ಬೆಂಗಳೂರು: ಬಳ್ಳಾರಿಯ ದೋಣಿಮಲೈ ಪ್ರದೇಶದಲ್ಲಿ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್ಎಂಡಿಸಿ) ಗುತ್ತಿಗೆ ಪ್ರದೇಶದಲ್ಲಿ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ (ಡಿಎಂಎಸ್) ಗಣಿ ಕಂಪೆನಿ ನಡೆಸಿದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎನ್. ವಿಶ್ವನಾಥನ್ ಸೇರಿದಂತೆ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಗಣಿ ಕಂಪೆನಿ ಮಾಲೀಕ ರಾಜೇಂದ್ರ ಜೈನ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಿತೇಶ್ ಜೈನ್ ಮತ್ತು ಸಂಡೂರಿನ ಹಿಂದಿನ ಪೊಲೀಸ್ ಇನ್ಸ್ಪೆಕ್ಟರ್ ಎಚ್.ರಮಾಕಾಂತ್ ಬಂಧಿತ ಇತರರು. ಸಿಬಿಐ ಪೊಲೀಸರ ಕೋರಿಕೆಯಂತೆ ಎಲ್ಲ ಆರೋಪಿಗಳನ್ನೂ ಎಂಟು ದಿನಗಳ ಕಾಲ ತನಿಖಾ ತಂಡದ ವಶಕ್ಕೆ ನೀಡಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

`ಡಿಎಂಎಸ್ 1999ರಿಂದ 2010ರವರೆಗೂ ಎನ್ಎಂಡಿಸಿ ಗುತ್ತಿಗೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದೆ. ಈ ಅವಧಿಯಲ್ಲಿ 60 ಲಕ್ಷ ಟನ್ ಕಬ್ಬಿಣದ ಅದಿರನ್ನು ಎನ್ಎಂಡಿಸಿ ಗುತ್ತಿಗೆ ಪ್ರದೇಶದಿಂದ ಡಿಎಂಎಸ್ ಕಳ್ಳಸಾಗಣೆ ಮಾಡಿದೆ ಎಂಬುದು ಸಿಬಿಐ ತನಿಖೆಯಲ್ಲಿ ಪತ್ತೆಯಾಗಿದೆ. ಇದರಿಂದ ಎನ್ಎಂಡಿಸಿಗೆ 1,200 ಕೋಟಿ ರೂಪಾಯಿ ನಷ್ಟ ಉಂಟಾಗಿದೆ' ಎಂದು ತನಿಖಾ ತಂಡ ಅಂದಾಜಿಸಿದೆ.

ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಸುಪ್ರೀಂಕೋರ್ಟ್, ಡಿಎಂಎಸ್ ವಿರುದ್ಧ 2011ರ ಸೆಪ್ಟೆಂಬರ್ನಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಬೆಂಗಳೂರಿನ ಸಿಬಿಐ ಭ್ರಷ್ಟಾಚಾರ ನಿಯಂತ್ರಣ ಘಟಕದ ಅಧಿಕಾರಿಗಳು ನಡೆಸಿದ ತನಿಖೆ ಸಂದರ್ಭದಲ್ಲಿ ದೊರೆತ ಪ್ರಬಲ ಸಾಕ್ಷ್ಯಗಳ ಆಧಾರದಲ್ಲಿ ನಾಲ್ವರನ್ನೂ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಕ್ಷೆ ಬದಲಿಸಿ ಅಕ್ರಮ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕಮ್ಮತೆರವು ಗ್ರಾಮದಲ್ಲಿ ಡಿಎಂಎಸ್ 50 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಹೊಂದಿತ್ತು. ಅದಕ್ಕೆ ಹೊಂದಿಕೊಂಡಿರುವ ಕುಮಾರಸ್ವಾಮಿ ಮತ್ತು ಸುಬ್ಬರಾಯನಹಳ್ಳಿಯಲ್ಲಿ ಸೇರಿ 1,750 ಎಕರೆ ವಿಸ್ತೀರ್ಣದಲ್ಲಿ ಎನ್ಎಂಡಿಸಿ ಗಣಿ ಗುತ್ತಿಗೆ ಹೊಂದಿದೆ. 1999ರಲ್ಲಿ ಡಿಎಂಎಸ್ ಗುತ್ತಿಗೆ ಅವಧಿ ಅಂತ್ಯಗೊಂಡಿತ್ತು.

