ ನಿಲುಗಡೆ ಕೊಟ್ಟಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ವಾರದಲ್ಲಿ ಕನಿಷ್ಠ ಐದು ಬಾರಿ ಈ ರೈಲಿಗೆ ಅನಧಿಕೃತವಾಗಿ ನಿಲ್ದಾಣದಲ್ಲಿ ಇಲ್ಲವೇ, ಸಿಗ್ನಲ್ ನಿರೀಕ್ಷೆಯಲ್ಲಿ ನಿಲ್ದಾಣದ ಹೊರಭಾಗದಲ್ಲಿ ನಿಲುಗಡೆ ಕೊಡಲಾಗುತ್ತಿದೆ.

 

ನಿಲುಗಡೆಯಾಗುತ್ತದೋ ಇಲ್ಲವೋ ಎಂಬ ಧಾವಂತದಲ್ಲಿ ಪ್ರಯಾಣಿಕರು ರೈಲಿನ ಬಾಗಿಲ ಬಳಿ ಬಂದು ನಿರೀಕ್ಷಿಸುವುದನ್ನು ನೋಡಬಹುದು. ಕೆಲವರು ಕೆಟ್ಟ ಧೈರ್ಯ ಮಾಡಿ ನಿಧಾನವಾಗಿ ಚಲಿಸುತ್ತಿರುವ  ರೈಲಿಂದ ಜಿಗಿಯುವುದೂ ಇದೆ. ಪ್ರಯಾಣಿಕರ ಹಿತದೃಷ್ಟಿಯಿಂದ ನಿಲುಗಡೆಗೆ ಇಲಾಖೆ ಗಮನಹರಿಸಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.