ಗುತ್ತಿಗೆ ನವೀಕರಣಕ್ಕಾಗಿ ಡಿಎಂಎಸ್ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ನಿಗದಿತ ಷರತ್ತುಗಳನ್ನು ಪೂರೈಸಿದಲ್ಲಿ ಮಾತ್ರವೇ ರಾಜ್ಯ ಸರ್ಕಾರ ಗುತ್ತಿಗೆಯನ್ನು ನವೀಕರಿಸಲು ಕಾನೂನಿನಲ್ಲಿ ಅವಕಾಶ ಇದೆ. ಗುತ್ತಿಗೆಯ ನಕ್ಷೆ ಬದಲಾವಣೆಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಅದನ್ನು ಕೇಂದ್ರ ಸರ್ಕಾರ ಮಾತ್ರ ಮಾಡಬಹುದು. 1999ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ವಿಶ್ವನಾಥನ್, ಡಿಎಂಎಸ್ ಗಣಿ ಗುತ್ತಿಗೆ ಪ್ರದೇಶ ಎನ್ಎಂಡಿಸಿ ಗುತ್ತಿಗೆ ಪ್ರದೇಶದಲ್ಲಿದೆ ಎಂಬಂತೆ ನಕ್ಷೆ ಬದಲಿಸಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಅಕ್ರಮವಾಗಿ ಬದಲಿಸಿದ ನಕ್ಷೆಯನ್ನು ಬಳಸಿಕೊಂಡು ಡಿಎಂಎಸ್ ದೊಡ್ಡ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸಿದೆ. ಎನ್ಎಂಡಿಸಿಯ ಗಣಿ ಪ್ರದೇಶದಲ್ಲಿ ಅವ್ಯಾಹತವಾಗಿ ಅದಿರು ಕದ್ದು, ಸಾಗಣೆ ಮಾಡಿತ್ತು. 2010ರ ಜುಲೈ 27ರಿಂದ ಕರ್ನಾಟಕದಲ್ಲಿ ಗಣಿಗಾರಿಕೆ ಮತ್ತು ಅದಿರು ಸಾಗಣೆ ನಿಷೇಧವಾದ ಬಳಿಕವೂ ಈ ಡಿಎಂಎಸ್ ಅಕ್ರಮ ಗಣಿಗಾರಿಕೆ ಮುಂದುವರಿಸಿತ್ತು. ನಿಷೇಧ ಜಾರಿಯಲ್ಲಿದ್ದ ಅವಧಿಯಲ್ಲೂ 40 ಸಾವಿರ ಟನ್ಗೂ ಹೆಚ್ಚು ಪ್ರಮಾಣದ ಅದಿರನ್ನು ವಿದೇಶಗಳಿಗೆ ರಫ್ತು ಮಾಡಿತ್ತು ಎಂಬುದನ್ನು ದೃಢಪಡಿಸಬಲ್ಲ ಸಾಕ್ಷ್ಯಗಳನ್ನು ಸಿಬಿಐ ಕಲೆಹಾಕಿದೆ.

ಆರು ಅಧಿಕಾರಿಗಳು ಬಲೆಗೆ
ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಸಿಬಿಐ ಪೊಲೀಸರಿಂದ ಬಂಧಿತರಾಗಿರುವ ಅಧಿಕಾರಿಗಳ ಸಂಖ್ಯೆ ಆರಕ್ಕೇರಿದೆ. ಹಿಂದೆ ಸಿಬಿಐ ಬಂಧಿಸಿರುವ ನಾಲ್ವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದುವರೆಗೆ ಇಬ್ಬರು ಐಎಫ್ಎಸ್ ಅಧಿಕಾರಿಗಳು ಮತ್ತು ರಾಜ್ಯ ಸೇವೆಯ ಮೂವರು ಅಧಿಕಾರಿಗಳನ್ನು ವಿವಿಧ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಮೊದಲ ಬಾರಿಗೆ ನಿವೃತ್ತ ಐಎಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ.

ಡಿಎಂಎಸ್ ಪ್ರಕರಣದಲ್ಲಿ ಇನ್ನೂ ಒಬ್ಬ ಐಎಎಸ್ ಅಧಿಕಾರಿ ಭಾಗಿಯಾಗಿರುವ ಕುರಿತು ತನಿಖೆ ಮುಂದುವರಿದಿದೆ. ಐಎಫ್ಎಸ್ ಅಧಿಕಾರಿಗಳಾದ ಮನೋಜ್ಕುಮಾರ್ ಶುಕ್ಲಾ, ಎಸ್.ಮುತ್ತಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್.ರಾಜು, ಸಂಡೂರಿನ ಹಿಂದಿನ ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ್ ಅವರನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.